Daily Horoscope

Select Your Language

Notifications

webdunia
webdunia
webdunia
webdunia

ಆಟವಾಡುತ್ತಿದ್ದ ಬಾಲಕಿ ಮೇಲೆ ಬೀದಿ ನಾಯಿ ದಾಳಿ, ಭಯಾನಕ Video

Rajasthan Stray Dog Attack Case
Photo Credit X
ಕೋಟಾ: ರಾಜಸ್ಥಾನದ ಕೋಟಾದಲ್ಲಿ ಶನಿವಾರ ಸಂಜೆ ಬೀದಿ ನಾಯಿಯೊಂದು ದಾಳಿ ನಡೆಸಿದ ಪರಿಣಾಮ ಐದು ವರ್ಷದ ಬಾಲಕಿಯೊಬ್ಬಳು ಗಂಭೀರವಾಗಿ ಗಾಯಗೊಂಡಿದ್ದಾಳೆ. 

ಸ್ಥಳೀಯರು ಮಧ್ಯಪ್ರವೇಶಿ, ನಾಯಿಯನ್ನು ಓಡಲು ಯತ್ನಿಸಿದಾಗ ಅದು  ಬಾಲಕಿಯನ್ನು ಕೆಳಗೆ ಕೆಡವಿ, ರಸ್ತೆಯುದ್ದಕ್ಕೂ ಎಳೆದುಕೊಂಡು ಹೋಗಿ ಪದೇ ಪದೇ ಕಚ್ಚುತ್ತಿರುವುದು ಸಿಸಿಟಿವಿ ದೃಶ್ಯಾವಳಿಯಲ್ಲಿ ಸೆರೆಯಾಗಿದೆ. 

ಚವಾನಿ ಪ್ರದೇಶದ ಬೆಂಗಾಲಿ ಕಾಲೋನಿಯಲ್ಲಿ ಸಂಜೆ 7.15ರ ಸುಮಾರಿಗೆ ಈ ಘಟನೆ ನಡೆದಿದೆ.

 ನಮ್ರಾ ಎಂದು ಗುರುತಿಸಲಾದ ಬಾಲಕಿ ತನ್ನ ಮನೆಯ ಹೊರಗಿನ ದಾರಿಯಲ್ಲಿ ಆಟವಾಡುತ್ತಿದ್ದಾಗ ಈ ಘಟನೆ ಸಂಭವಿಸಿದೆ. 

ದೃಶ್ಯಾವಳಿಗಳ ಪ್ರಕಾರ, ನಾಯಿಯು ಇದ್ದಕ್ಕಿದ್ದಂತೆ ಆಕೆಯತ್ತ ನುಗ್ಗಿ, ಆಕೆಯನ್ನು ನೆಲಕ್ಕೆ ಕೆಡವಿ, ಪಾದಚಾರಿಯ ದಾರಿಯಲ್ಲಿ ಎಳೆದುಕೊಂಡು ಹೋಗಿ ನಂತರ ಪದೇ ಪದೇ ದಾಳಿ ನಡೆಸಿದೆ. ಬಾಲಕಿಯ ಕಿರುಚಾಟವನ್ನು ಕೇಳಿದ ಸ್ಥಳೀಯ ಮಹಿಳೆಯೊಬ್ಬರು ಮತ್ತು ಇತರ ನಿವಾಸಿಗಳು ಕೂಡಲೇ ಸ್ಥಳಕ್ಕೆ ಧಾವಿಸಿ ನಾಯಿಯನ್ನು ಓಡಿಸುವಲ್ಲಿ ಯಶಸ್ವಿಯಾದರು. ನಮ್ರಾಳ ತಲೆ, ಬೆನ್ನು ಮತ್ತು ಮಣಿಕಟ್ಟುಗಳಿಗೆ ತೀವ್ರ ಗಾಯಗಳಾಗಿದ್ದು, ಚಿಕಿತ್ಸೆಗಾಗಿ ಆಕೆಯನ್ನು ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯಲಾಯಿತು ಎಂದು ಪಿಟಿಐ ವರದಿ ಮಾಡಿದೆ. 

ಈ ದಾಳಿಯು ಆ ಪ್ರದೇಶದಲ್ಲಿನ ಬೀದಿ ನಾಯಿಗಳ ಹಾವಳಿಯ ಬಗ್ಗೆ ನಿವಾಸಿಗಳಲ್ಲಿ ಆತಂಕವನ್ನು ಉಂಟುಮಾಡಿದೆ. ಈ ಪ್ರದೇಶದಲ್ಲಿ ಇಂತಹ ದಾಳಿ ನಡೆದಿರುವುದು ಇದೇ ಮೊದಲಲ್ಲ ಎಂದು ಸ್ಥಳೀಯರು ಹೇಳಿದ್ದಾರೆ; ಈ ಹಿಂದೆ ಸ್ವಚ್ಛತಾ ಕಾರ್ಮಿಕರೊಬ್ಬರ ಮೇಲೂ ಬೀದಿ ನಾಯಿಯೊಂದು ದಾಳಿ ನಡೆಸಿ ಅವರ ಕಾಲುಗಳಿಗೆ ತೀವ್ರ ಗಾಯಗಳಾಗಿದ್ದನ್ನು ಅವರು ನೆನಪಿಸಿಕೊಂಡರು. ಘಟನೆಯ ನಂತರ ಸ್ಥಳಕ್ಕೆ ಭೇಟಿ ನೀಡಿದ್ದ ವಾರ್ಡ್ 63ರ ಪ್ರತಿನಿಧಿ ಕಿಶನ್ ಪ್ರಜಾಪತಿ, ಬಾಲಕಿಯನ್ನು ಆಸ್ಪತ್ರೆಗೆ ಕರೆದೊಯ್ಯಲು ಸಹಾಯ ಮಾಡಿದ್ದಲ್ಲದೆ, ನಾಯಿಯನ್ನು ಹಿಡಿಯಲು ಕೋಟಾ ಮುನ್ಸಿಪಲ್ ಕಾರ್ಪೊರೇಷನ್ (ಕೆಎಂಸಿ) ತಂಡವನ್ನು ಸಂಪರ್ಕಿಸಿರುವುದಾಗಿ ತಿಳಿಸಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಎಣ್ಣೆ ಸಾಗಿಸುತ್ತಿದ್ದ ಟ್ಯಾಂಕರ್ ಪಲ್ಟಿ, ಬೆಲೆ ಏರಿಕೆಯ ನಡುವೆ ತೈಲ ಸಂಗ್ರಹಿಸಲು ಮುಗಿಬಿದ್ದ ಜನತೆ, Video