ಭುವನೇಶ್ವರ : ಪ್ರತಿ ವಿದ್ಯಾರ್ಥಿನಿಯರು ಫೆಬ್ರವರಿ 14ರಂದು ತಮ್ಮ ಬಾಯ್ಫ್ರೆಂಡ್ನೊಂದಿಗೆ ಕಾಲೇಜಿಗೆ ಬರಬೇಕು ಎಂದು ಕಾಲೀಜಿನ ಪ್ರಾಂಶುಪಾಲರು ಸಹಿ ಮಾಡಿದ್ದ ನಕಲಿ ನೋಟಿಸ್ನೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಒಡಿಶಾದ ಎಸ್ವಿಎಂ ಕಾಲೇಜಿನಲ್ಲಿ ಈ ಘಟನೆ ನಡೆದಿದೆ. ಆದರೆ ಕಾಲೇಜಿನ ಪ್ರಾಂಶುಪಾಲ ಬಿಜಯ್ ಕುಮಾರ್ ಪಾತ್ರಾ, ಘಟನೆಗೆ ಸಂಬಂಧಿಸಿ ಸ್ಪಷ್ಟೀಕರಣ ನೀಡಿದ್ದು, ಈ ನೋಟಿಸ್ ನಕಲಿ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲದೇ ಘಟನೆಗೆ ಸಂಬಂಧಿಸಿ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಫೆಬ್ರವರಿ 14ರಂದು ಪ್ರತಿಯೊಂದು ಹುಡುಗಿಯು ಗೆಳೆಯನನ್ನು ಕಾಲೇಜಿಗೆ ಕರೆತರಬೇಕು. ಇದನ್ನು ಭದ್ರತಾ ಉದ್ದೇಶಕ್ಕಾಗಿ ಮಾಡಲಾಗುತ್ತಿದೆ. ಒಂಟಿಯಾಗಿ ಬಂದ ಹುಡುಗಿಯರಿಗೆ ಕಾಲೇಜು ಆವರಣಕ್ಕೆ ಪ್ರವೇಶ ನೀಡುವುದಿಲ್ಲ. ಜೊತೆಗೆ ಖಚಿತಪಡಿಸಲು ಹುಡುಗಿಯು ತಮ್ಮ ಗೆಳೆಯನ ಜೊತೆಗಿರುವ ಫೋಟೋವನ್ನು ತೋರಿಸಬೇಕು ಎಂದು ನಕಲಿ ನೋಟಿಸ್ನಲ್ಲಿ ಇದೆ.