Select Your Language

Notifications

webdunia
webdunia
webdunia
webdunia

ಹಣಕ್ಕಾಗಿ ತನ್ನದೇ ಕಿಡ್ನ್ಯಾಪ್ ಕತೆ ಕಟ್ಟಿದ ಭೂಪ

ಅಪಹರಣ
ಚೆನ್ನೈ , ಗುರುವಾರ, 18 ನವೆಂಬರ್ 2021 (09:23 IST)
ಚೆನ್ನೈ: ಹಣಕ್ಕಾಗಿ ತಾನೇ ಕಿಡ್ನ್ಯಾಪ್ ಆಗಿರುವುದಾಗಿ ಕತೆ ಕಟ್ಟಿದ ವ್ಯಕ್ತಿಯೊಬ್ಬನನ್ನು ಇದೀಗ ತಮಿಳುನಾಡು ಪೊಲೀಸರು ಬಂಧಿಸಿದ್ದಾರೆ.

27 ವರ್ಷದ ಯುವಕ ಸ್ನೇಹಿತರ ಸಹಾಯದಿಂದ 53 ವರ್ಷದ ತನ್ನ ಮಾವನಿಗೆ ಕರೆ ಮಾಡಿ ಕಿಡ್ನ್ಯಾಪ್ ಆಗಿರುವುದಾಗಿ ಸುಳ್ಳು ಕರೆ ಮಾಡಿದ್ದ. ಅಲ್ಲದೆ, ಮಾವನನ್ನು ನಂಬಿಸಲು ರಕ್ತದ ಕಲೆ ಇರುವ ತನ್ನ ಫೋಟೋ ವ್ಯಾಟ್ಸಪ್ ಮೂಲಕ ಕಳುಹಿಸಿ 10 ಲಕ್ಷ ರೂ.ಗೆ ಬೇಡಿಕೆಯಿಟ್ಟಿದ್ದ.

ಅಳಿಯನ ಸ್ಥಿತಿ ಕಂಡು ಗಾಬರಿಯಾದ ಮಾವ ಪೊಲೀಸರ ಸಹಾಯ ಕೋರಿದ್ದ. ಅದರಂತೆ ಕರೆಯ ಜಾಡು ಹಿಡಿದು ಅಪಹರಣಕಾರರನ್ನು ತಲಾಷ್ ಮಾಡಿದಾಗ ಪೊಲೀಸರಿಗೆ ನಿಜಾಂಶ ತಿಳಿದುಬಂದಿದೆ. ಇದೀಗ ಆರೋಪಿ ಯುವಕ ಮತ್ತು ಆತನ ನಾಲ್ವರು ಸ್ನೇಹಿತರನ್ನು ಪೊಲೀಸರು ಬಂಧಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ರಾಜ್ಯದ ಕರಾವಳಿ, ಮಲೆನಾಡು ಹಾಗೂ ದಕ್ಷಿಣ ಒಳನಾಡಿನಲ್ಲಿ ಮೋಡ ಕವಿದ ವಾತಾವರಣ