ಮದುವೆ ದಿನವೇ ಆಸ್ಪತ್ರೆ ಸೇರಿದ ವಧು, ವರನ ನಡೆಗೆ ಭಾರೀ ಮೆಚ್ಚುಗೆ

Sampriya
ಶುಕ್ರವಾರ, 21 ನವೆಂಬರ್ 2025 (16:50 IST)
Photo Credit X
ಅಲಪ್ಪುಳ: ಮದುವೆ ದಿನವೇ ಅಪಘಾತದಲ್ಲಿ ಗಂಭೀರ ಗಾಯಗೊಂಡು ಆಸ್ಪತ್ರೆ ಸೇರಿದ್ದ ವಧುವಿಗೆ ಆಸ್ಪತ್ರೆಯಲ್ಲೇ ವರ ತಾಳಿ ಕಟ್ಟಿದ ಘಟನೆ ಕೇರಳದ ಆಲಪ್ಪುಳದ ಥಂಪೋಲಿಯಲ್ಲಿ ನಡೆದಿದೆ. 

ಈ ಘಟನೆಯ ಕ್ಷಣಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.  ಈ ಭಾವನಾತ್ಮಕವಾಗಿ ಸ್ಪೂರ್ತಿದಾಯಕವಾದ ಕ್ಷಣ ಭಾರೀ ಮೆಚ್ಚುಗೆಯನ್ನು ಪಡೆಯುತ್ತಿದೆ. 

ಇಂದು ಮಧ್ಯಾಹ್ನ 12.12 ರಿಂದ 12.25 ರವರೆಗೆ ಅಲಪ್ಪುಳದ ಶಕ್ತಿ ಆಡಿಟೋರಿಯಂನಲ್ಲಿ ಮದುವೆಯ ಮುಹೂರ್ತವನ್ನು ನಿಗದಿಪಡಿಸಲಾಗಿತ್ತು. ಆದರೆ, ಬ್ಯೂಟಿ ಪಾರ್ಲರ್‌ನಿಂದ ಹಿಂತಿರುಗುತ್ತಿದ್ದಾಗಿ ವಧುವಿದ್ದ ಕಾರು ಅಪಘಾತಕ್ಕೀಡಾಗಿದೆ. 

ಗಂಭೀರವಾಗಿ ಗಾಯಗೊಂಡ ಅವನಿಯನ್ನು ಮೊದಲು ಕೊಟ್ಟಾಯಂ ವೈದ್ಯಕೀಯ ಕಾಲೇಜಿಗೆ ಮತ್ತು ನಂತರ ಕೊಚ್ಚಿಯ ವಿಪಿಎಸ್ ಲೇಕ್‌ಶೋರ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಯಾವುದೇ ದೊಡ್ಡ ಆರೋಗ್ಯ ಸಮಸ್ಯೆಗಳಿಲ್ಲ ಎಂದು ವೈದ್ಯರು ತಿಳಿಸಿದ ನಂತರ ಆಸ್ಪತ್ರೆಯಲ್ಲಿ ತಾಳಿಕಟ್ಟೆ ನಡೆಸಲು ಕುಟುಂಬಸ್ಥರು ನಿರ್ಧರಿಸಿದ್ದಾರೆ.

ಒಂದು ಕಾರು ಅಪಘಾತ ಅವರ ಕನಸುಗಳನ್ನು ಹಾಳುಮಾಡಿದರೂ, ಅದು ಅವರ ಪ್ರೀತಿಯನ್ನು ಕುಗ್ಗಿಸಲು ಸಾಧ್ಯವಾಗಲಿಲ್ಲ. ಆಸ್ಪತ್ರೆಯಲ್ಲಿ ತಮ್ಮ ಆತ್ಮೀಯರ ಸಮ್ಮುಖದಲ್ಲಿ ವರನು ಅವಳ ಕುತ್ತಿಗೆಗೆ  ತಾಳಿ ಕಟ್ಟಿದನು. ಅಪಘಾತದ ಭಯದ ನಡುವೆಯೂ ತುಂಪೋಳಿಯ ಶರೋನ್ ಮತ್ತು ಅವನಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.‌

‌<>

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಹೈಕಮಾಂಡ್‌ನಲ್ಲಿ ಕೆಲ ಶಾಸಕರ ಶಕ್ತಿಪ್ರದರ್ಶನ, ಕೊನೆಗೂ ಮೌನ ಮುರಿದ ಡಿಕೆ ಶಿವಕುಮಾರ್

ಶಕ್ತಿ ಪ್ರದರ್ಶನಕ್ಕೆ ಜೈಲಿಗೂ ಕಾಲಿಟ್ರಾ ಡಿಕೆ ಶಿವಕುಮಾರ್, ಭಾರೀ ಬೆಳವಣಿಗೆ

ಕಾಂಗ್ರೆಸ್ ಸರಕಾರ ಹೋಳು; ಜನರ ಪಾಲಿಗೆ ಗೋಳು, ರೈತರಿಗೆ ಹೂಳು: ಆರ್.ಅಶೋಕ್ ಟೀಕೆ

ಸಹೋದ್ಯೋಗಿಯೊಂದಿಗಿನ ಆಫೇರ್‌ನಿಂದ 150 ಕೋಟಿ ಸಂಬಳದ ಕೆಲಸ ಕಳೆದುಕೊಂಡ ವ್ಯಕ್ತಿ

ಡಿಕೆಶಿ ಶಕ್ತಿಪ್ರದರ್ಶನದ ಬೆನ್ನಲ್ಲೇ ನನ್ನದು ಕಾಂಗ್ರೆಸ್ ಬಣ ಎಂದ ರಾಮಲಿಂಗಾ ರೆಡ್ಡಿ

ಮುಂದಿನ ಸುದ್ದಿ
Show comments