Select Your Language

Notifications

webdunia
webdunia
webdunia
webdunia

ತೇಜ್ ಪ್ರತಾಪ್ ಯಾದವ್ ಕಪಾಳಕ್ಕೆ ಹೊಡೆದವರಿಗೆ 1ಕೋಟಿ ಬಹುಮಾನ ಘೋಷಣೆ

ತೇಜ್ ಪ್ರತಾಪ್ ಯಾದವ್ ಕಪಾಳಕ್ಕೆ ಹೊಡೆದವರಿಗೆ 1ಕೋಟಿ ಬಹುಮಾನ ಘೋಷಣೆ
ಪಾಟ್ನಾ , ಶನಿವಾರ, 25 ನವೆಂಬರ್ 2017 (14:40 IST)
ಬಿಹಾರದ ಉಪ ಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿಯ ಅವರನ್ನು ಟೀಕಿಸಿರುವ ರಾಷ್ಟ್ರೀಯ ಜನತಾ ದಳ (ಆರ್ ಜೆಡಿ) ನಾಯಕ ತೇಜ್ ಪ್ರತಾಪ್ ಯಾದವ್ ಅವರಿಗೆ ಕಪಾಳಮೋಕ್ಷ ಮಾಡಿದರೆ ಒಂದು ಕೋಟಿ ರೂಪಾಯಿ ಬಹುಮಾನ ನೀಡುವುದಾಗಿ ಬಿಜೆಪಿಯ ಮುಖಂಡರು ಹೇಳಿರುವುದು ವಿವಾದಕ್ಕೆ ಸೃಷ್ಠಿಸಿದೆ.
 
ಪಾಟ್ನಾ ಜಿಲ್ಲೆಯ ಬಿಜೆಪಿ ಮಾಧ್ಯಮ ಘಟಕದ ಉಸ್ತುವಾರಿ ಅನಿಲ್ ಸಹಾನಿ ಅವರು, ತೇಜ್ ಪ್ರತಾಪ್ ಯಾದವ ಅವರ ಬೆದರಿಕೆ ಸುಶೀಲ್‌ ಕುಮಾರ ಅವರಿಗೆ ಬೆದರಿಕೆ ಹಾಕಿರುವುದನ್ನು ಖಂಡಿಸಿದ್ದರು.
 
ಇನ್ನು ಒಂದು ಹೆಜ್ಜೆ ಮುಂದೆ ಹೋಗಿ ಯಾದವ್ ಕೆನ್ನೆಗೆ ಹೊಡೆದವರಿಗೆ ಒಂದು ಕೋಟಿ ರೂಪಾಯಿ ಬಹುಮಾನ ನೀಡುವುದಾಗಿ ಹೇಳಿರುವುದು ವಿವಾದಕ್ಕೆ ಎಡೆಮಾಡಿದೆ. ಈ ನಡುವೆ ಬೇಜವಾಬ್ದಾರಿ ಹೇಳಿಕೆ ನೀಡಿರುವವರ ವಿರುದ್ಧ ಶಿಸ್ತು ಕ್ರಮ ಜರುಗಿಸುವುದಾಗಿ ಹೇಳಿದ್ದಾರೆ

Share this Story:

Follow Webdunia kannada

ಮುಂದಿನ ಸುದ್ದಿ

ಚಿತ್ರದುರ್ಗದಲ್ಲಿ ಭೀಕರ ಅಪಘಾತ; ಐವರು ಸಾವು