Select Your Language

Notifications

webdunia
webdunia
webdunia
webdunia

40ನೇ ಫ್ಲೋರ್‌ನಿಂದ ನೆಲಕ್ಕೆ ಕುಸಿದ ಲಿಫ್ಟ್!

ದುರ್ಮರಣ
ಮುಂಬೈ , ಸೋಮವಾರ, 11 ಸೆಪ್ಟಂಬರ್ 2023 (14:28 IST)
ಮುಂಬೈ : 40ನೇ ಮಹಡಿಯಿಂದ ಒಮ್ಮೆಲೆ ನೆಲ ಮಾಳಿಗೆಗೆ ಲಿಫ್ಟ್ ಕುಸಿದ ಪರಿಣಾಮ 7 ಜನ ಮೃತಪಟ್ಟ ಘಟನೆ ಮಹಾರಾಷ್ಟ್ರದ ಥಾಣೆಯಲ್ಲಿ ನಡೆದಿದೆ.

ಮೃತರನ್ನು ಮಹೇಂದ್ರ ಚೌಪಾಲ್ (32), ರೂಪೇಶ್ ಕುಮಾರ್ ದಾಸ್ (21), ಹರೂನ್ ಶೇಖ್ (47), ಮಿಥ್ಲೇಶ್ (35), ಕರಿದಾಸ್ (38) ಮತ್ತು ಸುನೀಲ್ ಕುಮಾರ್ ದಾಸ್ (21) ಎಂದು ಗುರುತಿಸಲಾಗಿದೆ. ಮತ್ತೋರ್ವನ ಗುರುತು ಪತ್ತೆಯಾಗಿಲ್ಲ.

ಇವರೆಲ್ಲ ಕಟ್ಟಡ ಕಾರ್ಮಿಕರಾಗಿದ್ದು ಲಿಫ್ಟ್ನಲ್ಲಿ ಇಳಿಯುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ಘಟನೆಯಲ್ಲಿ ಲಿಫ್ಟ್ನಲ್ಲಿದ್ದ ಎಲ್ಲರೂ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಸಂತ್ರಸ್ತರ ಕುಟುಂಬಗಳಿಗೆ ಸಾಂತ್ವನ ಹೇಳಿದ್ದಾರೆ.

ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ, ಲಿಫ್ಟ್ ಅಪಘಾತ ಬಹು ದೊಡ್ಡ ದುರಂತವಾಗಿದೆ. ಈ ಅಪಘಾತದಲ್ಲಿ ಪ್ರಾಣ ಕಳೆದುಕೊಂಡವರ ಕುಟುಂಬಗಳಿಗೆ ನನ್ನ ತೀವ್ರ ಸಂತಾಪವನ್ನು ವ್ಯಕ್ತಪಡಿಸುತ್ತೇನೆ ಎಂದು ಅವರು ಪೋಸ್ಟ್ ಮಾಡಿದ್ದಾರೆ.

 

Share this Story:

Follow Webdunia kannada

ಮುಂದಿನ ಸುದ್ದಿ

ಬಂದ್ ಹಿನ್ನೆಲೆ - ಮೆಜೆಸ್ಟಿಕ್ ಮೆಟ್ರೋ ನಿಲ್ದಾಣದಲ್ಲಿ ಮೆಟ್ರೋ ಗಾಗಿ ಪ್ರಯಾಣಿಕರ ಕ್ಯೂ