Select Your Language

Notifications

webdunia
webdunia
webdunia
webdunia

ಜೆಡಿಎಸ್-ಕಾಂಗ್ರೆಸ್ನ ಮೈತ್ರಿ ಅನೈತಿಕ ಸರ್ಕಾರವಾಗಿತ್ತು : ಸುಧಾಕರ್

ಜೆಡಿಎಸ್-ಕಾಂಗ್ರೆಸ್ನ ಮೈತ್ರಿ ಅನೈತಿಕ ಸರ್ಕಾರವಾಗಿತ್ತು : ಸುಧಾಕರ್
ನವದೆಹಲಿ , ಭಾನುವಾರ, 3 ಅಕ್ಟೋಬರ್ 2021 (14:46 IST)
ನವದೆಹಲಿ,ಅ.3 : ಮೈತ್ರಿ ಸರ್ಕಾರದ ವಿರುದ್ಧ ಕಿಡಿಕಾರಿದ ಆರೋಗ್ಯ ಸಚಿವ ಡಾ.ಸುಧಾಕರ್, ಜೆಡಿಎಸ್-ಕಾಂಗ್ರೆಸ್ನ ಮೈತ್ರಿ ಸರ್ಕಾರ ಒಂದು ಅನೈತಿಕ ಸರ್ಕಾರವಾಗಿತ್ತು. ಅದಕ್ಕೆ ಅದನ್ನು ಬಿಟ್ಟು ಬರಬೇಕಾಯಿತು ಎಂದು ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಎಸ್ ವಿರುದ್ಧ ಗೆದ್ದು ಬಂದ ನಾವು ಅವರ ಜೊತೆಯೇ ಹೇಗೆ ಸರ್ಕಾರ ಮಾಡುವುದು. ನಾನು ಗೆದ್ದು ದೇವನಹಳ್ಳಿಗೆ ಬರುವಷ್ಟರಲ್ಲಿ ಸಿಎಂ ಆಯ್ಕೆಯಾಗಿತ್ತು. ಅದು ಸಮ್ಮಿಶ್ರ ಸರ್ಕಾರವಾಗಿದ್ದರಿಂದ ಅದನ್ನು ಬಿಟ್ಟು ಬಂದೆ ಎಂದು ತಿಳಿಸಿದರು.
ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಸೋತಿದ್ದರು. ಅವರು ಆ ಸೋಲಿನಿಂದ ಹೊರಬಂದಿರಲಿಲ್ಲ. ಆದರೆ ಸಮ್ಮಿಶ್ರ ಸರ್ಕಾರ ರಚನೆ ಬಗ್ಗೆ ಎಲ್ಲ ತೀರ್ಮಾನವನ್ನು ಹೈಕಮಾಂಡ್ ಕೈಗೊಂಡಿತ್ತು. ಹಾಗಾಗಿ ಆ ಸರ್ಕಾರದಲ್ಲಿ ಇರುವುದಕ್ಕಿಂತ ಬಿಜೆಪಿಗೆ ಬರುವುದು ಒಳ್ಳೆಯದು ಎಂದು ನಿರ್ಧರಿಸಿದೆ ಎಂದರು.
ಸಿದ್ದರಾಮಯ್ಯನವರ ವಿರುದ್ಧ ವಾಗ್ದಾಳಿ ನಡೆಸಿದ ಸುಧಾಕರ್, ಹಿಂದೆಲ್ಲ 30ರಿಂದ 40 ವರ್ಷಗಳ ಕಾಲ ಗಾಂ ಕುಟುಂಬವನ್ನು ಬೈದಿದ್ದ ಅವರ ಈಗ ಕಾಂಗ್ರೆಸ್ಗೆ ಹೊಗಳುತ್ತಿದ್ದಾರೆ. ಕಾಂಗ್ರೆಸ್ನಲ್ಲಿ ಇರುವವರೆಲ ಮೂಲ ಕಾಂಗ್ರೆಸಿಗರಲ್ಲ. ಜನತಾ ಪರಿವಾರದಿಂದ ಕಾಂಗ್ರೆಸ್ಗೆ ಬಂದವರೇ ಹೆಚ್ಚು ಟಾಂಗ್ ನೀಡಿದರು.


Share this Story:

Follow Webdunia kannada

ಮುಂದಿನ ಸುದ್ದಿ

'ಮಮತಾ ಬ್ಯಾನರ್ಜಿ'58,000ಕ್ಕೂ ಹೆಚ್ಚು ಮತಗಳಿಂದ ಭರ್ಜರಿ ಗೆಲುವು