ಚೆನ್ನೈ: ಇತ್ತೀಚೆಗೆ ತಮ್ಮ ಪಕ್ಷದ ರಾಲಿ ವೇಳೆ ಕರೂರಿನಲ್ಲಿ ಕಾಲ್ತುಳಿತ ಸಂಭವಿಸಿ 40 ಕ್ಕೂ ಹೆಚ್ಚು ಜನ ಸಾವನ್ನಪ್ಪಿದ ದುರಂತದ ನಂತರ ಟಿವಿಕೆ ನಾಯಕ ದಳಪತಿ ವಿಜಯ್ ಮಹತ್ವದ ತೀರ್ಮಾನವೊಂದಕ್ಕೆ ಬಂದಿದ್ದಾರೆ.
ಕರೂರು ದುರಂತ ವಿಜಯ್ ಪಾಲಿಗೆ ಕರಾಳ ಘಟನೆಯಾಗಿದೆ. ಈ ಘಟನೆ ಬಳಿಕ ವಿಜಯ್ ರನ್ನು ಬಂಧಿಸಬೇಕು ಎಂದು ಹಲವರು ಸೋಷಿಯಲ್ ಮೀಡಿಯಾದಲ್ಲಿ ಆಗ್ರಹಿಸಿದ್ದರು. ಅವರ ವಿರುದ್ಧ ಪ್ರಕರಣವೂ ದಾಖಲಾಗಿತ್ತು.
ಇದೀಗ ಎರಡು ವಾರಗಳ ಕಾಲ ಯಾವುದೇ ಸಾರ್ವಜನಿಕ ರಾಲಿ, ಕಾರ್ಯಕ್ರಮ ಮಾಡಲ್ಲ ಎಂದು ವಿಜಯ್ ಮಹತ್ವದ ತೀರ್ಮಾನ ಕೈಗೊಂಡಿದ್ದಾರೆ. ಸಾರ್ವಜನಿಕ ಕಾರ್ಯಕ್ರಮ ಮಾತ್ರವಲ್ಲ, ಪಕ್ಷದ ಯಾವುದೇ ಸಭೆ, ಸಮಾರಂಭವನ್ನೂ ಆಯೋಜಿಸಲ್ಲ ಎಂದಿದ್ದಾರೆ.
ಕರೂರು ದುರಂತ ನನಗೆ ಆಘಾತ ಮತ್ತು ತೀವ್ರ ನೋವು ತಂದಿದೆ. ಆವತ್ತು ಮತ್ತಷ್ಟು ಸಾವು, ನೋವು ಆಗಬಾರದು ಎಂಬ ಕಾರಣಕ್ಕೆ ತಕ್ಷಣವೇ ಸ್ಥಳದಿಂದ ತೆರಳಿದ್ದೆ. ಸತ್ಯ ಸದ್ಯದಲ್ಲೇ ಹೊರಬರಲಿದೆ ಎಂದು ಅವರು ಹೇಳಿದ್ದಾರೆ.