Webdunia - Bharat's app for daily news and videos

Install App

12 ಗಂಟೆ ಕೆಲಸ ಮಾಡಿದರೆ ವಾರದಲ್ಲಿ 3 ವಾರದ ರಜೆ! ಜುಲೈ 1ರಿಂದ ಹೊಸ ನಿಯಮ ಜಾರಿ!

Webdunia
ಶುಕ್ರವಾರ, 24 ಜೂನ್ 2022 (16:17 IST)

ಉದ್ಯೋಗಿಗಳಿಂದ ಹೆಚ್ಚು ಅವಧಿಯ ಕೆಲಸ ಮಾಡಿಸಬಹುದು. ಆದರೆ ಹಾಗೆ ಮಾಡಿದರೆ ಹೆಚ್ಚುವರಿ ರಜೆ ನೀಡಬೇಕು ಎಂಬುದು ಸೇರಿದಂತೆ ಕೇಂದ್ರ ಕಾರ್ಮಿಕ ಇಲಾಖೆಯ ಹೊಸ ಮಾರ್ಗಸೂಚಿ ಜುಲೈ ೧ರಿಂದ ಜಾರಿಗೆ ಬರಲಿದೆ.

ಕೇಂದ್ರ ಕಾರ್ಮಿಕ ಸಚಿವಾಲಯ ಹಲವು ಕಾರ್ಮಿಕ ನಿಯಮಗಳನ್ನು ಜುಲೈ 1ರಿಂದ ಜಾರಿಗೊಳಿಸಲಿದೆ. ಈ ನಿಯಮಗಳ ಪ್ರಕಾರ ಕೆಲಸದ ಅವಧಿ, ಪಿಎಫ್‌ ಪಾಲು ಮತ್ತು ಉದ್ಯೋಗಿಗಳ ಕೈಗೆ ಬರುವ ವೇತನದ ಮೊತ್ತ ಸೇರಿದಂತೆ ಹಲವು ನಿಯಮಗಳು ಜಾರಿಗೆ ಬರಲಿವೆ.

ಹೊಸ ಮಾರ್ಗಸೂಚಿ ಜಾರಿಗೆ ತರುವ ಉದ್ದೇಶದಿಂದ ಕೇಂದ್ರ ಸರಕಾರ ಈ ನಿಟ್ಟಿನಲ್ಲಿ ಸಿದ್ಧತೆ ಆರಂಭಿಸಿದ್ದು, ಜುಲೈ ೧ರಿಂದ ಈ ನಿಯಮಗಳು ಜಾರಿ ಬರಲಿವೆ.

ಹೊಸ ನಿಯಮದ ಪ್ರಕಾರ ಕಂಪನಿಗಳು ಕೆಲಸದ ಅವಧಿಯಲ್ಲಿ 8-9 ಗಂಟೆಯಿಂದ 12 ಗಂಟೆಗೆ ವಿಸ್ತರಿಸಬಹುದು. ಆದರೆ ಆಗ ವಾರದಲ್ಲಿ ಮೂರು ದಿನ ವಾರದ ರಜೆ ನೀಡಬೇಕಾಗುತ್ತದೆ.

ನೂತನ ವೇತನದ ನಿಯಮದ ಪ್ರಕಾರ ಉದ್ಯೋಗಿಗಳು ಒಟ್ಟಾರೆ ವೇತನದ ಶೇ.೫೦ರಷ್ಟನ್ನು ಮೂಲ ವೇತನ ಎಂದು ಪರಿಗಣಿಸಬೇಕು. ಅಲ್ಲದೇ ಪಿಎಫ್‌ ಹಂಚಿಕೆಯ ಮೊತ್ತ ಕೂಡ ಉದ್ಯೋಗಿಗಳು ಮತ್ತು ಕಂಪನಿಗಳ ಪ್ರಮಾಣದಲ್ಲಿ ಏರಿಕೆ ಆಗಲಿದೆ.

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments