Select Your Language

Notifications

webdunia
webdunia
webdunia
webdunia

ಕೇಂದ್ರದ ವಿರುದ್ಧ ಸುಪ್ರೀಂ ತರಾಟೆ!

ಕೇಂದ್ರದ ವಿರುದ್ಧ ಸುಪ್ರೀಂ ತರಾಟೆ!
ನವದೆಹಲಿ , ಬುಧವಾರ, 19 ಜನವರಿ 2022 (12:33 IST)
ನವದೆಹಲಿ : ದೇಶದಲ್ಲಿ ಹಸಿವಿನಿಂದ ಸಾವನ್ನಪ್ಪಿದವರ ಸಂಖ್ಯೆಯ ಇತ್ತೀಚಿನ ದತ್ತಾಂಶವನ್ನು ಒದಗಿಸಿ.
 
ಹಸಿವು ಮುಕ್ತ ದೇಶವನ್ನಾಗಿಸಲು ರಾಷ್ಟ್ರೀಯ ಮಾದರಿ ಯೋಜನೆಯನ್ನು ರೂಪಿಸುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಸೂಚಿಸಿದೆ. ಸಿಜೆಐ ಎನ್.ವಿ.ರಮಣ ನೇತೃತ್ವದ ಪೀಠವು ಹಸಿವಿನಿಂದ ಸಾವು ಕುರಿತು 2015-16ರ ವರದಿಯನ್ನು ಅಪ್ಡೇಟ್ ಮಾಡದಿರುವ ಕೇಂದ್ರವನ್ನು ತರಾಟೆಗೆ ತೆಗೆದುಕೊಂಡಿದೆ.

ದೇಶದಲ್ಲಿ ಹಸಿವಿನಿಂದ ಸಾವು ಸಂಭವಿಸಿಲ್ಲ ಎಂದು ನೀವು ಹೇಳುತ್ತೀರಾ? ನಾವು ಆ ಹೇಳಿಕೆಯನ್ನು ಅವಲಂಬಿಸಬಹುದೇ ಎಂದು ಪ್ರಶ್ನಿಸಿ ತರಾಟೆಗೆ ತೆಗೆದುಕೊಂಡಿದೆ.  

ರಾಜ್ಯ ಸರ್ಕಾರಗಳು ಸಹ ಹಸಿವಿನಿಂದ ಸಾವನ್ನಪ್ಪಿದವರ ಕುರಿತು ವರದಿ ಮಾಡಿಲ್ಲ. ದೇಶದಲ್ಲಿ ಹಸಿವಿನಿಂದ ಸಾವು ಸಂಭವಿಸಿಲ್ಲ ಎಂದು ಅರ್ಥ ಮಾಡಿಕೊಳ್ಳಬೇಕೆ? ಭಾರತ ಸರ್ಕಾರವು ನಮಗೆ ಹಸಿವಿನಿಂದ ಸಾವನ್ನಪ್ಪಿರುವ ಬಗ್ಗೆ ಸೂಕ್ತ ಮಾಹಿತಿ ಮತ್ತು ದತ್ತಾಂಶ ನೀಡಬೇಕು. ನಮಗೆ ಮಾಹಿತಿ ನೀಡಲು ನಿಮ್ಮ ಅಧಿಕಾರಿಗಳನ್ನು ಕೇಳಿ ಎಂದು ಅಟರ್ನಿ ಜನರಲ್ ಕೆ.ಕೆ.ವೇಣುಗೋಪಾಲ್ ಅವರಿಗೆ ಕೋರ್ಟ್ ಸೂಚಿಸಿದೆ.

134 ಯೋಜನೆಗಳು ಜಾರಿಯಲ್ಲಿವೆ. ಅಲ್ಲದೇ ರಾಜ್ಯಗಳಿಗೆ ಈಗಾಗಲೇ ಆಹಾರ ಧಾನ್ಯಗಳನ್ನು ವಿತರಿಸುವುತ್ತಿರುವುದರಿಂದ ಹೆಚ್ಚಿನ ಹಣವನ್ನು ಬೇರೆಡೆಗೆ ವಿನಿಯೋಗಿಸಲು ಸಾಧ್ಯವಿಲ್ಲ ಎಂದು ಕೋರ್ಟ್ಗೆ ವೇಣುಗೋಪಾಲ್ ಮಾಹಿತಿ ನೀಡಿದ್ದಾರೆ. ಈ ವೇಳೆ ಕೋರ್ಟ್, ಹೆಚ್ಚುವರಿ ಆಹಾರ ಧಾನ್ಯಗಳನ್ನು ಒದಗಿಸುವುದನ್ನು ಪರಿಗಣಿಸುವಂತೆ ಕೇಂದ್ರಕ್ಕೆ ಹೇಳಿದೆ.

ಜನರು ಹಸಿವಿನಿಂದ ಬಳಲಬಾರದು, ಸಾಯಬಾರದು ಎಂಬುದು ನಮ್ಮ ಆಶಯ. ನೋಡಲ್ ಯೋಜನೆಯನ್ನು ರೂಪಿಸಲು ನೀವು ನಿಮ್ಮ ಅಧಿಕಾರಿಗಳೊಂದಿಗೆ ಚರ್ಚಿಸಬೇಕು. ನಾವು ನ್ಯಾಯಾಲಯದ ಉದ್ದೇಶವನ್ನು ವಿವರಿಸಿದ್ದೇವೆ. ಪರಿಹಾರದ ಮಾರ್ಗವನ್ನು ಗುರುತಿಸಬೇಕಾಗಿದೆ ಎಂದು ಸಿಜೆಐ ರಮಣ ತಿಳಿಸಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಚೀನಾದ ಹೊಸ ಪ್ರಯತ್ನ : ಮಿನಿ ಕೃತಕ ಚಂದ್ರ!