Select Your Language

Notifications

webdunia
webdunia
webdunia
webdunia

ಹಾವು ಕಚ್ಚಿತೆಂಬ ಕೋಪಕ್ಕೆ ಹಾವನ್ನೇ ಮರಳಿ ಕಚ್ಚಿದ ಬಾಲಕ!

ಹಾವು ಕಚ್ಚಿತೆಂಬ ಕೋಪಕ್ಕೆ ಹಾವನ್ನೇ ಮರಳಿ ಕಚ್ಚಿದ ಬಾಲಕ!
ಚಂಡೀಗಢ , ಶನಿವಾರ, 5 ನವೆಂಬರ್ 2022 (10:40 IST)
ಚಂಡೀಗಢ : ಸಾಮಾನ್ಯವಾಗಿ ಹಾವು ಕಚ್ಚಿದರೆ ಮನುಷ್ಯ ಬದುಕುಳಿಯುವುದೇ ಕಷ್ಟ. ಆದರೆ, ಬಾಲಕನೋರ್ವ ತನಗೆ ಕಚ್ಚಿದ ಹಾವನ್ನೇ ಪ್ರತಿಯಾಗಿ ಕಚ್ಚಿ ಕೊಂದಿರುವ ವಿಚಿತ್ರ ಘಟನೆ ಛತ್ತೀಸ್ಗಢದಲ್ಲಿ ನಡೆದಿದೆ.
 
ಹೌದು, ಛತ್ತೀಸ್ಗಢದ ಜಶ್ಪುರ ಜಿಲ್ಲೆಯ ಎಂಟು ವರ್ಷದ ದೀಪಕ್ ಎಂಬ ಬಾಲಕ ಮನೆಯ ಹಿತ್ತಲಿನಲ್ಲಿ ಆಟವಾಡುತ್ತಿದ್ದ ವೇಳೆ ಇದ್ದಕ್ಕಿದ್ದಂತೆ ನಾಗರ ಹಾವೊಂದು ಆತನ ಕೈಗೆ ಸುತ್ತಿಕೊಂಡು ಎರಡು ಬಾರಿ ಕಚ್ಚಿದೆ.

ಈ ವೇಳೆ ಹಾವಿನಿಂದ ಬಿಡಿಸಿಕೊಳ್ಳಲಾಗದೇ, ಕೊನೆಗೆ ವಿಷಪೂರಿತ ಹಾವಿಗೆ ಬಾಲಕ ಕೂಡ ಎರಡು ಬಾರಿ ಕಚ್ಚಿ, ಅದನ್ನು ಕೊಂದಿದ್ದಾನೆ.

ಈ ಘಟನೆ ಸಂಬಂಧ ಮಾಧ್ಯಮದವರೊಂದಿಗೆ ಮಾತನಾಡಿದ ದೀಪಕ್, ಹಾವು ನನ್ನ ಕೈಗೆ ಸುತ್ತಿಕೊಂಡು ಕಚ್ಚಿತು. ಇದರಿಂದ ನನಗೆ ಬಹಳ ನೋವಾಯಿತು.

ಹಾವಿನಿಂದ ನನ್ನನ್ನು ಬಿಡಿಸಿಕೊಳ್ಳು ಸಾಕಷ್ಟು ಪ್ರಯತ್ನಿಸಿದೆ. ಆದರೆ ಅದು ಅಲುಗಾಡಲೇ ಇಲ್ಲ. ಕೊನೆಗೆ ಹಾವಿಗೆ ಎರಡು ಬಾರಿ ಕಚ್ಚಿದೆ. ಇದೆಲ್ಲವೂ ಕ್ಷಣಾರ್ಧದಲ್ಲಿ ಸಂಭವಿಸಿತು ಎಂದು ಬಾಲಕ ತಿಳಿಸಿದ್ದಾನೆ.

Share this Story:

Follow Webdunia kannada

ಮುಂದಿನ ಸುದ್ದಿ

ರಾಜ್ಯದಲ್ಲಿ 10.5 ಲಕ್ಷ ಕೋಟಿ ಹೂಡಿಕೆ