Publish Date: Wed, 05 Oct 2016 (14:39 IST)
Updated Date: Wed, 05 Oct 2016 (14:57 IST)
ಪ್ರತ್ಯೇಕತಾವಾದಿ ನಾಯಕಿ ಅಸಿಯಾ ಅಂದ್ರಾಬಿ ಗುರುವಾರ ಬಂಧನಕ್ಕೊಳಗಾಗಿದ್ದಾಳೆ.
ದುಖ್ತರನ್ ಎ ಮಿಲ್ಲತ್ (ಪ್ರತ್ಯೇಕತಾವಾದಿ ಹುರಿಯತ್‌ನ ಮಹಿಳಾ ವಿಭಾಗ) ಸಂಘಟನೆಯ ನಾಯಕಿಯಾಗಿರುವ ಆಕೆಯನ್ನು ಬಸಂತ ಬಾಗ್ ಪ್ರದೇಶದಲ್ಲಿ ಮಂಗಳವಾರ ಮಧ್ಯಾಹ್ನ ಬಂಧಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಉಗ್ರ ಕಮಾಂಡರ್ ಬುರ್ಹಾನ್ ವಾನಿ ಹತ್ಯೆ ಬಳಿಕ ಕಾಶ್ಮೀರದಲ್ಲಿ ಹಿಂಸಾಚಾರ ಭುಗಿಲೆದ್ದಾಗಿನಿಂದ(ಜುಲೈ 9)
ಕಾನೂನು ಜಾರಿ ಸಂಸ್ಥೆಗಳು ಆಕೆಗಾಗಿ ಶೋಧ ನಡೆಸಿದ್ದವು.
ಭೂಗತವಾಗಿದ್ದುಕೊಂಡು ಮೂಲಭೂತವಾದಿ ಹೇಳಿಕೆಗಳನ್ನು ನೀಡುವುದರ ಮೂಲಕ ಅಂದ್ರಾಬಿ ಹಿಂಸೆಯನ್ನು ಪ್ರಚೋದಿಸುತ್ತಿದ್ದಳು.
ಕಾಶ್ಮೀರದಲ್ಲಿ ಸಂಘರ್ಷ ಆರಂಭವಾದ ಬಳಿಕ ಬಂಧನದಿಂದ ತಪ್ಪಿಸಿಕೊಂಡಿದ್ದ ಏಕೈಕ ಪ್ರತ್ಯೇಕತಾವಾದಿ ನಾಯಕಿ ಅಂದ್ರಾಬಿಯಾಗಿದ್ದಳು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ