Publish Date: Fri, 24 Jun 2022 (12:49 IST)
Updated Date: Fri, 24 Jun 2022 (12:52 IST)
ಬಾಲಿವುಡ್ ನಟಿ ಕಂಗನಾ ರಣಾವತ್ ಈ ಹಿಂದೆ ಮಹಾರಾಷ್ಟ್ರದ ಸಿಎಂ ಉದ್ಭವ ಠಾಕ್ರೆ ವಿರುದ್ಧ ಮಾತನಾಡಿದ್ದಾರೆ ಎನ್ನಲಾದ ವಿಡಿಯೋ ಇದೀಗ ಭಾರೀ ವೈರಲ್ ಆಗಿದೆ.
ಸ್ತ್ರೀಯರಿಗೆ ಅಪಮಾನ ಯಾರು ಮಾಡುತ್ತಾರೋ ಅವರ ಪತನ ನಿಶ್ಚಿತ ಎಂದು ಹೇಳಿದ್ದ ವಿಡಿಯೋ, ಪ್ರಸ್ತುತ ಮಹಾರಾಷ್ಟ್ರದ ಸಿಎಂ ಉದ್ಭವ ಠಾಕ್ರೆ ಅವರಿಗೆ ಅನ್ವಯಿಸುತ್ತಿದೆ ಎಂದು ಬಣ್ಣಿಸಲಾಗುತ್ತಿದೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಠಾಕ್ರೆ ಅಭಿಮಾನಿಗಳು ಕಂಗನಾ ವಿರುದ್ಧ ತಿರುಗಿ ಬಿದ್ದಿದ್ದಾರೆ.
ಕಂಗನಾ ರಣಾವತ್ ನಟಿಸಿದ್ದ ಧಾಕಡ್ ಸಿನಿಮಾ ಬಾಕ್ಸ್ ಆಫೀಸಿನಲ್ಲಿ ಮಕಾಡೆ ಮಲಗಿದೆ. ನಿರ್ಮಾಪಕರಿಗೆ ಐವತ್ತು ಕೋಟಿಗೂ ಅಧಿಕ ನಷ್ಟವನ್ನುಂಟು ಮಾಡಿದೆ. ಯಾರಿಗೆ ನಟನೆ ಬರುವುದಿಲ್ಲವೋ ಅವರಿಗೆ ಸೋಲು ನಿಶ್ಚಿತ ಎನ್ನುವ ಅರ್ಥದಲ್ಲಿ ಠಾಕ್ರೆ ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ.
ಕಂಗನಾಗೆ ನಟಿಸುವುದು ಮಾತ್ರ ಗೊತ್ತು, ಅವರಿಗೆ ರಾಜಕೀಯ ಗಂಧಗಾಳಿ ಗೊತ್ತಿಲ್ಲ. ಅವರು ಕಾಸಿಗಾಗಿ ನಟಿಸಿದರೆ ಉತ್ತಮ ಎಂದು ಠಾಕ್ರೆ ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ.