Select Your Language

Notifications

webdunia
webdunia
webdunia
webdunia

ಪೆಟ್ರೋಲ್‌ ಉಳಿಸಲು ಶ್ರೀಲಂಕಾದಲ್ಲಿ ಶಾಲೆಗಳಿಗೆ ರಜೆ, ಮನೆಯಲ್ಲೇ ಉದ್ಯೋಗ!

Sri Lanka economic crisis Schools ಶ್ರೀಲಂಕಾ ಆರ್ಥಿಕ ಬಿಕ್ಕಟ್ಟು ಶಾಲೆ
bengaluru , ಸೋಮವಾರ, 27 ಜೂನ್ 2022 (17:02 IST)
ದ್ವೀಪ ರಾಷ್ಟ್ರ ಶ್ರೀಲಂಕಾದಲ್ಲಿ ಆರ್ಥಿಕ ಬಿಕ್ಕಟ್ಟು ಉಲ್ಬಣಗೊಂಡಿರುವ ಹಿನ್ನೆಲೆಯಲ್ಲಿ ಪೆಟ್ರೋಲ್‌ ಮತ್ತು ಡೀಸೆಲ್‌ ಉಳಿಸಲು ಶಾಲೆಗಳಿಗೆ ರಜೆ ಘೋಷಿಸಲಾಗಿದ್ದು, ಉದ್ಯೋಗಿಗಳಿಗೆ ವರ್ಕ್‌ ಫ್ರಮ್‌ ಹೋಂಗೆ ಸೂಚನೆ ನೀಡಲಾಗಿದೆ.
ಸೋಮವಾರ ಇಂಧನಕ್ಕಾಗಿ ಸರತಿ ಸಾಲಿನಲ್ಲಿ ನಿಂತಿದ್ದ ಜನತೆಗೆ ಸೈನಿಕರು ಕೂಪನ್ಗಳನ್ನು ವಿತರಿಸಿದ್ದರು.  ರಾಷ್ಟ್ರ ರಾಜಧಾನಿ ಕೊಲೊಂಬೋದಲ್ಲಿ ಶಾಲೆಗಳನ್ನು ಮುಚ್ಚಲಾಗಿದ್ದು ವರ್ಕ್ ಫ್ರಮ್ ಹೋಮ್ ಗೆ ಸ್ಥಳೀಯಾಡಳಿತ ಆದೇಶಿಸಿದೆ. ಕಡಿಮೆ ವಿದೇಶಿ ವಿನಿಮಯ ದಾಖಲೆಯನ್ನು ಹೊಂದಿರುವ ರಾಷ್ಟ್ರದಲ್ಲಿ ಅಹಾರ, ಔಷಧ ಹಾಗೂ ಇಂಧನದ ಕೊರತೆ ಕಾಡುತ್ತಿದೆ.
ನಾನು ನಾಲ್ಕು ದಿನಗಳಿಂದ ಸರಿಯಾದ ನಿದ್ದೆ ಹಾಗೂ ಉಟ ಇಲ್ಲದೆ ಸರತಿ ಸಾಲಿನಲ್ಲಿ ಟೋಕನ್ ಪಡೆಯಲು ನಿಂತಿದ್ದೇನೆ. ಇಂಧನ ದೊರೆಯುವವರೆಗೂ ಎಲ್ಲಿಗೂ ಹೋಗುವುದಿಲ್ಲ. ಮನೆಯಿಂದ 5 ಕಿ.ಮೀ. ದೂರದಲ್ಲಿದೆ. ನನ್ನ ಆಟೋದಲ್ಲಿ ಪೆಟ್ರೋಲ್ ಇಲ್ಲದ ಕಾರಣ ನಾನು ಇಲ್ಲಿಯೇ ಉಳಿದುಕೊಂಡಿದ್ದೇನೆ. ಇದು ಒಂದು ತರಹದ ದುರಂತ ಇದು ಎಲ್ಲಿಗೆ ಬಂದು ನಿಲ್ಲುತ್ತದೆ ಎಂಬುದು ಯಾರಿಗೂ ಸಹ ಗೊತ್ತಿಲ್ಲಾ ಎಂದು ೬೭ ವರ್ಷದ ವೃದ್ಧ ಆಟೋ ಚಾಲಕ ಶೆಲ್ಟನ್ ಅಳಲನ್ನು ತೋಡಿಕೊಂಡಿದ್ದಾರೆ.
ಶ್ರೀಲಂಕಾ ಸರ್ಕಾರವು ತನ್ನ ಮುಂದಿನ ಆದೇಶದವರೆಗೆ ಖಾಸಗಿ ಹಾಗು ಸರ್ಕಾರಿ ಕಂಪನಿ ಉದ್ಯೀಗಿಗಳಿಗೆ ವರ್ಕ್ ಫ್ರಮ್ ಹೋಮ್ ಮಾಡುವಂತೆ ಆದೇಶಿಸಿದೆ. ಕೊಲೊಂಬೋ ಹಾಗು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಒಂದು ವಾರದ ಮಟ್ಟಿಗೆ ಶಾಲೆಗಳನ್ನು ಮುಚ್ಚುವಂತೆ ಆದೇಶಿಸಲಾಗಿದೆ.
ಸಾರ್ವಜನಿಕ ಸಾರಿಗೆ, ವಿದ್ಯುತ್ ಘಟಕಗಳು ಹಾಗು ವೈದ್ಯಕೀಯ ಸೇವೆಗಳಿಗೆ ಮೊದಲ ಆದ್ಯತೆಯನ್ನ ನೀಡಲಾಗುತ್ತದೆ. ಕೆಲವನ್ನು ವಿಮಾಣ ನಿಲ್ಧಾಣಗಳಿಗೆ ಹಾಗು ಬಂದರುಗಳಿಗೆ ಸಾಗಿಸಲಾಗುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಪ್ರೀತಿ ನಿರಾಕರಣೆ : ಲಿಂಗವನ್ನೇ ಬದಲಾಯಿಸಿಕೊಂಡ ಯುವತಿ!?