ಕೇಂದ್ರ ವಿತ್ತಖಾತೆ ಸಚಿವ ಅರುಣ್ ಜೇಟ್ಲಿವರಿಗಿಂತ ನಾನು ಉತ್ತಮ ವಿತ್ತ ಸಚಿವರಾಗಬಲ್ಲೆ ಎಂದು ಬಿಜೆಪಿ ಮುಖಂಡ ಸುಬ್ರಹ್ಮಣ್ಯಂ ಸ್ವಾಮಿ ಹೇಳಿದ್ದಾರೆ.
ನಾನೊಬ್ಬ ಆರ್ಥಿಕ ತಜ್ಞ, ಜೇಟ್ಲಿ ಒಬ್ಬ ಲಾಯರ್ ಅವರು ಹೇಗೆ ನನಗಿಂತ ಉತ್ತಮ ಹಣಕಾಸು ಸಚಿವರಾಗಬಲ್ಲರು ಎಂದು ಪ್ರಶ್ನಿಸಿದ್ದಾರೆ.
ಇಂಡಿಯಾ ಟುಡೇ ಮೈಂಡ್ ರಾಕ್ಸ್ ಸಮಿಟ್ ಸಭೆಯಲ್ಲಿ ಕೇಂದ್ರ ಸಚಿವ ಅರುಣ್ ಜೇಟ್ಲಿಯವರಿಗಿಂತ ನೀವು ಉತ್ತಮ ಹಣಕಾಸು ಸಚಿವರಾಗಬಹುದೇ ಎನ್ನುವ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಿದ್ದರು.
ಎಐಎಂಐಎಂ ಮುಖಂಡ ಅಸಾದುದ್ದೀನ್ ಓವೈಸ್ ಹೇಳಿಕೆ ನೀಡಿ, ಒಂದು ವೇಳೆ ಸ್ವಾಮಿ ಹಣಕಾಸು ಸಚಿವರಾದಲ್ಲಿ ಹಣದುಬ್ಬರ ದರ ಇಳಿಕೆ ಕಾಣುತ್ತಿತ್ತು ಎನ್ನುವುದಕ್ಕೆ ಪ್ರತಿಕ್ರಿಯೆ ನೀಡಿದ ಸ್ವಾಮಿ, ದೀರ್ಘಾವಧಿಯಿಂದ ಉತ್ತರ ಮತ್ತು ದಕ್ಷಿಣ ಬ್ರಾಹ್ಮಣರ ನಡುವೆ ಅಂತರಿಕ ಹೋರಾಟವಿದೆ ಎಂದರು.
ಬಹಿರಂಗವಾಗಿ ಯಾವುದೇ ಹೇಳಿಕೆ ನೀಡದಂತೆ ನಿಮ್ಮ ಮೇಲೆ ನಿಷೇಧ ಹೇರಲಾಗಿದೆಯೇ ಎನ್ನುವ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ನನ್ನ ಮೇಲೆ ಅಂತಹ ಯಾವುದೇ ನಿಷೇಧವಿಲ್ಲ. ನೀವು ಹೆಚ್ಚು ಜೇಟ್ಲಿಯವರೊಂದಿಗೆ ಮಾತನಾಡುತ್ತಿರುವುದೇ ಸಮಸ್ಯೆಯಾಗಿದೆ ಎಂದು ಬಿಜೆಪಿ ಮುಖಂಡ ಸುಬ್ರಹ್ಮಣ್ಯಂ ಸ್ವಾಮಿ ತಿರುಗೇಟು ನೀಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ