Publish Date: Thu, 07 Mar 2019 (07:11 IST)
Updated Date: Thu, 07 Mar 2019 (07:12 IST)
ತಿರುವನಂತಪುರಂ : ಯೂನಿಫಾರಂ ಯಾಕೆ ಧರಿಸಿಲ್ಲ ಎಂದು ಕೇಳಿದ್ದಕ್ಕೆ ಶಿಕ್ಷಕನ ಮೇಲೆ ವಿದ್ಯಾರ್ಥಿಯೊಬ್ಬ ಹಲ್ಲೆ ಮಾಡಿದ ಘಟನೆ ಕೇರಳಾದ ಕಟ್ಟಪ್ಪನದಲ್ಲಿ ನಡೆದಿದೆ.
ಅಭಿನ್ ಸುರೇಶ್(19) ಶಿಕ್ಷಕನ ಮೇಲೆ ಹಲ್ಲೆ ಮಾಡಿದ ವಿದ್ಯಾರ್ಥಿ. ಜಯದೇವ್ ಹಲ್ಲೆಗೊಳಗಾದ ಭೂಗೋಳ ಶಿಕ್ಷಕ. ಅಭಿನ್ ಹಾಲ್ ಟಿಕೆಟ್ ಪಡೆಯಲು ಯೂನಿಫಾರಂ ಧರಿಸದೇ ಶಾಲೆಗೆ ಹೋಗಿದ್ದನು. ಆಗ ಜಯದೇವ್ ಯೂನಿಫಾರಂ ಏಕೆ ಧರಿಸಿಲ್ಲ. ಅಲ್ಲದೇ ಶಿಸ್ತಿನಿಂದ ನಡೆದುಕೋ ಎಂದು ಎಚ್ಚರಿಸಿದ್ದಾರೆ. ಇದರಿಂದ ಕೋಪಗೊಂಡ ಅಭಿನ್ ಶಿಕ್ಷಕ ಜಯದೇವ್‍ಗೆ ಕಪಾಳಕ್ಕೆ ಹೊಡೆದು ಹಲ್ಲೆ ಮಾಡಿದ್ದಾನೆ. ಇದರಿಂದ ಶಿಕ್ಷಕನ ಕೆನ್ನೆ ಹಾಗೂ ಕಿವಿಗೆ ಗಾಯಗಳಾಗಿದೆ.
ಅಭಿನ್ ವಿರುದ್ಧ ಶಿಕ್ಷಕರು ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಆಗಮಿಸಿದ ಪೊಲೀಸರು ಅಭಿನ್ ನನ್ನು ಬಂಧಿಸಿ ವಿಚಾರಣೆಗೆ ಕರೆದುಕೊಂಡು ಹೋಗಿದ್ದಾರೆ. ಸದ್ಯ ಹಲ್ಲೆಯಿಂದ ತೀವ್ರವಾಗಿ ಗಾಯಗೊಂಡ ಜಯದೇವ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.