Select Your Language

Notifications

webdunia
webdunia
webdunia
webdunia

ರಾಜ್ಯದ ಪರ ನಾರಿಮನ್ ವಾದ ಮಂಡಿಸಲು ನಮ್ಮ ಆಕ್ಷೇಪವಿಲ್ಲ: ಬಿಎಸ್‌ವೈ

ರಾಜ್ಯದ ಪರ ನಾರಿಮನ್ ವಾದ ಮಂಡಿಸಲು ನಮ್ಮ ಆಕ್ಷೇಪವಿಲ್ಲ: ಬಿಎಸ್‌ವೈ
ಹುಬ್ಬಳ್ಳಿ , ಬುಧವಾರ, 5 ಅಕ್ಟೋಬರ್ 2016 (14:43 IST)
ಕಾವೇರಿ ನದಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ರಾಜ್ಯದ ಹಿತದೃಷ್ಟಿಯಿಂದ ಫಾಲಿ ಎಸ್ ನಾರಿಮನ್ ಅವರ ವಾದ ಮಂಡಿಸಲಿ. ಇದಕ್ಕೆ ನಮ್ಮ ಆಕ್ಷೇಪವಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
 
ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾವೇರಿ ನದಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ವಿಧಾನ ಮಂಡಲದ ವಿಶೇಷ ಅಧಿವೇಶನದಲ್ಲಿ ತೆಗೆದುಕೊಂಡ ನಿರ್ಣಯ ಸ್ವಾಗತರ್ಹವಾಗಿದ್ದು, ಎಲ್ಲರೂ ಸೇರಿ ಒಂದು ನಿರ್ಣಯಕ್ಕೆ ಬಂದಿದ್ದಾರೆ. ಹೀಗಾಗಿ ಈ ಕುರಿತು ಗೊಂದಲ ಸೃಷ್ಟಿಸುವುದು ಬೇಡ ಎಂದು  ಹೇಳಿದರು.
 
ಕಾವೇರಿ ಜಲಾಶಯಕ್ಕೆ ಒಳ ಹರಿವಿನಿಂದ ಬಂದ ನೀರನ್ನು ತಮಿಳುನಾಡಿಗೆ ಬಿಡಲಿ ಎಂದು ರಾಜ್ಯ ಸರಕಾರದ ನಿರ್ಧಾರಕ್ಕೆ ಬೆಂಬಲ ಸೂಚಿಸಿದರು. 
 
ಕಾವೇರಿ ವಿವಾದಕ್ಕೆ ಸಂಬಂಧಿಸಿದಂತೆ ಅಕ್ಟೋಬರ್ 3 ರಂದು ಕರೆಯಲಾಗಿದ್ದ ಒಂದು ದಿನದ ವಿಶೇಷ ಅಧಿವೇಶನದಲ್ಲಿ ಕುಡಿಯುವ ನೀರಿನ ಜೊತೆಗೆ ರೈತರ ಬೆಳೆಗೆ ನೀರು ಬಿಡುವು ನಿರ್ಣಯವನ್ನು ರಾಜ್ಯ ಸರಕಾರ ಕೈಗೊಂಡಿತ್ತು. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಪ್ರತ್ಯೇಕತಾವಾದಿ ನಾಯಕಿ ಅಸಿಯಾ ಅಂದ್ರಾಬಿ ಬಂಧನ