Webdunia - Bharat's app for daily news and videos

Install App

ಕೊಡಲಿಯಿಂದ ತಂದೆ ಕತ್ತು ಸೀಳಿ ಫೆವಿಕ್ವಿಕ್ ನಿಂದ ಜೋಡಿಸಲು ಯತ್ನಿಸಿದ ಮಗ!

Webdunia
ಸೋಮವಾರ, 26 ಫೆಬ್ರವರಿ 2018 (06:57 IST)
ಲಕ್ನೋ: ಮಗನೊಬ್ಬ ತಂದೆಯ ಕುತ್ತಿಗೆಗೆ ಭಾಗಕ್ಕೆ ಕೊಡಲಿಯಿಂದ ಹಲ್ಲೆ ನಡೆಸಿ, ನಂತರ ಫೆವಿಕ್ವಿಕ್ ನಿಂದ ಸೀಳಿದ ಕತ್ತಿನ ಭಾಗವನ್ನು ಜೋಡಿಸಲು ಮುಂದಾದ ದಾರುಣ ಘಟನೆಯೊಂದು ಉತ್ತರ ಪ್ರದೇಶ ರಾಜ್ಯದ ಬಸ್ತಿ ಜಿಲ್ಲೆಯಲ್ಲಿ ನಡೆದಿದೆ.


ಜಗದೀಶ್ ಮಿಶ್ರಾ ಎಂಬಾತ ತಂದೆ ರಾಮದೇವ್ ಮಿಶ್ರಾ  ಮೇಲೆ ಹಲ್ಲೆ ಮಾಡಿದ ಮಗ. ಮನೆಯಲ್ಲಿಯೇ ಇದ್ದ ಕೊಡಲಿಯಿಂದ ತಂದೆಯ ಕುತ್ತಿಗೆಯ ಮೇಲೆ ಹಲ್ಲೆ ನಡೆಸಿದ್ದಾನೆ. ಮೊದಲಿಗೆ ಒಂದೇ ಏಟಿಗೆ ತಂದೆ ಸಾವನ್ನಪ್ಪಿದ್ದಾರೆ ಎಂದು ತಿಳಿದಿದ್ದಾನೆ. ಕೆಲವೇ ಕ್ಷಣದಲ್ಲಿ ತಂದೆ ಉಸಿರಾಟ ಮತ್ತು ಚೀರಾಟ ಕೇಳಿದ ಮಗ ಜಗದೀಶ್ ‘ಫೆವಿಕ್ವಿಕ್’ ಸಹಾಯದಿಂದ ಸೀಳಿರುವ ಭಾಗವನ್ನು ಜೋಡಿಸಲು ಮುಂದಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.



ರೈಲ್ವೆ ಇಲಾಖೆಯ ನಿವೃತ್ತ ನೌಕರರಾಗಿರುವ ರಾಮ್‍ದೇವ್ ಮಗನೊಂದಿಗೆ ಸೋನಹಾ ಇಲಾಖೆಯ ದರಿಯಾಪುರ ಅರಣ್ಯ ಪ್ರದೇಶದ ಗ್ರಾಮದಲ್ಲಿ ವಾಸವಾಗಿದ್ದರು. ರಾಮ್‍ದೇವ್ ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದು, ಮಂಚದ ಕೆಳಗೆಯೇ ಮಲ ವಿಸರ್ಜನೆ ಮಾಡಿದ್ದಾರೆ. ಇದರಿಂದ ಕೋಪಗೊಂಡ ಜಗದೀಶ್ ತಂದೆಯ ವಿರುದ್ಧ ಕೂಗಾಡಿದ್ದಾನೆ. ಇದೇ ವೇಳೆ ಕೊಡಲಿಯಿಂದ ತಂದೆಯ ಕತ್ತಿನ ಭಾಗಕ್ಕೆ ಹೊಡೆದಿದ್ದಾನೆ.


ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ. ಪತ್ನಿಯೊಂದಿಗೆ ನಾಪತ್ತೆಯಾಗಿರುವ ಮಗ ಜಗದೀಶ್ ನಿಗಾಗಿ ಪೊಲೀಸರು ಹುಡುಕುತ್ತಿದ್ದಾರೆ.. ಆಸ್ಪತ್ರೆಗೆ ದಾಖಲಾಗಿರುವ ರಾಮ್‍ದೇವ್ ಸ್ಥಿತಿ ಚಿಂತಾಜನಕವಾಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ನನ್ನ ಹೆಸರು ವೋಟರ್ ಲಿಸ್ಟ್ ನಲ್ಲಿಲ್ಲ ಎಂದು ಸುಳ್ಳು ಹೇಳಿದ್ರಾ ತೇಜಸ್ವಿ ಯಾದವ್

ಜಾರ್ಖಾಂಡ್ ಮಾಜಿ ಸಿಎಂ ಶಿಬು ಸೊರೇನ್ ಇನ್ನಿಲ್ಲ

ವೋಟ್ ಗಾಗಿ ಟಿಪ್ಪು ಸಂತತಿಯನ್ನು ವೈಭವೀಕರಿಸೋದು ಕಾಂಗ್ರೆಸ್ ಜಾಯಮಾನ: ವಿಜಯೇಂದ್ರ

ಸೋನಿಯಾ ಗಾಂಧಿ ಪ್ರಧಾನಿ ಪದವಿ ಬಿಟ್ಟ ತ್ಯಾಗಮಯಿ ಎಂದು ಸಿದ್ದರಾಮಯ್ಯಗೆ ಡಿಕೆ ಶಿವಕುಮಾರ್ ಟಾಂಗ್

ಸುಧಾಮೂರ್ತಿ ಹೇಳುವ ಈ ಮೂರು ಜೀವನಪಾಠವನ್ನು ತಪ್ಪದೇ ಪಾಲಿಸಿ

ಮುಂದಿನ ಸುದ್ದಿ
Show comments