Select Your Language

Notifications

webdunia
webdunia
webdunia
webdunia

ಸುಖಾಸುಮ್ಮನೆ ಮೋದಿ ಧ್ಯಾನದ ಬಗ್ಗೆ ವಿಪಕ್ಷ ರಾಜಕೀಯ ಮಾಡುತ್ತಿದೆ: ಅಣ್ಣಾಮಲೈ

Annamalai

sampriya

ತಿರುವಣ್ಣಾಮಲೈ , ಶನಿವಾರ, 1 ಜೂನ್ 2024 (16:27 IST)
Photo By X
ತಿರುವಣ್ಣಾಮಲೈ: ಭಾರತದ ಪ್ರಧಾನಿ ಒಂದು ಕಡೆ ಧ್ಯಾನ ಮಾಡುತ್ತಿದ್ದರೆ, ಇನ್ನೊಂದು ಕಡೆ ಜನರು ವಿವೇಕಾನಂದ ಸ್ಮಾರಕಕ್ಕೆ ಭೇಟಿ ನೀಡುತ್ತಿದ್ದು, ಇದರಿಂದ ಯಾರಿಗೂ ತೊಂದರೆಯಾಗಿಲ್ಲ.  ವಿರೋಧ ಪಕ್ಷಗಳು ಏನು ಮಾಡಬೇಕೆಂದು ತಿಳಿಯದೆ ರಾಜಕೀಯ ಮಾಡುತ್ತಿವೆ ಎಂದು ಅಣ್ಣಾಮಲೈ ಹೇಳಿದರು.

ಕನ್ಯಾಕುಮಾರಿ ಪ್ರಧಾನಿ ನರೇಂದ್ರ ಮೋದಿ ಧ್ಯಾನ ಮಾಡುತ್ತಿರುವ ಬಗ್ಗೆ ಚರ್ಚೆ ನಡೆಯುತ್ತಿರುವ ಸಂದರ್ಭದಲ್ಲಿ ತಮಿಳುನಾಡು ಬಿಜೆಪಿ ಘಟಕದ ಅಧ್ಯಕ್ಷ ಕೆ.ಅಣ್ಣಾಮಲೈ ಅವರು ಶನಿವಾರ ಅರುಣಾಚಲೇಶ್ವರ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದ್ದಾರೆ.

‘ಪ್ರಧಾನಿ ಕನ್ಯಾಕುಮಾರಿಗೆ ಖಾಸಗಿ ಕಾರ್ಯಕ್ರಮವಾಗಿ ಬಂದಿದ್ದು, ಒಬ್ಬ ಬಿಜೆಪಿ ಸ್ವಯಂಸೇವಕನೂ ಅಲ್ಲಿಗೆ ಹೋಗಿಲ್ಲ. ವಿರೋಧ ಪಕ್ಷಗಳಿಗೆ ಏನು ಮಾಡಬೇಕೆಂದು ತಿಳಿಯದೆ ಮೋದಿ ಅವರು ಧ್ಯಾನದ ಬಗ್ಗೆ ರಾಜಕೀಯ ಮಾಡುತ್ತಿವೆ’ ಎಂದು ವಾಗ್ದಾಳಿ ನಡೆಸಿದ್ದಾರೆ. 

ಚುನಾವಣೆ ಪ್ರಚಾರದ ಕೊನೆಯಲ್ಲಿ ಆಧ್ಯಾತ್ಮಿಕ ಸ್ಥಳಕ್ಕೆ ಭೇಟಿ ನೀಡುವ ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ವಿವೇಕಾನಂದ ರಾಕ್ ಸ್ಮಾರಕಕ್ಕೆ ಭೇಟಿ ನೀಡಿ ೪೫ ಗಂಟೆಗಳ ಧ್ಯಾನದಲ್ಲಿ ನಿರತರಾಗಿದ್ದಾರೆ.




Share this Story:

Follow Webdunia kannada

ಮುಂದಿನ ಸುದ್ದಿ

ವಾಲ್ಮೀಕಿ ನಿಗಮ ಪ್ರಕರಣದಲ್ಲಿ ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ: ಸಿ.ಎಂ.ಸಿದ್ದರಾಮಯ್ಯ