Select Your Language

Notifications

webdunia
webdunia
webdunia
webdunia

ಸುಷ್ಮಾ ಸ್ವರಾಜ್ ಹೃದಯ ವೈಶಾಲ್ಯತೆಯನ್ನು ಪಾಕ್ ಎಂದಿಗೂ ಕಲಿಯಲಾರದು

ಸುಷ್ಮಾ ಸ್ವರಾಜ್  ಹೃದಯ ವೈಶಾಲ್ಯತೆಯನ್ನು ಪಾಕ್ ಎಂದಿಗೂ ಕಲಿಯಲಾರದು
ನವದೆಹಲಿ , ಬುಧವಾರ, 5 ಅಕ್ಟೋಬರ್ 2016 (14:46 IST)
ಉರಿ ದಾಳಿ, ಬಳಿಕ ಕೈಗೊಂಡ ಸೀಮಿತ ದಾಳಿಯ ಬಳಿಕ ಪಾಕ್ ಮತ್ತು ಭಾರತದ ನಡುವಿನ ಸಂಬಂಧ ಬೂದಿ ಮುಚ್ಚಿದ ಕೆಂಡದಂತಿದೆ. ಇಂತಹ ವಿಷಯ ಸ್ಥಿತಿಯಲ್ಲೂ, ರಾಜತಾಂತ್ರಿಕವಾಗಿ ಎಷ್ಟೇ ಹಗೆತನವಿದ್ದರೂ ಮಾನವೀಯತೆಗೆ ಗಡಿಗಳಿಲ್ಲ ಎಂಬುದನ್ನು ತೋರಿಸಿರುವ ಕೇಂದ್ರ ಸಚಿವೆ ಸುಷ್ಮಾ ಸ್ವರಾಜ್ ಪಾಕಿಸ್ತಾನಕ್ಕೆ ನಾಯಕತ್ವ, ಹೃದಯ ವೈಶಾಲ್ಯತೆ ಎಂದರೇನು ಎಂಬುದನ್ನು ತೋರಿಸಿಕೊಟ್ಟಿದ್ದಾರೆ. 
ಜಾಗತಿಕ ಯುವ ಶಾಂತಿ ಉತ್ಸವದಲ್ಲಿ ಪಾಲ್ಗೊಳ್ಳಲು ಕಳೆದ 7 ದಿನಗಳಿಂದ ಭಾರತದಲ್ಲಿದ್ದ 19 ಪಾಕ್ ಯುವತಿಯರು ಮಂಗಳವಾರ ತವರಿಗೆ ಮರಳಿದರು. 
 
ಸೆಪ್ಟೆಂಬರ್ 27 ರಂದು ಅವರು ಭಾರತಕ್ಕೆ ಆಗಮಿಸಿದ್ದು, ಕಾಶ್ಮೀರದಲ್ಲಿ ಭಯೋತ್ಪಾದಕರ ನೆಲೆಗಳ ಮೇಲೆ ಭಾರತ ಸೀಮಿತ ದಾಳಿ ನಡೆಸಿದ ಬಳಿಕ ತಮ್ಮ ಮಕ್ಕಳ ಸುರಕ್ಷತೆ ಬಗ್ಗೆ ಆತಂಕಕ್ಕೀಡಾಗಿದ್ದರು. 19 ಯುವತಿಯರು ದೇಶಕ್ಕೆ ಮರಳುವಂತೆ ಪಾಕ್ ಕೂಡ ಒತ್ತಡ ಹೇರಿತ್ತು. ಹೀಗಾಗಿ ನಿಗದಿತ ಸಮಯಕ್ಕಿಂತ ಮೊದಲೇ ಅವರು ದೇಶಕ್ಕೆ ಹಿಂತಿರುವ ಅನಿವಾರ್ಯತೆ ಬಂದೊದಗಿತ್ತು. ಈ ಹಿನ್ನೆಲೆಯಲ್ಲಿ ಕಾರ್ಯಕ್ರಮದ ಸಂಚಾಲಕಿ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಅವರೊಂದಿಗೆ ಮಾತನಾಡಿದ್ದರು. ಅವರ ಮನವಿಗೆ ಸ್ಪಂದಿಸಿದ್ದ ಸುಷ್ಮಾ ಸ್ವರಾಜ್ ಅವರ ಸುರಕ್ಷಿತ ಮರಳುವಿಕೆಗೆ ವ್ಯವಸ್ಥೆ ಮಾಡುವುದಾಗಿ ವಾಗ್ದಾನ ಮಾಡಿದ್ದರು.
 
ವಿದೇಶಾಂಗ ವ್ಯವಹಾರಗಳ ಸಚಿವಾಲಯ ಸೇರಿದಂತೆ ಭಾರತೀಯ ಉನ್ನತ ಅಧಿಕಾರಿಗಳು  ಮಕ್ಕಳ ಸುರಕ್ಷತೆ ಬಗ್ಗೆ ಚಿಂತೆ ಬೇಡ ಎಂದು ಭರವಸೆ ನೀಡಿದ ಮೇಲೆ ಪ್ರವಾಸ ನಿಗದಿಯಂತೆ ಮುಂದುವರೆಯಿತು ಎಂದು ಆಯೋಜಕ ಪ್ರಮೋದ್ ಶರ್ಮಾ ಹೇಳಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

Share this Story:

Follow Webdunia kannada

ಮುಂದಿನ ಸುದ್ದಿ

ರಾಜ್ಯದ ಪರ ನಾರಿಮನ್ ವಾದ ಮಂಡಿಸಲು ನಮ್ಮ ಆಕ್ಷೇಪವಿಲ್ಲ: ಬಿಎಸ್‌ವೈ