Select Your Language

Notifications

webdunia
webdunia
webdunia
webdunia

ರಾಮಮಂದಿರ ಶಿಲಾನ್ಯಾಸ ಹಿನ್ನಲೆ; ಕಾರ್ಯಕ್ರಮಕ್ಕಾಗಿ ಸಿದ್ಧವಾದ ವೇದಿಕೆ ಹೇಗಿದೆ ಗೊತ್ತಾ?

ರಾಮಮಂದಿರ ಶಿಲಾನ್ಯಾಸ ಹಿನ್ನಲೆ; ಕಾರ್ಯಕ್ರಮಕ್ಕಾಗಿ ಸಿದ್ಧವಾದ ವೇದಿಕೆ ಹೇಗಿದೆ ಗೊತ್ತಾ?
ನವದೆಹಲಿ , ಬುಧವಾರ, 5 ಆಗಸ್ಟ್ 2020 (09:33 IST)
ನವದೆಹಲಿ : ಇಂದು ರಾಮಮಂದಿರ ಶಿಲಾನ್ಯಾಸ ಹಿನ್ನಲೆಯಲ್ಲಿ  ನಡೆಯುವ ಕಾರ್ಯಕ್ರಮಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.

400 ಚದರ ಅಡಿಯಲ್ಲಿ  ಅದ್ಧೂರಿ ಪೆಂಡಾಲ್ ಸಿದ್ಧಪಡಿಸಲಾಗಿದ್ದು,  ವೇದಿಕೆಯಲ್ಲಿ ಐವರು ಗಣ್ಯರಿಗೆ ಆಸನ ವ್ಯವಸ್ಥೆ ಮಾಡಲಾಗಿದೆ. ವೇದಿಕೆ ಮುಂಭಾಗದಲ್ಲಿ 175 ಗಣ್ಯರಿಗೆ ಆಸನ ವ್ಯವಸ್ಥೆ ಮಾಡಲಾಗಿದೆ. ಒಂದು ಆಸನದಿಂದ ಮತ್ತೊಂದು ಆಸನಕ್ಕೆ ಅಂತರ ಇರಿಸಲಾಗಿದೆ.

9 ಸ್ತಂಭ ಬಳಸಿಕೊಂಡು ವೇದಿಕೆ ನಿರ್ಮಾಣ ಮಾಡಲಾಗಿದ್ದು, ವೇದಿಕೆ ಕಂಬಗಳಿಗೆ ಕೇಸರಿ ಬಟ್ಟೆ ಸುತ್ತಲಾಗಿದೆ. ಅಂತರಕ್ಕಾಗಿ 2 ಪಟ್ಟು ಪೆಂಡಾಲ್ ಗಾತ್ರ ಹೆಚ್ಚಳ ಮಾಡಲಾಗಿದೆ. ವೇದಿಕೆಯ ಮುಂಭಾಗದಲ್ಲಿ ಎಲ್ ಇಡಿ ಸ್ಕ್ರೀನ್ ಇರಿಸಲಾಗಿದೆ. ಇದೇ ವೇದಿಕೆಯಲ್ಲಿ ವಿಶೇಷ ಪೂಜೆ ಕೈಂಕರ್ಯ ಮಾಡಲಾಗುವುದು . 40 ಕೆಜಿ ಬೆಳ್ಳಿ ಇಟ್ಟಿಗೆ ಇಟ್ಟು ಮೋದಿ ಶಿಲಾನ್ಯಾಸ ಮಾಡಿದ್ದು,  ಕಾರ್ಯಕ್ರಮ  ಎರಡೂವರೆ ಗಂಟೆ ನಡೆಯಲಿದೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ರಾಮನಿಗಾಗಿ ಕಾದಿದೆ ಅಯೋಧ್ಯೆ: ಭೂಮಿ ಪೂಜೆಗೆ ಸಿಂಗಾರಗೊಂಡ ರಾಮಜನ್ಮಭೂಮಿ