Select Your Language

Notifications

webdunia
webdunia
webdunia
webdunia

ಪ್ರಧಾನಿ ಮೋದಿ, ಭದ್ರತಾ ಸಲಹೆಗಾರ ಅಜಿತ್ ದೋವಲ್ ಜೀವಕ್ಕೆ ಕುತ್ತು!

ಪ್ರಧಾನಿ ಮೋದಿ, ಭದ್ರತಾ ಸಲಹೆಗಾರ  ಅಜಿತ್ ದೋವಲ್ ಜೀವಕ್ಕೆ ಕುತ್ತು!
ನವದೆಹಲಿ , ಬುಧವಾರ, 25 ಸೆಪ್ಟಂಬರ್ 2019 (08:59 IST)
ನವದೆಹಲಿ: ಪ್ರಧಾನಿ ಮೋದಿ ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಹತ್ಯೆಗೆ ಪ್ರಮುಖ ಉಗ್ರ ಸಂಘಟನೆ ಜೈಶ್ ಎ ಮೊಹಮ್ಮದ್ ಸಂಚು ರೂಪಿಸಿದೆ ಎಂಬ ವಿಚಾರ ಬೆಳಕಿಗೆ ಬಂದಿದೆ.


ಜಮ್ಮು ಕಾಶ್ಮೀರದಲ್ಲಿ ಆರ್ಟಿಕಲ್ 370 ರದ್ದುಗೊಳಿಸಿದ್ದಕ್ಕೆ ಉಗ್ರರು ಈ ರೀತಿ ಪ್ರತೀಕಾರ ತೀರಿಸಿಕೊಳ್ಳಲು ಸಂಚು ರೂಪಿಸಿದ್ದಾರೆ ಎನ್ನಲಾಗಿದೆ.

ಆತ್ಮಾಹುತಿ ದಾಳಿ ಇಲ್ಲವೇ ಇತರ ಯಾವುದೇ ರೂಪದಲ್ಲೂ ಮೋದಿ ಮತ್ತು ಅಜಿತ್ ದೋವಲ್ ಹತ್ಯೆ ಮಾಡಲು ಜೈಶ್ ಸಂ‍ಘಟನೆ ಸಂಚು ಮಾಡಿದೆಯಂತೆ. ಜಮ್ಮು ಕಾಶ್ಮೀರದಲ್ಲಿ ಆರ್ಟಿಕಲ್ 370 ರದ್ದುಗೊಳಿಸಲು ಪ್ರಮುಖ ಕಾರಣ ಈ ಇಬ್ಬರು ನಾಯಕರು. ಅದೇ ಕಾರಣಕ್ಕೆ ಇಬ್ಬರನ್ನೂ ಹತ್ಯೆ ಮಾಡಿ ಪ್ರತೀಕಾರ ತೀರಿಸಿಕೊಳ್ಳಲು ಮುಂದಾಗಿದೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಅಮಿತಾಬ್ ಬಚ್ಚನ್ ಮುಡಿಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಗೌರವ