Publish Date: Wed, 23 Nov 2022 (10:53 IST)
Updated Date: Wed, 23 Nov 2022 (10:56 IST)
ಬೆಂಗಳೂರು : ಉಗ್ರ ಕೃತ್ಯಕ್ಕೆ ಹಿಂದೂ ಮುಖವಾಡ ಅಂಟಿಸಿ ʼಹಿಂದೂ ಟೆರರಿಸಂʼ ಮಾಡಲು ಉಗ್ರರು ಸ್ಕೆಚ್ ಹಾಕಿರುವ ಸ್ಫೋಟಕ ವಿಚಾರ ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದಿಂದ ಬೆಳಕಿಗೆ ಬಂದಿದೆ.
ಹೌದು. ಈ ಹಿಂದೆ ಮುಂಬೈ ದಾಳಿ ಪ್ರಕರಣದ ನಡೆದಾಗಲೂ ಕಸಬ್ ಹಿಂದೂ ವ್ಯಕ್ತಿಯಂತೆ ಪೋಸ್ ನೀಡಿದ್ದ. ಈಗ ಮಂಗಳೂರು ಸ್ಫೋಟ ಪ್ರಕರಣದಲ್ಲೂ ಶಾರೀಕ್ ಹಿಂದೂ ವ್ಯಕ್ತಿ ವೇಷ ಧರಿಸಿ ಕೃತ್ಯ ನಡೆಸಲು ಸಂಚು ರೂಪಿಸಿರುವುದು ಗೊತ್ತಾಗಿದೆ.
ಕುಕ್ಕರ್ ಬಾಂಬ್ ಸ್ಫೋಟಿಸಿ ಹಿಂದೂ ಭಯೋತ್ಪಾದನೆ ಅಂತಾ ಸುಳ್ಳು ಸುದ್ದಿ ಹಬ್ಬಿಸುವಂತೆ ಮಾಡಲು ಶಾರೀಕ್ ಸ್ಕೆಚ್ ಹಾಕಿದ್ದ. ಈ ಮೂಲಕ ಕರಾವಳಿಯಲ್ಲಿ ರಕ್ತದೋಕುಳಿ ನಡೆಸಿ “ಕೇಸರಿ ಭಯೋತ್ಪಾದನೆ” ಅಂತಾ ಸುಳ್ಳು ಸುದ್ದಿ ಹಬ್ಬಿಸುವಂತೆ ಮಾಡಲು ಶಾರೀಕ್ ಪ್ಲ್ಯಾನ್ ಮಾಡಿದ್ದ.
ಆದರೆ ಕುಕ್ಕರ್ ಬಾಂಬ್ ರಿಕ್ಷಾದಲ್ಲೇ ಸ್ಫೋಟಗೊಳ್ಳುವ ಮೂಲಕ ಉಗ್ರನ ಈ ಮಾಸ್ಟರ್ ಪ್ಲ್ಯಾನ್ ವಿಫಲವಾಗಿದೆ.
Ramya kosira
Publish Date: Wed, 23 Nov 2022 (10:53 IST)
Updated Date: Wed, 23 Nov 2022 (10:56 IST)