ಒಂಬತ್ತು ವರ್ಷದ ಭಾರತೀಯ ಹುಡುಗನೋರ್ವ ಅತ್ಯಂತ ಕಿರಿಯ ಪ್ರಮಾಣೀಕೃತ ಯೋಗ ತರಬೇತುದಾರ ಎಂಬ ಹೆಗ್ಗಳಿಕೆಗೆ ಪಾತ್ರನಾಗಿದ್ದಾನೆ.
ಗಿನ್ನೆಸ್ ವಿಶ್ವ ದಾಖಲೆಯ ಪುಟದಲ್ಲಿ ಈ ಬಾಲಕನ ಹೆಸರು ಸೇರಿಸಲಾಗಿದೆ. ಒಂಬತ್ತು ವರ್ಷದ ಭಾರತೀಯ ಬಾಲಕನೊಬ್ಬ ವಿಶ್ವ ದಾಖಲೆಯ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡ ವಿಡಿಯೋವನ್ನು ಇತ್ತೀಚೆಗೆ ಆನ್ಲೈನ್ನಲ್ಲಿ ಪೋಸ್ಟ್ ಮಾಡಲಾಗಿದೆ.
ಅತ್ಯಂತ ಕಿರಿಯ ಪ್ರಮಾಣೀಕೃತ ಯೋಗ ತರಬೇತುದಾರನಾದ ಒಂಬತ್ತು ವರ್ಷದ ಭಾರತೀಯ ಬಾಲಕ ರೇಯಾಶ್ ಸುರಾನಿ ಅವರ ವೀಡಿಯೊವನ್ನು ಯೂಟ್ಯೂಬ್ನಲ್ಲಿ ಪೋಸ್ಟ್ ಮಾಡಲಾಗಿದೆ. ಮಕ್ಕಳಿಗಾಗಿ ಮೀಸಲಾಗಿರುವ ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ಯೂಟ್ಯೂಬ್ ಚಾನೆಲ್ನಲ್ಲಿ ಪೋಸ್ಟ್ ಮಾಡಲಾದ ಈ ವೀಡಿಯೊವು ಎಲ್ಲರನ್ನು ಬೆರಗುಗೊಳಿಸುತ್ತಿದೆ.
ಈ ವಿಡಿಯೋದಲ್ಲಿ ಬಾಲಕ ರೇಯಾಶ್ ತನ್ನನ್ನು ಪರಿಚಯಿಸಿಕೊಂಡಿದ್ದಾನೆ. ಕಿರಿಯ ಪ್ರಮಾಣೀಕೃತ ಯೋಗ ಬೋಧಕನಾಗುವ ತನ್ನ ಸಾಧನೆಗಳ ಬಗ್ಗೆ ಆತ ಈ ವಿಡಿಯೋದಲ್ಲಿ ಮಾತನಾಡಿದ್ದಾನೆ. ಯೋಗವು ಯಾವಾಗಲೂ ತನಗೆ ಆಸಕ್ತಿಕರ ವಿಚಾರವಾಗಿತ್ತು. ಮತ್ತು ಈಗ ಸ್ವತಃ ನಾನೇ ಬೇರೆಯವರಿಗೆ ಕಲಿಸಲು ಪ್ರಾರಂಭಿಸಿದ್ದು ಈ ಬೋಧನೆಯನ್ನು ಕೂಡ ತಾನು ಇಷ್ಟಪಡುತ್ತಿರುವುದಾಗಿ ಬಾಲಕ ಹೇಳಿದರು.
ಯುವ ಯೋಗಪಟು ತಮ್ಮ 200 ಗಂಟೆಗಳ ಯೋಗ ಶಿಕ್ಷಕರ ತರಬೇತಿ ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ 2021ರ ಜುಲೈ 27 ರಂದು ಆನಂದ್ ಶೇಖರ್ ಯೋಗ ಶಾಲೆಯಿಂದ ಅವರಿಗೆ ಪ್ರಮಾಣಪತ್ರ ನೀಡಲಾಯಿತು ಎಂದು ಗಿನ್ನೆಸ್ ಬುಕ್ ಅಪ್ ವರ್ಲ್ಡ್ ರೆಕಾರ್ಡ್ಗೆ ಸಂಬಂಧಿಸಿದ ಅಧಿಕೃತ ಬ್ಲಾಗ್ ವರದಿ ಮಾಡಿದೆ.