Publish Date: Mon, 23 Sep 2019 (08:50 IST)
Updated Date: Mon, 23 Sep 2019 (08:52 IST)
ಹ್ಯೂಸ್ಟನ್: ಅಮೆರಿಕಾದ ಹ್ಯೂಸ್ಟನ್ ನಲ್ಲಿ ಹೌಡಿ ಮೋದಿ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಭರ್ಜರಿ ಭಾಷಣ ಮಾಡಿದ್ದು, ಮೋದಿ ಮೋಡಿಗೆ ವಿಶ್ವವೇ ತಲೆಬಾಗಿದೆ.
ಈ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಭಾಷಣದ ನಡುವೆ ಕನ್ನಡ ಸೇರಿದಂತೆ ಭಾರತದ ಪ್ರಮುಖ ಭಾಷೆಗಳಲ್ಲಿ ಮಾತನಾಡಿದ್ದು ವಿಶೇಷವಾಗಿ ಗಮನಸೆಳೆಯಿತು.
ಹೌಡಿ ಎಂದರೆ ಹೇಗಿದ್ದೀರಿ ಎಂದರ್ಥ. ಹೀಗಾಗಿ ಭಾಷಣದ ನಡುವೆ ನೀವಿಲ್ಲದೇ ನಾವಿಲ್ಲ ಎಂದ ಮೋದಿ ಎಲ್ಲವೂ ಚೆನ್ನಾಗಿದೆ ಎಂದು ಕನ್ನಡ, ಮಲಯಾಳ, ತೆಲುಗು ಸೇರಿದಂತೆ ಬೇರೆ ಬೇರೆ ಭಾಷೆಗಳಲ್ಲಿ ಹೇಳುವ ಮೂಲಕ ಮೆಚ್ಚುಗೆಗೆ ಪಾತ್ರರಾದರು. ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಅಮೆರಿಕಾ ಅಧ‍್ಯಕ್ಷ ಡೊನಾಲ್ಡ್ ಟ್ರಂಪ್ ಕೂಡಾ ವೇದಿಕೆಯ ಕೆಳ ಭಾಗ ಇತರ ಸಂಸದರೊಂದಿಗೆ ಕುಳಿತು ಮೋದಿ ಭಾಷಣವನ್ನು ಆಲಿಸಿದ್ದು ವಿಶೇಷವಾಗಿತ್ತು. ಬಳಿಕ ಟ್ರಂಪ್ ಕೂಡಾ ನೆರೆದಿದ್ದ ಅಪಾರ ಜನಸ್ತೋಮವನ್ನು ಉದ್ದೇಶಿಸಿ ಮಾತನಾಡಿದರು.