Select Your Language

Notifications

webdunia
webdunia
webdunia
webdunia

ಉತ್ತರ ಪ್ರದೇಶದ ಸಚಿವನೆಂದು ಗೋವಾ ಸರ್ಕಾರವನ್ನು ಯಾಮಾರಿಸಿದ ವ್ಯಕ್ತಿ

ಉತ್ತರ ಪ್ರದೇಶದ ಸಚಿವನೆಂದು ಗೋವಾ ಸರ್ಕಾರವನ್ನು ಯಾಮಾರಿಸಿದ ವ್ಯಕ್ತಿ
ಗೋವಾ , ಶನಿವಾರ, 11 ಜನವರಿ 2020 (07:21 IST)
ಗೋವಾ : ಉತ್ತರ ಪ್ರದೇಶದ ಸಚಿವನೆಂದು ಹೇಳಿಕೊಂಡು ವ್ಯಕ್ತಿಯೊಬ್ಬ ಗೋವಾ ಸರ್ಕಾರವನ್ನು ಯಾಮಾರಿಸಿದ ಘಟನೆ ನಡೆದಿರುವುದಾಗಿ ತಿಳಿದಿಬಂದಿದೆ.


ಗೋವಾ ಸರ್ಕಾರದ ಶಿಷ್ಟಾಚಾರ ಇಲಾಖೆಗೆ ನಕಲಿ ಸಹಿ ಮಾಡಿದ ಉತ್ತರ ಪ್ರದೇಶ ಸರ್ಕಾರದ ಲೆಟರ್ಹೆಡ್ ನೀಡಿ  ತಾನು ಉತ್ತರ ಪ್ರದೇಶದ ಮಂತ್ರಿ, ಹತ್ತು ದಿನಗಳ ಕಾಲ ಅಧ್ಯಯನ ಪ್ರವಾಸಕ್ಕೆಂದು ಬಂದಿರುವುದಾಗಿ ಉಲ್ಲೇಖಿಸಿದ್ದಾನೆ. ಇದನ್ನು ನಂಬಿದ ಗೋವಾ ಸರ್ಕಾರ ಆತನಿಗೆ ಉಚಿತ ವಸತಿ, ಸಾರಿಗೆ ವ್ಯವಸ್ಥೆ, ಹಾಗೂ ಪೊಲೀಸ್ ರಕ್ಷಣೆ ನೀಡಿದೆ.

 

ಆದರೆ ಪ್ರವಾಸದ ವೇಳೆ ಗೋವಾ ಸಚಿವರ ಜೊತೆ ಮಾತುಕತೆ ನಡೆಸುವಾಗ ಸಚಿವರೊಬ್ಬರಿಗೆ ಈತನ ಮೇಲೆ ಅನುಮಾನ ಬಂದು ಈತನ ಬಗ್ಗೆ ಇಟರ್ ನೆಟ್ ನಲ್ಲಿ ಹುಡುಕಾಡಿದಾಗ ಯಾವುದೇ ಮಾಹಿತಿ ಲಭಿಸದ ಹಿನ್ನಲೆಯಲ್ಲಿ ಪೊಲೀಸ್ ತನಿಖೆಗೆ ಆದೇಶಿಸಿದ್ದಾರೆ. ಆಗ ಸತ್ಯಾಂಶ ತಿಳಿದುಬಂದಿದ್ದು, ಇದೀಗ ಆ ವ್ಯಕ್ತಿ ಪೊಲೀಸರ ಅತಿಥಿಯಾಗಿದ್ದಾನೆ.

 


Share this Story:

Follow Webdunia kannada

ಮುಂದಿನ ಸುದ್ದಿ

ನಟಿ ದೀಪಿಕಾ ಪಡುಕೋಣೆ ವಿರುದ್ಧ ಕಿಡಿಕಾರಿದ ಕೇಂದ್ರ ಸಚಿವೆ ಸ್ಮೃತಿ ಇರಾನಿ