Select Your Language

Notifications

webdunia
webdunia
webdunia
webdunia

ಮದುವೆಗೆ ಹೆಣ್ಣನ್ನು ಹುಡುಕಲಿಲ್ಲ ಎಂದು ತಾಯಿಯನ್ನು ಬಡಿದು ಕೊಂದ ಮಗ!

ಮದುವೆಗೆ ಹೆಣ್ಣನ್ನು ಹುಡುಕಲಿಲ್ಲ ಎಂದು ತಾಯಿಯನ್ನು ಬಡಿದು ಕೊಂದ ಮಗ!
ಹೈದರಾಬಾದ್ , ಶುಕ್ರವಾರ, 25 ಆಗಸ್ಟ್ 2023 (09:57 IST)
ಹೈದರಾಬಾದ್ : ಮದುವೆಯಾಗಲು ಸೂಕ್ತ ಹೆಣ್ಣನ್ನು ಹುಡುಕಿಲ್ಲ ಎಂಬ ಕಾರಣಕ್ಕೆ ವ್ಯಕ್ತಿಯೊಬ್ಬ ತಾಯಿಯನ್ನೇ ಕೊಲೆಗೈದ ಘಟನೆ ತೆಲಂಗಾಣದ ಸಿದ್ದಿಪೇಟೆಯಲ್ಲಿ ನಡೆದಿದೆ.

ಕೊಲೆಗೆ ಸಂಬಂಧಿಸಿದಂತೆ ಮಹಿಳೆಯ ಮಗ ಹಾಗೂ ಇನ್ನೊಬ್ಬ ಸಂಬಂಧಿಯನ್ನು ಪೊಲೀಸರು ಬಂಧಿಸಿದ್ದಾರೆ. ಕೊಲೆಯ ಬಳಿಕ ಪೊಲೀಸರಿಗೆ ಅನುಮಾನ ಬರದಂತೆ ದರೋಡೆಗೆ ಯತ್ನಿಸಿ ಕೊಲೆಯಾದಂತೆ ಬಿಂಬಿಸಲು ಪ್ರಯತ್ನಿಸಿದ್ದಾರೆ.

ಅಲ್ಲದೇ ಗುರುತು ಸಿಗದಂತೆ ಮಹಿಳೆಯ ಕತ್ತು ಸೀಳಿ ಕೈಕಾಲುಗಳನ್ನು ಕತ್ತರಿಸಿದ್ದಾರೆ. ಆದರೆ ಆರೋಪಿಯ ಸಹೋದರಿ ಈ ಬಗ್ಗೆ ಮಾಹಿತಿ ನೀಡಿದ್ದು ಬಂಧನಕ್ಕೆ ಸಹಕಾರಿಯಾಗಿದೆ.

ಮಹಿಳೆ ನೀಡಿದ ದೂರಿನಲ್ಲಿ ಆರೋಪಿಗಳು ಇಟ್ಟಿಗೆಯಿಂದ ಹಲ್ಲೆ ನಡೆಸಿ ತಾಯಿಯನ್ನು ಕೊಲೆಗೈದಿದ್ದಾರೆ ಎಂದು ಉಲ್ಲೇಖಿಸಲಾಗಿದೆ. ಈ ಬಗ್ಗೆ ತನಿಖೆಯ ಸಂದರ್ಭದಲ್ಲಿ ಆರೋಪಿಗಳು ಕೃತ್ಯವನ್ನು ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

 

Share this Story:

Follow Webdunia kannada

ಮುಂದಿನ ಸುದ್ದಿ

ನಿಮ್ಮ ಅಸಾಧಾರಣ ಕೌಶಲ್ಯವನ್ನ ಜಗತ್ತಿಗೆ ತೋರಿಸಿದ್ದೀರಿ : ಪ್ರಜ್ಞಾನಂದಗೆ ಮೋದಿ ಅಭಿನಂದನೆ