Select Your Language

Notifications

webdunia
webdunia
webdunia
webdunia

ಬಿಜೆಪಿ ಸಂಸದ ಪ್ರಹ್ಲಾದ್ ಜೋಶಿ ವಿರುದ್ಧ ಹೊರಟ್ಟಿ ಗರಂ

ಬಿಜೆಪಿ ಸಂಸದ ಪ್ರಹ್ಲಾದ್ ಜೋಶಿ ವಿರುದ್ಧ ಹೊರಟ್ಟಿ ಗರಂ
ಹುಬ್ಬಳ್ಳಿ , ಶನಿವಾರ, 17 ಸೆಪ್ಟಂಬರ್ 2016 (17:08 IST)
ಬಿಜೆಪಿ ಸಂಸದ ಪ್ರಹ್ಲಾದ್ ಜೋಶಿ ಹುಬ್ಬಳ್ಳಿ ಮಹಾನಗರ ಪಾಲಿಕೆಯಲ್ಲಿ ಸಭೆ ನಡೆಸಿರುವುದ್ದಕ್ಕೆ ವಿಧಾನ ಪರಿಷತ್ ಸದಸ್ಯ ಬಸವರಾಜ್ ಹೊರಟ್ಟಿ ಗರಂ ಆಗಿದ್ದು, ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಪತ್ರ ಬರೆದಿದ್ದಾರೆ. 
 
ಸಂಸದ ಪ್ರಹ್ಲಾದ ಜೋಶಿ ತಮ್ಮ ಪಕ್ಷದ ಜನಪ್ರತಿನಿಧಿಗಳನ್ನು ಕರೆದುಕೊಂಡು ಏಕಪಕ್ಷೀಯವಾಗಿ ಸಭೆ ನಡೆಸುವ ಮೂಲಕ ಮಹಾನಗರ ಪಾಲಿಕೆಯನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ ಎಂದು ಬಸವರಾಜ್ ಹೊರಟ್ಟಿ ಆರೋಪಿಸಿದ್ದು, ಮುಂದೆ ಈ ರೀತಿಯಾಗದಂತೆ ಕ್ರಮ ಕೈಗೊಳ್ಳಲು ಸಿಎಂ ಸಿದ್ದರಾಮಯ್ಯಗೆ ಪತ್ರ ಬರೆದಿದ್ದಾರೆ. 
 
ಪ್ರಹ್ಲಾದ್ ಜೋಶಿ ಯಾವ ಅಧಿಕಾರದಿಂದ ಪಾಲಿಕೆಯಲ್ಲಿ ಸಭೆ ಕರೆದಿದ್ದಾರೆ? ಅವರ ನಿರ್ದೇಶನವನ್ನು ಅಧಿಕಾರಿಗಳು ಪಾಲಿಸಬಹುದೇ? ಹಾಗಾದರೇ ಎಲ್ಲಾ ಜನಪ್ರತಿನಿಧಿಗಳು ಪಾಲಿಕೆಯಲ್ಲಿ ಸಭೆ ಕರೆಯಬಹುದೇ? ಎಂದು ಪ್ರಶ್ನಿಸಿದರು.
 
ಹೀಗೆ ಸಭೆಯನ್ನು ನಡೆಸಿದರೇ ಪಾಲಿಕೆ, ಬಸ್ ನಿಲ್ದಾಣ ಮತ್ತು ರೆಲ್ವೆ ಸ್ಟೇಶನ್‌ಗಳಲ್ಲಿ ನಡೆಯುವ ಸಭೆಯಂತಾಗುತ್ತದೆ. ಸಂಸದರು ಹೊಸ ಕಾನೂನು ರೂಪಿಸಲು ಹೊರಟಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಬಸವರಾಜ್ ಹೊರಟ್ಟಿ ಲೇವಡಿ ಮಾಡಿದರು. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಸಿಎಂ ಸಮ್ಮುಖದಲ್ಲಿಯೇ ಖಮರುಲ್‌ರಿಂದ ಅಧಿಕಾರಿಗಳ ತರಾಟೆ