Select Your Language

Notifications

webdunia
webdunia
webdunia
webdunia

ಇದೀಗ, ರೌಡಿಶೀಟರ್ ನಾಗ ಪತ್ನಿ ಲಕ್ಷ್ಮಿ ಪರಾರಿ

ಇದೀಗ, ರೌಡಿಶೀಟರ್ ನಾಗ ಪತ್ನಿ ಲಕ್ಷ್ಮಿ ಪರಾರಿ
ಬೆಂಗಳೂರು , ಗುರುವಾರ, 11 ಮೇ 2017 (18:48 IST)
ರೌಡಿಶೀಟರ್ ನಾಗ ಮತ್ತು ಆತನ ಪುತ್ರರಾದ ಗಾಂಧಿ ಮತ್ತು ಶಾಸ್ತ್ರಿ ಬಂಧನದ ಸುದ್ದಿ ತಿಳಿಯುತ್ತಿದ್ದಂತೆ ಇದೀಗ ನಾಗನ ಪತ್ನಿ ಲಕ್ಷ್ಮಿ ಪರಾರಿಯಾಗಿದ್ದಾಳೆ ಎಂದು ಮೂಲಗಳು ತಿಳಿಸಿವೆ.
 
ಪತಿಯ ಬಂಧನದ ಸುದ್ದಿ ಮಾಹಿತಿ ದೊರೆಯುತ್ತಿದ್ದಂತೆ ಪತ್ನಿ ಲಕ್ಷ್ಮಿ ಮನೆಗೆ ಬೀಗ ಹಾಕಿ ಪರಾರಿಯಾಗಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
 
ತಮಿಳುನಾಡಿನ ವೆಲ್ಲೂರು ಜಿಲ್ಲೆಯ ಅರ್ಕಾಟ್`ನಲ್ಲಿ ನಾಗನನ್ನ ಬಂಧಿಸಿದ್ದಾರೆ ಎನ್ನಲಾಗಿದೆ. ಎಸಿಪಿ ರವಿಕುಮಾರ್ ನೇತೃತ್ವದ ತಂಡ ಈ ಕಾರ್ಯಾಚರಣೆ ನಡೆಸಿದೆ.
 
ತೋಟದ ಮನೆಯಲ್ಲಿ ಅಡಗಿದ್ದ ನಾಗ ಫೋನ್ ಮಾಡಲು ಹೆದ್ದಾರಿಗೆ ಬಂದಿದ್ದಾಗ  ಒಂದೂವರೆ ಕಿ.ಮೀ ಚೇಸ್ ಮಾಡಿ ಪೊಲೀಸರು ಬಂಧಿಸಿದ್ದಾರೆ. ನಾಗನ ಜೊತೆ ಮಕ್ಕಳಾದ ಶಾಸ್ತ್ರೀ ಮತ್ತು ಗಾಂಧಿಯನ್ನೂ ವಶಕ್ಕೆ ಪಡೆಯಲಾಗಿದೆ ಎಂದು ತಿಳಿದುಬಂದಿದೆ. ರಾತ್ರಿ ವೇಳೆ ನಾಗನನ್ನ ಬೆಂಗಳೂರಿಗೆ ಕರೆ ತಂದು ಬಳಿಕ ನಾಳೆ ನ್ಯಾಯಾಲಯಕ್ಕೆ ಹಾಕರುಪಡಿಸುವ ಸಾಧ್ಯತೆ ಇದೆ.

 ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಸಿದ್ದಗಂಗಾ ಶ್ರೀಗಳ ಆರೋಗ್ಯದಲ್ಲಿ ಕೊಂಚ ಏರುಪೇರು