Select Your Language

Notifications

webdunia
webdunia
webdunia
webdunia

ಪ್ರಧಾನಿ ಮೋದಿ ಭೇಟಿಗಾಗಿ 815 ಕಿ.ಮೀ ಪಾದಯಾತ್ರೆ ಕೈಗೊಂಡ ಶ್ರೀನಗರ ಯುವಕ

ಪ್ರಧಾನಿ ಮೋದಿ ಭೇಟಿಗಾಗಿ 815 ಕಿ.ಮೀ ಪಾದಯಾತ್ರೆ ಕೈಗೊಂಡ ಶ್ರೀನಗರ ಯುವಕ
ಶ್ರೀನಗರ , ಸೋಮವಾರ, 23 ಆಗಸ್ಟ್ 2021 (08:27 IST)
ಶ್ರೀನಗರ: ಪ್ರಧಾನಿ ನರೇಂದ್ರ ಮೋದಿಯವರ ಅಭಿಮಾನಿಯೊಬ್ಬರು ಅವರ ಭೇಟಿಗೆ ಶ್ರೀನಗರದಿಂದ ದೆಹಲಿಗೆ 815 ಕಿ.ಮೀ ಪಾದಯಾತ್ರೆ ಕೈಗೊಂಡಿದ್ದಾರೆ.

ಈ ಮೂಲಕ ಪ್ರಧಾನಿ ಗಮನ ಸೆಳೆದು ಭೇಟಿಗೆ ಅವಕಾಶ ಪಡೆಯುವುದು 28 ವರ್ಷ ವಯಸ್ಸಿನ ಫಹೀಮ್ ನಜೀರ್ ಶಾ ಅವರ ಉದ್ದೇಶವಾಗಿದೆ. ವೃತ್ತಿಯಲ್ಲಿ ಎಲೆಕ್ಟ್ರಿಶಿಯನ್ ಆಗಿರುವ ಫಹೀಮ್, ಜಮ್ಮು-ಕಾಶ್ಮೀರದ ಶ್ರೀನಗರದ ಶಾಲಿಮಾರ್ ಪ್ರದೇಶದವರು. ಅವರು ಈಗಾಗಲೇ 200 ಕಿ.ಮೀ ಕ್ರಮಿಸಿ ಭಾನುವಾರ ಉಧಮ್ಪುರ್ ತಲುಪಿದ್ದಾರೆ.
'ನಾನು ಮೋದಿಯವರನ್ನು ಭೇಟಿಯಾಗುವ ಸಲುವಾಗಿ ದೆಹಲಿಗೆ ಪಾದಯಾತ್ರೆ ನಡೆಸುತ್ತಿದ್ದೇನೆ. ಅವರ ಗಮನ ಸೆಳೆಯುವ ಭರವಸೆಯಿದೆ. ಪ್ರಧಾನಿಯವರನ್ನು ಭೇಟಿಯಾಗುವುದು ನನ್ನ ಕನಸು' ಎಂದು ನಜೀರ್ ಶಾ ಹೇಳಿದ್ದಾರೆ. ಮೋದಿಯವರನ್ನು ಭೇಟಿಯಾಗುವ ಈ ಹಿಂದಿನ ಯತ್ನಗಳು ಫಲಿಸಿರಲಿಲ್ಲ ಎಂದೂ ಅವರು ಹೇಳಿದ್ದಾರೆ.
ಕಳೆದ ನಾಲ್ಕು ವರ್ಷಗಳಿಂದ ಪ್ರಧಾನಿಯವರನ್ನು ಸಾಮಾಜಿಕ ಜಾಲತಾಣಗಳಲ್ಲಿ ಫಾಲೋ ಮಾಡುತ್ತಿದ್ದೇನೆ. ಅವರ ಮಾತು ಮತ್ತು ಕಾರ್ಯಗಳು ನನ್ನ ಹೃದಯವನ್ನು ಸ್ಪರ್ಶಿಸಿವೆ ಎಂದು ಶಾ ಹೇಳಿದ್ದಾರೆ.
'ಒಮ್ಮೆ ಮೋದಿಯವರು ರ್ಯಾಲಿಯೊಂದರಲ್ಲಿ ಮಾತನಾಡುತ್ತಿದ್ದಾಗ ಅವರಿಗೆ 'ಆಜಾನ್' ಕೇಳಿಸಿತ್ತು. ಅವರು ಇದ್ದಕ್ಕಿದ್ದಂತೆ ಭಾಷಣ ನಿಲ್ಲಿಸಿ ಸಾರ್ವಜನಿಕರನ್ನು ಆಶ್ಚರ್ಯಚಕಿತರನ್ನಾಗಿಸಿದ್ದರು. ಪ್ರಧಾನಿಯವರ ಆ ನಡೆ ನನ್ನ ಹೃದಯಕ್ಕೆ ನಾಟಿತು. ಅಂದಿನಿಂದ ನಾನು ಮೋದಿಯವರ ಕಟ್ಟಾ ಅಭಿಮಾನಿಯಾದೆ' ಎಂದು ಶಾ ತಿಳಿಸಿದ್ದಾರೆ.
ಕಳೆದ ಎರಡೂವರೆ ವರ್ಷಗಳಲ್ಲಿ ದೆಹಲಿಯಲ್ಲಿ ಮೋದಿಯವರನ್ನು ಭೇಟಿಯಾಗಲು ಹಲವು ಪ್ರಯತ್ನಗಳನ್ನು ಮಾಡಿದ್ದೆ. ಮೋದಿ ಅವರ ಕಾಶ್ಮೀರ ಭೇಟಿ ಸಂದರ್ಭದಲ್ಲಿಯೂ ಅವರನ್ನು ಭೇಟಿಯಾಗಲು ಯತ್ನಿಸಿದ್ದೆ. ಆದರೆ ಭದ್ರತಾ ಸಿಬ್ಬಂದಿ ಅವಕಾಶ ನೀಡಿರಲಿಲ್ಲ ಎಂದು ಅವರು ಹೇಳಿದ್ದಾರೆ.
'ಈ ಬಾರಿ ನನಗೆ ಖಾತ್ರಿಯಿದೆ. ಪ್ರಧಾನಿಯವರನ್ನು ಭೇಟಿಯಾಗುವ ಅವಕಾಶ ದೊರೆಯಲಿದೆ' ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಹಳೇ ನಾಣ್ಯ ಮಾರಲಯ ಯತ್ನಿಸಿದ ಮಹಿಳೆಗೆ 1 ಲಕ್ಷ ರೂ. ವಂಚನೆ!