Select Your Language

Notifications

webdunia
webdunia
webdunia
webdunia

ಹೆರುವ ವಿಷಯದ ಆಯ್ಕೆ ಮಹಿಳೆಗೆ ಬಿಟ್ಟಿದ್ದು : ಹೈಕೋರ್ಟ್

ಹೆರುವ ವಿಷಯದ ಆಯ್ಕೆ ಮಹಿಳೆಗೆ ಬಿಟ್ಟಿದ್ದು : ಹೈಕೋರ್ಟ್
ತಿರುವನಂತಪುರಂ , ಶನಿವಾರ, 5 ನವೆಂಬರ್ 2022 (08:15 IST)
ತಿರುವನಂತಪುರಂ : ಗರ್ಭ ಧರಿಸುವ ಅಥವಾ ಧರಿಸದೇ ಇರುವ ಮಹಿಳೆಯ ಸಂತಾನೋತ್ಪತ್ತಿ ಆಯ್ಕೆ ವಿಚಾರದಲ್ಲಿ ಮಹಿಳಾ ಹಕ್ಕಿಗೆ ಯಾವುದೇ ನಿರ್ಬಂಧವಿಲ್ಲ ಎಂದು ಕೇರಳ ಹೈಕೋರ್ಟ್ ಹೇಳಿದೆ.

ಸುಚಿತ್ರಾ ಶ್ರೀವಾಸ್ತವ ವರ್ಸಸ್ ಚಂಡೀಗಢ ಆಡಳಿತ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ನೀಡಿದ ತೀರ್ಪನ್ನು ಉಲ್ಲೇಖಿಸಿ ನ್ಯಾಯಮೂರ್ತಿ ವಿ.ಜಿ ಅರುಣ್ ನೇತೃತ್ವದ ಏಕಸದಸ್ಯ ಪೀಠವು,

ಸಂವಿಧಾನದ-21 ವಿಧಿಯ ಅಡಿ ಸಂತಾನೋತ್ಪತ್ತಿ ಆಯ್ಕೆ ವಿಚಾರದಲ್ಲಿ ನಿರ್ಧಾರ ಕೈಗೊಳ್ಳುವ ಹಕ್ಕು ಮಹಿಳೆಗೆ ಇದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಗರ್ಭಧರಿಸುವ ಅಥವಾ ಗರ್ಭಧರಿಸದೇ ಇರುವ ತನ್ನ ಆಯ್ಕೆಯ ಹಕ್ಕನ್ನು ಚಲಾಯಿಸಲು ಮಹಿಳೆಗೆ ಯಾವುದೇ ನಿರ್ಬಂಧವಿರುವುದಿಲ್ಲ. ಇದು ಆಕೆಯ ವೈಯಕ್ತಿಕ ಸ್ವಾತಂತ್ರ್ಯದ ಭಾಗವಾಗಿದೆ ಎಂದು ಪೀಠವು ತನ್ನ ಆದೇಶದಲ್ಲಿ ತಿಳಿಸಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಎಚ್ಚರಿಕೆ ! ಟ್ಯಾಟೂ ಪ್ರಿಯರೇ ತಪ್ಪದೇ ಗಮನಿಸಿ