Select Your Language

Notifications

webdunia
webdunia
webdunia
webdunia

‘ಸತ್ಯದ ಪರ ನಿಲ್ಲಿ’: ರಮಣ್

‘ಸತ್ಯದ ಪರ ನಿಲ್ಲಿ’: ರಮಣ್
ದೆಹಲಿ , ಶುಕ್ರವಾರ, 26 ನವೆಂಬರ್ 2021 (18:17 IST)
ದೆಹಲಿ :  ಯಾವುದು ಸರಿ ಆಗಿರುವುದೋ ಅದರ ಪರ  ಹಾಗೂ ಯಾವುದೂ ತಪ್ಪಾಗಿರುವುದೋ ಅದರ ವಿರುದ್ಧ ನಿಲ್ಲಿ ಎಂದು ಬಾರ್ ಅಸೋಸಿಯೇಶನ್ ಸದಸ್ಯರಿಗೆ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಾಧೀಶ  ಎನ್. ವಿ .ರಮಣ್ ಮನವಿ ಮಾಡಿದರು.
ಸುಪ್ರೀಂಕೋರ್ಟ್ ಬಾರ್ ಕೌನ್ಸಿಲ್ ಆಯೋಜಿಸಿದ ಸಂವಿಧಾನ ದಿನಆಚರಣೆ ಕಾರ್ಯಕ್ರಮದಲ್ಲಿ ಅವರು, ಪ್ರಚೋದಿತ ಹಾಗೂ ಉದ್ದೇಶ ಪೂರ್ವಕ ದಾಳಿಯಿಂದ ನ್ಯಾಯಾಂಗವನ್ನು ರಕ್ಷಿಸಿ ಎಂದು ವಕೀಲರಿಗೆ  ಹೇಳಿದರು. ಚರ್ಚೆಗೆ ಅವಕಾಶ ನೀಡಿರುವುದೇ  ಭಾರತೀಯ ಸಂವಿಧಾನದ ಮುಖ್ಯ ವೈಶಿಷ್ಟ್ಯವಾಗಿದೆ. ವಕೀಲರು ಹಾಗೂ ನ್ಯಾಯಾಧೀಶರು ಒಂದು ದೊಡ್ಡ ಕುಟುಂಬದ ಭಾಗ ನೀವೆಲ್ಲರೂ ನ್ಯಾಯಾಂಗ ಉಳಿವಿಗೆ ಶ್ರಮಿಸಬೇಕು.
ಸಂಸ್ಥೆಯನ್ನು ಉದ್ದೇಶಿತ ದಾಳಿಯಿಂದ ರಕ್ಷಿಸಬೇಕು ಎಂದರು. ನವೆಂಬರ್ 26ರನ್ನು ಸಂವಿಧಾನ ದಿನವಾಗಿ ಆಚರಿಸಲಾಗುತ್ತಿದೆ.  1949 ಈ ದಿನ ಸಂವಿಧಾನವನ್ನು ಭಾರತವೂ ಸಂವಿಧಾನವನ್ನು ಔಪಾಚಾರಿಕವಾಗಿ ಅಂಗೀಕರಿಸಿತು. ನಂತರ 1950ರ ಜನವರಿ 26 ರಂದು ಕಾರ್ಯ ರೂಪಕ್ಕೆ ಬಂತು ಎಂದರು.
ಭಾರತದ ಸಂವಿಧಾನವನ್ನು ಪ್ರಜಾಪ್ರಭುತ್ವ ವ್ಯವಸ್ಥೆಯ ಶ್ರೇಷ್ಠ ಗ್ರಂಥವೆಂದು ಪರಿಗಣಿಸಲಾಗುತ್ತದೆ. ವಿವಿಧ ಭಾಷೆ, ಆಚರಣೆ, ಸಂಸ್ಕೃತಿ ಮತ್ತು ಭೌಗೋಳಿಕ ವೈವಿಧ್ಯತೆಗಳನ್ನು ಹೊಂದಿರುವ, 130 ಕೋಟಿಗಿಂತ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ಭಾರತದಲ್ಲಿ ಸಂವಿಧಾನವು ಆಚರಣೆಗೆ ಬಂದು ಎಪ್ಪತ್ತು ವರ್ಷಗಳನ್ನು ಪೂರೈಸಿದ್ದರೂ ಯಾವುದೇ ಅರಾಜಕತೆ ಹಾಗೂ ನೆರೆ ರಾಷ್ಟ್ರಗಳಲ್ಲಿ ಕಂಡು ಬರುವ ಸೈನಿಕ ದಂಗೆಗಳಂತಹ ಘಟನೆಗಳು ಸಂಭವಿಸಿಲ್ಲವೆಂದರೆ ಭಾರತ ಸಂವಿಧಾನದ ಗಟ್ಟಿತನವನ್ನು ಅರ್ಥೈಸಿಕೊಳ್ಳಬಹುದಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಪ್ರವಾಸ ಪ್ರಿಯರಿಗೆ IRCTC ಗುಡ್ ನ್ಯೂಸ್