Select Your Language

Notifications

webdunia
webdunia
webdunia
webdunia

ಯುವಕನ ರುಂಡ ಕತ್ತರಿಸಿ ಪೊಲೀಸ್ ಠಾಣೆಯಲ್ಲಿ ಎಸೆದು ಪರಾರಿಯಾದ ಆರೋಪಿಗಳು

ಯುವಕನ ರುಂಡ ಕತ್ತರಿಸಿ ಪೊಲೀಸ್ ಠಾಣೆಯಲ್ಲಿ ಎಸೆದು ಪರಾರಿಯಾದ ಆರೋಪಿಗಳು
ಕಡಲೂರು: , ಗುರುವಾರ, 11 ಮೇ 2017 (19:34 IST)
ಆಘಾತಕಾರಿ ಘಟನೆಯೊಂದರಲ್ಲಿ, ಹದಿಹರೆಯದ ಯುವಕನನ್ನು ಹತ್ಯೆಗೈದು ಅವನ ಶಿರಚ್ಛೇದಿತ ತಲೆಯನ್ನು ತಮಿಳುನಾಡಿನ ಕಡಲೂರು ಜಿಲ್ಲೆಯ ಪೊಲೀಸ್ ಠಾಣೆಯ ಆವರಣದಲ್ಲಿ ಎಸೆದೆ ಹೇಯ ಘಟನೆ ವರದಿಯಾಗಿದೆ.
 
ಸ್ಥಳೀಯ ಪೊಲೀಸರು ಪೊಲೀಸ್ ಠಾಣೆಯ ಬಳಿ ಸ್ಥಾಪಿಸಲಾದ ಕ್ಯಾಮರಾಗಳಿಂದ ಯಾರು ರುಂಡವನ್ನು ಎಸೆದಿರಬಹುದು ಎನ್ನುವ ಬಗ್ಗೆ ಸಿಸಿಟಿವಿಯಿಂದ ಮಾಹಿತಿ ಸಂಗ್ರಹಿಸುತ್ತಿದ್ದಾರೆ.
 
ಸಿಸಿಟಿವಿ ದೃಶ್ಯಗಳನ್ನು ಆಧರಿಸಿ, ಕೊಲೆಗೆ ಸಂಬಂಧಿಸಿದಂತೆ ಪೊಲೀಸರು 20 ರಿಂದ 24 ವರ್ಷದೊಳಗಿರುವ ಮೂವರು ಆರೋಪಿಗಳನ್ನು ಬಂಧಿಸಿ, 17 ವರ್ಷ ವಯಸ್ಸಿನ ಬಾಲಕನ ಹತ್ಯೆಯ ಬಗ್ಗೆ ವಿಚಾರಣೆ ಆರಂಭಿಸಿದ್ದಾರೆ. 
 
ಶತೃತ್ವದಿಂದಾಗಿ ಪುದುಚೇರಿಯಿಂದ 13 ಕಿ.ಮೀ ದೂರದಲ್ಲಿರುವ ಬಾಹೌರ್ ಪ್ರದೇಶದಲ್ಲಿ ಯುವಕನನ್ನು ಹತ್ಯೆ ಮಾಡಿ ರುಂಡವನ್ನು ಬೇರ್ಪಡಿಸಲಾಗಿದೆ ಎಂದು ಬಂಧಿತ ಆರೋಪಿಗಳು ವಿಚಾರಣೆಯಲ್ಲಿ ಬಾಯಿಬಿಟ್ಟಿದ್ದಾರೆ.
 
ಆತನನ್ನು ಶಿರಚ್ಛೇದನ ಮಾಡಿದ ಬಳಿಕ ರುಂಡವನ್ನು ಬ್ಯಾಗ್‌ನಲ್ಲಿ ಹಾಕಿಕೊಂಡು ದ್ವಿಚಕ್ರ ವಾಹನವೊಂದರಲ್ಲಿ ತೆರಳಿ ರೆಡ್ಡಿ ಚೌವಡಿ ಪೊಲೀಸ್ ಠಾಣೆಯಲ್ಲಿ ಎಸೆದಿದ್ದೇವೆ ಎಂದು ಆರೋಪಿಗಳು ಆಘಾತಕಾರಿ ಮಾಹಿತಿ ಬಹಿರಂಗಪಡಿಸಿದ್ದಾರೆ. 
 
ರುಂಡವನ್ನು ಬೇರ್ಪಡಿಸಿದ ಯುವಕನ ಮೃತದೇಹ ಬಾಹೌರ್ ಲೇಕ್ ಬಳಿ ದೊರೆತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಇದೀಗ, ರೌಡಿಶೀಟರ್ ನಾಗ ಪತ್ನಿ ಲಕ್ಷ್ಮಿ ಪರಾರಿ