Webdunia - Bharat's app for daily news and videos

Install App

ಮಾತನಾಡಲು ಬರಲ್ಲ ಎನ್ನುತ್ತಲೇ ಸೊಗಸಾಗಿ ಮಾತನಾಡಿದ ಸುಧಾಮೂರ್ತಿ, ಕಿವಿಗೊಟ್ಟು ಆಲಿಸಿದ ಸಂಸದರು

Sampriya
ಬುಧವಾರ, 3 ಜುಲೈ 2024 (15:02 IST)
Photo Courtesy X
ನವದೆಹಲಿ: ಲೇಖಕಿ ಸುಧಾ ಮೂರ್ತಿ ಅವರು ರಾಜ್ಯಸಭೆಯಲ್ಲಿ ತಮ್ಮ ಚೊಚ್ಚಲ ಭಾಷಣದಲ್ಲಿ, ಗರ್ಭಕಂಠದ ಕ್ಯಾನ್ಸರ್ ವಿರುದ್ಧ ಹೋರಾಡಲು ಸರ್ಕಾರ ಪ್ರಾಯೋಜಿತ ಲಸಿಕೆ ಕಾರ್ಯಕ್ರಮಕ್ಕೆ ಹಾಗೂ ದೇಶೀಯ ಪ್ರವಾಸೋದ್ಯಮವನ್ನು ಉತ್ತೇಜಿಸಲು ಕರೆ ನೀಡಿದರು.

ನವದೆಹಲಿ:  ರಾಜ್ಯಸಭೆಯಲ್ಲಿ ನಾಮನಿರ್ದೇಶನಗೊಂಡಿರುವ ಸುಧಾಮೂರ್ತಿ ಅವರು ಇದೇ ಮೊದಲ ಬಾರಿಗೆ ರಾಜ್ಯಸಭೆಯಲ್ಲಿ ಭಾಷಣ ಮಾಡಿದರು. ನಾನು ರಾಜಕಾರಣಿಯಲ್ಲ. ನನಗೆ ಹೆಚ್ಚು ಮತ್ತು ರಾಜಕೀಯ ಮಾತುಗಳನ್ನು ಆಡಲು ಬರುವುದಿಲ್ಲ ಎನ್ನುತ್ತಲೇ ಭಾಷಣ ಶುರು ಮಾಡಿದ ಸುಧಾ ಮೂರ್ತಿ ಅವರು ಈ ಮೇಲಿನ ವಿಷಯಕ್ಕೆ ಸಂಬಂಧಿಸಿದಂತೆ ಪ್ರಸ್ತಾಪಿಸಿದರು.

ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಮುನ್ನಾದಿನದಂದು ಸುಧಾ ಮೂರ್ತಿ ಅವರನ್ನು ರಾಷ್ಟ್ರಪತಿಗಳು ರಾಜ್ಯಸಭೆಗೆ ನಾಮನಿರ್ದೇಶನ ಮಾಡಿದರು.

ಮಾರಣಾಂತಿಕ ಕಾಯಿಲೆಯಾಗಿರುವ ಗರ್ಭಕೋಶದ ಕ್ಯಾನ್ಸರ್‌ ​ ವಿರುದ್ಧ ಹೋರಾಡಲು ಸರ್ಕಾರಿ ಪ್ರಾಯೋಜಿತ ಲಸಿಕೆ ಕಾರ್ಯಕ್ರಮ ಪ್ರಾರಂಭ ಮಾಡಬೇಕು. ತಾಯಿ ಮೃತಪಟ್ಟರೆ ಮಕ್ಕಳು ಜೀವನ ಪೂರ್ತಿ ಅನಾಥರಾಗುತ್ತಾರೆ. ಹೀಗಾಗಿ, ಗರ್ಭಕೋಶ ಕ್ಯಾನ್ಸರ್​ಗೆ ಲಸಿಕೆ ನೀಡುವ ವ್ಯವಸ್ಥೆ ಮಾಡಬೇಕು. ಈಗ ಲಸಿಕೆಗೆ 1,300-1,400 ರೂ. ಆಗುತ್ತದೆ. ಸರ್ಕಾರ ಮಧ್ಯಪ್ರವೇಶಿಸಿದರೆ ಅದನ್ನು 800.ಗೆ ಹೆಣ್ಣುಮಕ್ಕಳಿಗೆ ಲಸಿಕೆ ಕೊಡಬಹುದು ಎಂದರು.

9-14 ವರ್ಷದೊಳಗಿನ ಹೆಣ್ಣುಮಕ್ಕಳಿಗೆ ಗರ್ಭಕೋಶ ಲಸಿಕೆ ಇದ್ದು, ಇದನ್ನು ತೆಗೆದುಕೊಂಡರೆ ಕ್ಯಾನ್ಸರ್​ ಅನ್ನು ತಡೆಗಟ್ಟಬಹುದು. ನಮ್ಮ ಹೆಣ್ಣುಮಕ್ಕಳ ಒಳಿತಿಗಾಗಿ ಈ ಲಸಿಕೆ ನೀಡಲು ನಾವು ಉತ್ತೇಜನ ನೀಡಬೇಕು ಎಂದು ಹೇಳಿದರು.

ಭಾರತದಲ್ಲಿ ಪ್ರವಾಸೋದ್ಯಮಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ದೇಶದಲ್ಲಿ 42 ಪ್ರವಾಸಿ ತಾಣಗಳು ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಸೇರಿವೆ. ಇನ್ನೂ 57 ತಾಣಗಳು ಪೆಂಡಿಂಗ್​ ಲಿಸ್ಟ್​ನಲ್ಲಿವೆ. ಇವುಗಳ ಕುರಿತು ಹೆಚ್ಚಿನ ಆದ್ಯತೆ ನೀಡಬೇಕು. ಕರ್ನಾಟಕದ ಶ್ರವಣಬೆಳಗೋಳದಲ್ಲಿನ ಬಾಹುಬಲಿಯ ಮೂರ್ತಿ, ಬದಾಮಿ, ಐಹೊಳೆ, ಮಧ್ಯಪ್ರದೇಶದ ಮಾಂಡು, ದೇಶದ ಗುಹೆಗಳು, ಲಿಂಗರಾಜ ದೇವಾಲಯಗಳು ದೇಶದ ಸಂಸ್ಕೃತಿಯ ತಾಣಗಳಾಗಿವೆ. ಇವುಗಳನ್ನು ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಸೇರಿಸಬೇಕೆಂದು ಒತ್ತಾಯ ಮಾಡಿದರು.<>

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ