Webdunia - Bharat's app for daily news and videos

Install App

ಪತಿಯನ್ನು ಕೊಂದು ಶೌಚಾಲಯದ ಗುಂಡಿಯಲ್ಲಿ ಹೂತಿಟ್ಟ ಪತ್ನಿ!

Webdunia
ಭಾನುವಾರ, 27 ನವೆಂಬರ್ 2022 (11:14 IST)
ಚಂಡೀಗಢ : ಪ್ರಿಯಕರನ ಜೊತೆ ಸೇರಿ ಮಹಿಳೆಯೊಬ್ಬಳು ತನ್ನ ಪತಿಯ ಕತ್ತು ಹಿಸುಕಿ ಕೊಂದು 25 ಅಡಿ ಆಳದ ಶೌಚಾಲಯದ ಗುಂಡಿಯಲ್ಲಿ ಶವವನ್ನು ಹೂತು ಹಾಕಿರುವ ಘಟನೆ ಪಂಜಾಬ್ನ ಸಂಗ್ರೂರ್ ಜಿಲ್ಲೆಯಲ್ಲಿ ನಡೆದಿದೆ.

ಬಕ್ಷೀವಾಲಾ ನಿವಾಸಿ ಅಮ್ರಿಕ್ ಸಿಂಗ್ ಮೃತ ದುರ್ದೈವಿಯಾಗಿದ್ದು, ಸುಮಾರು ಒಂದು ತಿಂಗಳ ಬಳಿಕ ಈ ಪ್ರಕರಣ ಬೆಳಕಿಗೆ ಬಂದಿದ್ದು, ಶನಿವಾರ ಮೃತದೇಹವನ್ನು ಶೌಚಾಲಯದ ಗುಂಡಿಯಿಂದ ಹೊರ ತೆಗೆಯಲಾಗಿದೆ. 

ಆರೋಪಿಯನ್ನು 35 ವರ್ಷದ ರಜ್ಜಿ ಕೌರ್ ಅಲಿಯಾಸ್ ಜಸ್ವಿರ್ ಕೌರ್ ಎಂದು ಗುರುತಿಸಲಾಗಿದ್ದು, ತನ್ನ 13 ಮತ್ತು 11 ವರ್ಷದ ಇಬ್ಬರು ಗಂಡು ಮಕ್ಕಳೊಂದಿಗೆ ವಾಸಿಸುತ್ತಿದ್ದಳು.

ನವೆಂಬರ್ 20 ರಂದು ತನ್ನ ಪತಿ ನಾಪತ್ತೆಯಾಗಿರುವುದಾಗಿ ಪತಿಗೆ ದೂರು ನೀಡಿದ್ದಾಳೆ. ಪ್ರಕರಣ ಸಂಬಂಧ ತನಿಖೆ ವೇಳೆ ಕೌರ್ ಅದೇ ಪ್ರದೇಶದ ನಿವಾಸಿ ಸುರ್ಜಿತ್ ಸಿಂಗ್ ಬಗ್ಗಾ ಎಂಬಾತನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ವಿಚಾರ ಬಯಲಾಗಿದೆ.

ಪ್ರಿಯಕರ ಸುರ್ಜಿತ್ ಜೊತೆ ಸೇರಿ ತನ್ನ ಪತಿಯನ್ನು ಅಕ್ಟೋಬರ್ 27ರಂದು ಕೊಂದಿರುವುದಾಗಿ ಮಹಿಳೆ ತಪ್ಪೊಪ್ಪಿಕೊಂಡಿದ್ದಾಳೆ ಎಂದು ಸಂಗ್ರೂರ್ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (ಎಸ್ಎಸ್ಪಿ) ಸುರೇಂದ್ರ ಲಂಬಾ ತಿಳಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments