Select Your Language

Notifications

webdunia
webdunia
webdunia
webdunia

ಅಕ್ರಮ ಸಂಬಂಧ ಬಯಲುಮಾಡಲು ವೈದ್ಯಕೀಯ ದಾಖಲೆ ಬಳಸುವಂತಿಲ್ಲ

ಅಕ್ರಮ ಸಂಬಂಧ  ಬಯಲುಮಾಡಲು ವೈದ್ಯಕೀಯ ದಾಖಲೆ ಬಳಸುವಂತಿಲ್ಲ
ನವದೆಹಲಿ , ಸೋಮವಾರ, 3 ಜನವರಿ 2022 (16:10 IST)
ಸಂಗಾತಿಯ ಅಕ್ರಮ ಸಂಬಂಧವನ್ನು ಆತನ ಅಥವಾ ಅವಳ ಖಾಸಗಿ ವೈದ್ಯಕೀಯ ದಾಖಲೆಗಳ ಮೂಲಕ ಸಾಬೀತು ಪಡಿಸಲಾಗುವುದಿಲ್ಲ ಎಂದು ಕರ್ನಾಟಕದ ಧಾರವಾಡ ಪೀಠ ಕರ್ನಾಟಕ  ಉಚ್ಚ ನ್ಯಾಯಾಲಯ ಆದೇಶ ನೀಡಿದೆ.
 
ಪ್ರಕರಣವೊಂದರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಂಜಯ್ ಗೌಡ ಅವರು ಸಂಗಾತಿಯ ಅಕ್ರಮ ಸಂಬಂಧವನ್ನು ಖಾಸಗಿ ವೈದ್ಯಕೀಯ ದಾಖಲೆಗಳ ಮೂಲಕ ಸಾಬೀತು ಪಡಿಸಲಾಗುವುದಿಲ್ಲಒಂದು ವೇಳೆ ವೈದ್ಯಕೀಯ ದಾಖಲೆಗಳನ್ನು ನೀಡಿದರೆ ವೈದ್ಯ ಹಾಗೂ ರೋಗಿಯಾಗಿ ಗೌಪ್ಯತೆಯ ಸಂಪೂರ್ಣ ಪರಿಕಲ್ಪನೆಯನ್ನು ನಾಶ ಮಾಡಿದಂತೆ ಆಗುತ್ತದೆ.

 
ಹೆಂಡತಿ ನನ್ನ ಜೊತೆ ಸಂಸಾರ ಮಾಡಿಯೇ ಇಲ್ಲ ಎಂದು ಆರೋಪಿಸಿದ್ದ ಗಂಡ. ಇನ್ನು ಇದೇ ಪ್ರಕರಣದಲ್ಲಿ ಕಳೆದ ಎರಡು ವರ್ಷಗಳಿಂದ ಹೆಂಡತಿ ನನ್ನ ಜೊತೆ ಸಂಸಾರ ನಡೆಸಿಲ್ಲ. ಆದರೂ ಆಕೆ ಗರ್ಭಿಣಿಯಾಗಿ ಗರ್ಭಪಾತ ಮಾಡಿಸಿಕೊಂಡಿದ್ದಾಳೆ.

ಅಣ್ಣ ಹಾಗೂ ನನ್ನ ಕುಟುಂಬದ ಜೊತೆ ಕ್ರೌರ್ಯದಿಂದ ನಡೆದುಕೊಂಡು ಈಗ ವಿಚ್ಛೇದನದ ಪ್ರಕರಣ ದಾಖಲಿಸುವ ಮೂಲಕ ಜೀವನಾಂಶ ಕೇಳುತ್ತಿದ್ದಾರೆ ಎಂದು ಆರೋಪಿಸಿದ್ದಾಗಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಂಜಯ್ ಗೌಡ ಅವರು ಪತ್ನಿ ವ್ಯಬಿಚಾರ ನಡೆಸಿ ಕ್ರೌರ್ಯ ಮೆರೆದಿರುವುದು ಕೆರೆ ಆಗಿದ್ದರೆ ಈ ಆರೋಪವನ್ನು ಕಾನೂನಿಗೆ ಗೊತ್ತಿರುವ ರೀತಿಯಲ್ಲಿ ಸಾಕ್ಷಾಧಾರಗಳು ಜೊತೆಗೆ ಸಾಬೀತುಪಡಿಸಬೇಕು.

ಈ ಆರೋಪವನ್ನು ಸಮನ್ಸ್ ಮೂಲಕ ಸಾಬೀತುಪಡಿಸಲು ಸಾಧ್ಯವಿಲ್ಲ. ಖಾಸಗಿ ವೈದ್ಯಕೀಯ ದಾಖಲೆಗಳನ್ನ ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದು ತೀರ್ಪು ನೀಡಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಲಾಕ್ ಡೌನ್ ಅನಿವಾರ್ಯ