ದಕ್ಷಿಣ ಭಾರತದ ಹೆಮ್ಮೆ: ಶಿರಿಷಾ
ಕಲ್ಪನಾ ಚಾವ್ಲಾ ಮತ್ತು ಸುನೀತಾ ವಿಲಿಯಮ್ಸ್ ಬಳಿಕ ಈ ಸಾಧನೆ ಮಾಡಿದ ಭಾರತ ಮೂಲದ ಮೂರನೇ ಮಹಿಳೆ ಈಕೆ.
ಬೆಂಗಳೂರು: ನಿನ್ನೆ ರಾತ್ರಿ ಸ್ಪೇಸ್ಶಿಪ್ಟು ಯೂನಿಟಿ (SpaceShipTwo Unity) ನೌಕೆ ಆರು ಗಗನಯಾತ್ರಿಗಳನ್ನ ಹೊತ್ತು ನಭಕ್ಕೆ ಹಾರಿ ಬಾಹ್ಯಾಕಾಶದಲ್ಲಿ ಒಂದು ಗಂಟೆ ವಿಹರಿಸಿ ಬಳಿಕ ಭೂಮಿಗೆ ವಾಪಸ್ ಬಂದಿತು. ಇದು ವಿಶ್ವದಲ್ಲೇ ಮೊದಲ ಬಾರಿಗೆ ಖಾಸಗಿಯಾಗಿ ನಡೆದ ಮೊದಲ ಬಾಹ್ಯಾಕಾಶ ಯಾನ.
ಸರ್ ರಿಚರ್ಡ್ ಬ್ರಾನ್ಸನ್ ಎಂಬ ಬ್ರಿಟಿಷ್ ಕೋಟ್ಯಾಧಿಪತಿ ಉದ್ಯಮಿಯ ವರ್ಜಿನ್ ಗೆಲಾಕ್ಟಿಕ್ ಎಂಬ ಸಂಸ್ಥೆ ನಡೆಸಿದ ಗಗನಯಾತ್ರೆ ಇದಾಗಿತ್ತು. ನ್ಯೂ ಮೆಕ್ಸಿಕೋದಿಂದ ಹೊರಟ ನೌಕೆ ಭೂಮಿಯಿಂದ 85 ಕಿಮೀ ಮೇಲೆ ಹಾರಿತು. ಗುರುತ್ವ ಶಕ್ತಿ ಇಲ್ಲದ ಅಷ್ಟು ಎತ್ತರದಲ್ಲಿನ ಅನುಭವ ಮತ್ತು ಅಲ್ಲಿಂದ ಭೂಮಿಯ ಸೊಬಗನ್ನ ಸವಿಯುವ ಅವಿಸ್ಮರಣೀಯ ಕ್ಷಣಗಳು ಐವರು ಗಗನಯಾತ್ರಿಗಳದ್ದಾಗಿತ್ತು. ಈ ಗಗನಯಾತ್ರೆಯಲ್ಲಿ ಸ್ವತಃ ಸರ್ ರಿಚರ್ಡ್ ಬ್ರಾನ್ಸನ್ ಅವರಿದ್ದದ್ದು ವಿಶೇಷ. ಐವತು ಯಾತ್ರಿಗಳ ಪೈಕಿ ಭಾರತ ಮೂಲದ ಶಿರಿಷಾ ಬಂಡ್ಲ ಕೂಡ ಇದ್ದರು. ಮಿಷನ್ ಪೂರ್ಣಗೊಂಡು ಭೂಮಿಗೆ ವಾಪಸ್ಸಾಗದ ಬಳಿಕ ಬ್ರಾನ್ಸನ್ ಅವರು ಶಿರಿಷಾರನ್ನ ಹೆಗಲ ಮೇಲೆ ಹೊತ್ತು ಸಾಗಿದ ಚಿತ್ರ ವೈರಲ್ ಕೂಡ ಆಗಿದೆ. ಕಲ್ಪನಾ ಚಾವ್ಲಾ, ಸುನೀತಾ ವಿಲಿಯಮ್ಸ್ ಬಳಿಕ ಬಾಹ್ಯಾಕಾಶಕ್ಕೆ ಪ್ರಯಾಣಿಸಿದ ಭಾರತದ ಮೂಲದ ಮೂರನೇ ಮಹಿಳೆ ಎಂಬ ಹೆಸರು ಶಿರಿಷಾಗೆ ದಕ್ಕಿದೆ.
34 ವರ್ಷದ ಶಿರಿಷಾ ಬಂಡ್ಲ ಆಂಧ್ರದ ಪ್ರಕಾಶಂ ಜಿಲ್ಲೆಯ ಚಿರಾಲದಲ್ಲಿ ಜನಿಸಿ ಗುಂಟೂರಿನಲ್ಲಿ ಬಾಲ್ಯದ ಕೆಲ ವರ್ಷ ಕಳೆದರು. ಬಳಿಕ ತಂದೆ ತಾಯಿ ಜೊತೆ ಅಮೆರಿಕದಲ್ಲೇ ಬೆಳೆದ ಇವರು ಏರೋನಾಟಿಕಲ್ ವಿಷಯದಲ್ಲಿ ಬಿಎಸ್ಸಿ ಪದವಿ ಮಾಡಿ ಬಳಿಕ ಎಂಬಿಎ ಮಾಡಿದ್ದಾರೆ. ಇದೀಗ ಅವರು ಗಗನಯಾತ್ರಿಯಾಗಿ ರೂಪುಗೊಂಡಿದ್ದಾರೆ. ವರ್ಜಿನ್ ಗೆಲಾಕ್ಟಿಕ್ ಕಂಪನಿಯಲ್ಲಿ ಇವರು ಸರ್ಕಾರಿ ವ್ಯವಹಾರ ಮತ್ತು ಸಂಶೋಧನಾ ಕಾರ್ಯಾಚರಣೆ (
s ವಿಭಾಗದ ಉಪಾಧ್ಯಕ್ಷೆಯಾಗಿ ಉನ್ನತ ಹುದ್ದೆಯಲ್ಲಿದ್ದಾರೆ.
ಶಿರಿಷಾ ಅವರದ್ದು ಶಿಕ್ಷಿತರ ಕುಟುಂಬ. ಅವರ ತಂದೆ ಬಿ ಮುರಳೀಧರ್ ಮತ್ತು ತಾಯಿ ಅನುರಾಧಾ ಅವರು ಅಮೆರಿಕ ಸರ್ಕಾರದ ಸೇವೆಯಲ್ಲಿದ್ದಾರೆ. ಇವರ ಸಹೋದರಿ ಪ್ರತ್ಯುಷಾ ಬಂಡ್ಲ ಅವರೂ ಅಮೆರಿಕದಲ್ಲಿ ಬಯೋಲಾಜಿಕಲ್ ಸೈನ್ಸ್ ಟೆಕ್ನಿಷಿಯನ್ ಆಗಿದ್ಧಾರೆ. ಭಾರತದಲ್ಲಿರುವ ಶಿರಿಷಾ ಅವರ ಅಜ್ಜಂದಿರೂ ಕೂಡ ಉನ್ನತ ಹುದ್ದೆಯಲ್ಲಿದ್ದವರೇ. ಇವರ ತಾತ ಬಂಡ್ಲ ರಂಗಯ್ಯ ಅವರು ಆಚಾರ್ಯ ಎನ್ ಜಿ ರಂಗ ಕೃಷಿ ವಿವಿಯಲ್ಲಿ ಮುಖ್ಯ ವಿಜ್ಞಾನಿಯಾಗಿದ್ದರು. ಇವರ ತಾಯಿಯ ತಂದೆ ವೆಂಕಟ ನರಸಯ್ಯ ಅವರು ಪ್ರಕಾಶಂ ಜಿಲ್ಲೆಯವರಾಗಿದ್ದು ಅವರೂ ಕೂಡ ಕಾಲೇಜೊಂದರಲ್ಲಿ ಪ್ರೊಫೆಸರ್ ಆಗಿದ್ದರು.
ಶಿರಿಷಾ ಬಾಲ್ಯದಿಂದಲೂ ಬಹಳ ಧೈರ್ಯಗಾತಿಯಾಗಿದ್ದಳು ಎಂದು ಆಕೆಯ ಅಜ್ಜಂದಿರು ಹೇಳುತ್ತಾರೆ. ಕತ್ತಲಲ್ಲಿ ಒಬ್ಬಳೇ ಮನೆಯಿಂದ ಹೊರಗೆ ಹೋಗುವುದು ಇತ್ಯಾದಿ ಆಕೆಯ ಸ್ವಭಾವವನ್ನ ಅವರು ಬಿಚ್ಚಿಡುತ್ತಾರೆ. ಶಿರಿಷಾ ಕೇವಲ 4ನೇ ವಯಸ್ಸಿನಲ್ಲಿ ಭಾರತದಿಂದ ಅಮೆರಿಕಕ್ಕೆ ಹೋಗಿದ್ದು. ಕುಟುಂಬದ ಪರಿಚಯಸ್ಥರೊಬ್ಬರ ಜೊತೆ ಆಕೆಯನ್ನ ಒಂಟಿಯಾಗಿ ಅಮೆರಿಕಕ್ಕೆ ಕಳುಹಿಸಲಾಗಿತ್ತು. ಆದರೆ, ತನಗೆ ಅಪರಿಚವಾಗಿದ್ದ ವ್ಯಕ್ತಿಯ ಜೊತೆ ಪ್ರಯಾಣಿಸುತ್ತಿದ್ದರೂ ಶಿರಿಷಾಳಲ್ಲಿ ಯಾವುದೇ ಆತಂಕ, ಭಯ ಇರಲಿಲ್ಲ ಎಂದು ಅವರ ತಾತ ರಂಗಯ್ಯ ಹೇಳುತ್ತಾರೆ.
2015ರಲ್ಲಿ ವರ್ಜಿನ್ ಗೆಲಾಕ್ಟಿಕ್ ಕಂಪನಿ ಸೇರಿದ ಅವರು ಎರಡು ವರ್ಷದಲ್ಲಿ ಮ್ಯಾನೇಜರ್ ಆದರು. 2021ರಲ್ಲಿ ವೈಸ್ ಪ್ರೆಸಿಡೆಂಟ್ ಆಗಿ ಬಡ್ತಿ ಪಡೆದಿದ್ದಾರೆ. ಹಾಗೆಯೇ, ಅಲ್ಲಿಯ ಅನಿವಾಸಿ ತೆಲುಗು ಜನರ ಸಂಘಟನೆಯಾದ TANA ದೊಂದಿಗೂ ಸಂಪರ್ಕ ಇದ್ದು ಅದರಲ್ಲಿಯೂ ಸಕ್ರಿಯರಾಗಿದ್ಧಾರೆ.
ಇನ್ನು, ವರ್ಜಿನ್ ಗೆಲಾಕ್ಟಿಕ್ ಕಂಪನಿಯ ಸಂಸ್ಥಾಪಕ ಸರ್ ರಿಚರ್ಡ್ ಬ್ರಾನ್ಸನ್ ಅವರು ಹಲವು ಕಂಪನಿಗಳ ಒಡೆಯ. ಬಾಹ್ಯಾಕಾಶ ಪ್ರಯಾಣವನ್ನು ಜನಸಾಮಾನ್ಯರ ಕೈಗೆಟುಕುವಂತೆ ಮಾಡುವ ಕನಸು ಹೊತ್ತಿರುವ ಆತ ಆ ನಿಟ್ಟಿನಲ್ಲಿ ಮೊದಲ ಹೆಜ್ಜೆ ಇರಿಸಿದ್ದಾರೆ. ಜೆಫ್ ಬೇಜೋಸ್ ಒಡೆತನದ ಅಮೇಜಾನ್ ಹಾಗೂ ಮತ್ತು ಎಲಾನ್ ಮಸ್ಕ್ ಮಾಲಕತ್ವದ ಸ್ಪೇಸ್ ಎಕ್ಸ್ ಸಂಸ್ಥೆಗಳೂ ಕೂಡ ವರ್ಜಿನ್ ಗೆಲಾಕ್ಟಿಕ್ನಂತೆ ಬಾಹ್ಯಾಕಾಶ ಯೋಜನೆಗಳನ್ನ ಹೊಂದಿವೆ. ಈ ಮೂರು ದಿಗ್ಗಜರ ಪೈಕಿ ಮೊದಲು ರೆಕ್ಕೆ ಬಿಚ್ಚಿದ್ದು ಬ್ರಾನ್ಸನ್. ಆದರೆ, ಮುಂಬರುವ ವರ್ಷಗಳಲ್ಲಿ ಇನ್ನಷ್ಟು ಕಂಪನಿಗಳು ಈ ಕ್ಷೇತ್ರಕ್ಕೆ ಕಾಲಿಟ್ಟರೆ ಬಾಹ್ಯಾಕಾಶ ಪ್ರಯಾಣ ಕೈಗೆಟುಕುವ ದರದಲ್ಲಿ ಸಾಧ್ಯವಾಗಲಿದೆ. ಜನಸಾಮಾನ್ಯರೂ ಕೂಡ ಬಾಹ್ಯಾಕಾಶಕ್ಕೆ ಹೋಗಿ ಅದ್ಭುತ ಅನುಭವ ಪಡೆದು ಬರುವುದು ಸಾಧ್ಯವಾಗಲಿದೆ ಎಂಬುದು ಸರ್ ರಿಚರ್ಡ್ ಬ್ರಾನ್ಸನ್ ಅವರ ಅನಿಸಿಕೆ. ಕುತೂಹಲದ ಸಂಗತಿ ಎಂದರೆ ಬ್ರಾನ್ಸನ್ ಅವರ ಪೂರ್ವಜರೊಬ್ಬರು ತಮಿಳುನಾಡಿನ ಕಡಲೂರಿನವರಂತೆ. ಹಾಗಂತ ಬ್ರಾನ್ಸನ್ ಅವರೇ ಹೇಳಿಕೊಂಡಿದ್ದಾರೆ. ತಮ್ಮ ಡಿಎನ್ಎಯನ್ನು ಪರಿಶೀಲಿಸಿದಾಗ
ಭಾರತದ ಸಂಬಂಧ ಇರುವುದು ಗೊತ್ತಾಗಿದೆ ಎಂದವರು ಬಾಹ್ಯಾಕಾಶಕ್ಕೆ ಹಾರುವ ಮುನ್ನ ತಿಳಿಸಿದ್ದರು