Publish Date: Wed, 27 Jan 2021 (09:48 IST)
Updated Date: Wed, 27 Jan 2021 (09:50 IST)
ಭೋಪಾಲ್ : ಪಾಠ ಹೇಳಿಕೊಡುವ ನೆಪದಲ್ಲಿ ಹುಡುಗಿಯನ್ನು ಮನೆಗೆ ಕರೆದ ಶಿಕ್ಷಕನೊಬ್ಬ ಅವಳ ಮೇಲೆ ಮಾನಭಂಗ ಎಸಗಿದ ಘಟನೆ ಮಧ್ಯಪ್ರದೇಶದ ಪನ್ನಾದಲ್ಲಿ ನಡೆದಿದೆ.
ಹುಡುಗಿ ತನ್ನ ತಮ್ಮನ ಜೊತೆ ಶಿಕ್ಷಕನ ಮನೆಗೆ ಬಂದಿದ್ದಾಳೆ. ಆದರೆ ಶಿಕ್ಷಕ ಅವಳ ತಮ್ಮನನ್ನು ಮನೆಗೆ ಕಳುಹಿಸಿ ಇಂತಹ ಘೋರ ಕೃತ್ಯ ಎಸಗಿದ್ದಾನೆ. ಈ ಬಗ್ಗೆ ಯಾರಿಗೂ ಹೇಳಬಾರದೆಂದು ಬೆದರಿಕೆ ಹಾಕಿದ್ದಾನೆ. ಆದರೆ ಹುಡುಗಿ ಈ ವಿಚಾರವನ್ನು ತಂದೆಗೆ ತಿಳಿಸಿದ ಹಿನ್ನಲೆಯಲ್ಲಿ ತಂದೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.ಪೊಲೀಸರು ಕ್ರಮ ಕೈಗೊಂಡಿದ್ದಾರೆ ಎನ್ನಲಾಗಿದೆ.