Select Your Language

Notifications

webdunia
webdunia
webdunia
webdunia

ರಾಜ್ಯಸಭೆಯಲ್ಲಿ ಮುಸ್ಲಿಮರ ನಮಾಜ್ ಗೆ ಪ್ರತ್ಯೇಕ ಸಮಯ ರದ್ದು: ಎಲ್ಲರೊಂದೇ ಎಂದ ಸ್ಪೀಕರ್

jagdeep dhankar
ನವದೆಹಲಿ , ಸೋಮವಾರ, 11 ಡಿಸೆಂಬರ್ 2023 (10:45 IST)
ನವದೆಹಲಿ: ಸಂಸತ್ತಿನಲ್ಲಿ ಮುಸ್ಲಿಂ ಸಮುದಾಯದವರ ನಮಾಜ್ ಪ್ರಾರ್ಥನೆಗಾಗಿ ಮೀಸಲಿಟ್ಟಿದ್ದ ಅರ್ಧಗಂಟೆ ಹೆಚ್ಚುವರಿ ಸಮಯಾವಕಾಶವನ್ನು ಸ್ಪೀಕರ್ ಧನ್ ಕರ್ ರದ್ದು ಮಾಡಿದ್ದಾರೆ.

ರಾಜ್ಯ ಸಭೆಯಲ್ಲಿ ಪ್ರತೀ ದಿನ 2 ಗಂಟೆಗೆ ಭೋಜನ ವಿರಾಮದ ಬಳಿಕದ ಕಲಾಪ ಆರಂಭವಾಗುತ್ತದೆ. ಶುಕ್ರವಾರ ಮಾತ್ರ ಮುಸ್ಲಿಂ ಸಮುದಾಯದ ಸಂಸದರ ಅನುಕೂಲಕ್ಕಾಗಿ ಅರ್ಧಗಂಟೆ ಹೆಚ್ಚುವರಿ ಬ್ರೇಕ್ ನೀಡಲಾಗುತ್ತಿತ್ತು.

ಈ ವಿಚಾರವನ್ನು ಡಿಎಂಕೆ ಸದಸ್ಯರೊಬ್ಬರು ಪದ್ಧತಿ ಮುರಿದು 2 ಗಂಟೆಗೆ ರಾಜ್ಯ ಸಭೆ ಕಲಾಪ ಆರಂಭ ಮಾಡಿದ್ದಕ್ಕೆ ಸ್ಪೀಕರ್ ಗೆ ಪ್ರಶ್ನೆ ಮಾಡಿದ್ದರು. ಇದಕ್ಕೆ ಉತ್ತರಿಸಿದ ಸ್ಪೀಕರ್ ಈ ರೀತಿ ಎಲ್ಲೂ ನಿಯಮಾವಳಿಯಿಲ್ಲ. ಆದರೆ ಇದುವರೆಗೆ ನಡೆದು ಬಂದ ಪದ್ಧತಿಯಾಗಿತ್ತಷ್ಟೇ ಎಂದಿದ್ದಾರೆ.

ಆದರೆ ಇನ್ನು ಮುಂದೆ ಈ ಪದ್ಧತಿ ಇರಲ್ಲ ಎಂದಿದ್ದಾರೆ. ಸಂಸತ್ತಿನಲ್ಲಿ ಎಲ್ಲಾ ಸಮುದಾಯದವರೂ ಇದ್ದಾರೆ. ಇಲ್ಲಿ ಎಲ್ಲರೂ ಒಂದೇ. ಹಾಗಿರುವಾಗ ಒಂದು ಸಮುದಾಯದವರಿಗೆ ಮಾತ್ರ ವಿನಾಯ್ತಿ ಇರಬಾರದು ಎಂದು ಸ್ಪೀಕರ್ ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಅಪ್ರಾಪ್ತ ಯುವತಿಯ ಮೇಲೆ ಅಮಾನುಷ ಅತ್ಯಾಚಾರ: ಆರೋಪಿಗಳ ಬಂಧನ