Publish Date: Sun, 01 May 2016 (17:53 IST)
Updated Date: Sun, 01 May 2016 (17:57 IST)
ಕೇರಳ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿಯಿಂದ ಕಣಕ್ಕಿಳಿದಿರುವ ಮಾಜಿ ಕ್ರಿಕೆಟಿಗ ಶ್ರೀಶಾಂತ್ ಬಿರುಸಿನ ಪ್ರಚಾರದಲ್ಲಿ ವ್ಯಸ್ತರಾಗಿದ್ದಾರೆ.
ತಾವು ಸ್ಪರ್ಧಿಸಿರುವ ತಿರುವನಂತಪುರ ವಿಧಾನಸಭಾ ಕ್ಷೇತ್ರದ ಜನವಸತಿ ಪ್ರದೇಶಗಳಲ್ಲಿ ಅವರಿಂದು ಮತಯಾಚನೆ ಮಾಡಿದರು.
ನವದೆಹಲಿಯ ಬಿಜೆಪಿ ಪಕ್ಷದ ಕೇಂದ್ರ ಕಚೇರಿಯಲ್ಲಿ ಮಾರ್ಚ್ ತಿಂಗಳಲ್ಲಿ ಪ್ರಮುಖ ನಾಯಕರ ಸಮ್ಮುಖದಲ್ಲಿ ಅವರು ಪಕ್ಷಕ್ಕೆ ಸೇರ್ಪಡೆಯಾಗಿದ್ದರು.
2013ರ ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪ ಎದುರಿಸುತ್ತಿದ್ದ ಶ್ರೀಶಾಂತ್‌ಗೆ ಈಗಾಗಲೇ ದೆಹಲಿ ನ್ಯಾಯಾಲಯ ಕ್ಲೀನ್‌ಚೀಟ್ ನೀಡಿದೆ.