ನವದೆಹಲಿ : ಸ್ವತಃ ಪತ್ನಿಯೇ ಮಗನೊಂದಿಗೆ ಸೇರಿ ಗಂಡನನ್ನ ಕೊಂದು, ಫ್ರಿಡ್ಜ್ನಲ್ಲಿ ಸಂಗ್ರಹಿಸಿಟ್ಟಿದ್ದಲ್ಲದೇ ದೆಹಲಿ ನೆರೆಹೊರೆಯ ಪ್ರದೇಶಗಳಲ್ಲಿ ದೇಹದ ಭಾಗಗಳನ್ನು ಹೂತು ಹಾಕಿದ ಘಟನೆ ನಡೆದಿದೆ.
ಯಾವ ಸೀನಿಮಾಗೂ ಕಡಿಮೆಯಿಲ್ಲದಂತೆ ಪಕ್ಕಾ ಪ್ಲ್ಯಾನ್ ಮಾಡಿ ಕೊಲೆ ಮಾಡಲಾಗಿದೆ. ಪೂನಂ ಮತ್ತು ಆಕೆಯ ಮಗ ದೀಪಕ್ ಅಕ್ರಮ ಸಂಬಂಧ ಹೊಂದ್ದರಿಂದಾಗಿ ಅಂಜನ್ ದಾಸ್ ಅವರನ್ನ ಕೊಲೆ ಮಾಡಿದ್ದಾರೆ
2016ರಲ್ಲಿ ಪೂನಂ ಮಾಜಿ ಪತಿ ಕಲ್ಲು ನಿಧನರಾದ ನಂತರ 2017ರಲ್ಲಿ ಅಂಜನ್ ದಾಸ್ ಅವರನ್ನ ಮದುವೆಯಾದ್ರು. ಮೃತ ಅಂಜನ್ ಬಿಹಾರದಲ್ಲಿ ಮದುವೆಯಾಗಿ 8 ಮಕ್ಕಳನ್ನು ಹೊಂದಿದ್ದರು. ಆದರೆ ಸಂಪಾದನೆ ಮಾಡುತ್ತಿರಲಿಲ್ಲ.
ಇದರಿಂದ ತಾಯಿ ಮಗ ಬೇಸತ್ತಿದ್ದರು. ಮೊದಲು ಅಂಜನ್ ದಾಸ್ಗೆ ಮದ್ಯದಲ್ಲಿ ನಿದ್ರೆ ಮಾತ್ರೆ ಬೆರಸಿ ಕೊಟ್ಟಿದ್ದಾರೆ. ನಿದ್ರೆಗೆ ಜಾರಿದ ನಂತರ ಕತ್ತು ಕೊಯ್ದು ರಕ್ತವನ್ನು ಸಂಪೂರ್ಣವಾಗಿ ಹೊರಹೋಗಲು ಶವವನ್ನು ಮನೆಯಲ್ಲೇ ಬಿಟ್ಟಿದ್ದಾರೆ.
ದೇಹದಿಂದ ರಕ್ತ ಸಂಪೂರ್ಣವಾಗಿ ಹರಿದುಹೋದ ನಂತರ 10 ತುಂಡುಗಳಾಗಿ ಕತ್ತರಿಸಿ, ಪ್ರಿಡ್ಜ್ನಲ್ಲಿ ಶೇಖರಿಸಿಟ್ಟು ಪಾಂಡವ್ ನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಚೆಲ್ಲಾಪಿಲ್ಲಿಯಾಗಿ ಎಸೆದಿದ್ದಾರೆ.