Select Your Language

Notifications

webdunia
webdunia
webdunia
webdunia

ಪತ್ನಿಗೆ ಡೆಡ್ಲಿ ಡ್ರಗ್ಸ್ ನೀಡಿ ಕೊಂದ ಪತಿ ! ಕಾರಣ ಕೇಳಿದ್ರೆ ಶಾಕ್ ಆಗ್ತೀರಾ?

ಪತ್ನಿಗೆ ಡೆಡ್ಲಿ ಡ್ರಗ್ಸ್ ನೀಡಿ ಕೊಂದ ಪತಿ ! ಕಾರಣ ಕೇಳಿದ್ರೆ ಶಾಕ್ ಆಗ್ತೀರಾ?
ಮುಂಬೈ , ಗುರುವಾರ, 24 ನವೆಂಬರ್ 2022 (14:21 IST)
ಮುಂಬೈ : ಆಸ್ಪತ್ರೆಯೊಂದರಲ್ಲಿ ಕೆಲಸ ಮಾಡುತ್ತಿದ್ದ 23 ವರ್ಷದ ವ್ಯಕ್ತಿಯೋರ್ವ, ತನ್ನ ಪತ್ನಿಗೆ ಚುಚ್ಚುಮದ್ದಿನ ಮೂಲಕ ಡೆಡ್ಲಿ ಡ್ರಗ್ಸ್ ನೀಡಿ ಕೊದು ನಂತರ ಅದನ್ನು ಆತ್ಮಹತ್ಯೆ ಎಂದು ಬಿಂಬಿಸಲು ಯತ್ನಿಸಿರುವ ಘಟನೆ ಮಹಾರಾಷ್ಟ್ರದ ಪುಣೆ ಜಿಲ್ಲೆಯಲ್ಲಿ ನಡೆದಿದೆ.

ಮೃತ ಮಹಿಳೆಯನ್ನು ಪ್ರಿಯಾಂಕಾ ಎಂದು ಗುರುತಿಸಲಾಗಿದ್ದು, ನವೆಂಬರ್ 14 ರಂದು ಈ ಘಟನೆ ನಡೆದಿದೆ. ಗಂಭೀರ ಸ್ಥಿತಿಯಲ್ಲಿದ್ದ ಪ್ರಿಯಾಂಕರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮಹಿಳೆ ಕೊನೆಯುಸಿರೆಳೆದಿದ್ದಾರೆ.

ಆರೋಪಿ ಸ್ವಪ್ನಿಲ್ ಸಾವಂತ್ ಐದು ತಿಂಗಳ ಹಿಂದೆಯಷ್ಟೇ ಪ್ರಿಯಾಂಕಾ ಅವರನ್ನು ಮದುವೆಯಾಗಿ, ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದನು.

ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ಸ್ವಪ್ನಿಲ್ ಸಾವಂತ್ ತನ್ನ ಸಹೋದ್ಯೋಗಿ ನರ್ಸ್ ಜೊತೆ ಅನೈತಿಕ ಸಂಬಂಧ ಹೊಂದಿದ್ದು, ಆಕೆಯನ್ನು ಮದುವೆಯಾಗಲು ಪ್ಲ್ಯಾನ್ ಮಾಡಿಕೊಂಡಿದ್ದ ಹೀಗಾಗಿ ತನ್ನ ಪತ್ನಿಯನ್ನು ಹತ್ಯೆಗೈದಿದ್ದಾನೆ.

Share this Story:

Follow Webdunia kannada

ಮುಂದಿನ ಸುದ್ದಿ

ಸುರೇಶ್ ಗೌಡ ಕೊಲೆಗೆ ಸುಪಾರಿ ಆರೋಪ?