Select Your Language

Notifications

webdunia
webdunia
webdunia
webdunia

ಬಾಹ್ಯಾಕಾಶಯಾನಕ್ಕೆ ಸಜ್ಜಾದ ಸಿರಿಶಾ

ಕಲ್ಪನಾ ಚಾವ್ಲಾ ಬಳಿಕ ಬಾಹ್ಯಾಕಾಶಯಾನಕ್ಕೆ ಸಜ್ಜಾದ ಆಂಧ್ರದ ಗುಂಟೂರು ಮೂಲದ ಸಿರಿಶಾ

ಬಾಹ್ಯಾಕಾಶಯಾನಕ್ಕೆ ಸಜ್ಜಾದ ಸಿರಿಶಾ
ಆಂಧ್ರ ಪ್ರದೇಶ , ಶನಿವಾರ, 3 ಜುಲೈ 2021 (19:53 IST)
ಆಂಧ್ರ ಪ್ರದೇಶ : ಕಲ್ಪನಾ ಚಾವ್ಲಾ ಬಳಿಕ ಮತ್ತೊಬ್ಬ ಭಾರತೀಯ ಮೂಲಕ ಮಹಿಳಾ ಗಗನಯಾತ್ರಿ ಅಂತರಿಕ್ಷ  ಪ್ರಯಾಣ ಬೆಳೆಸಲು ಸಜ್ಜಾಗಿದ್ದಾರೆ.












 ಆಂಧ್ರಪ್ರದೇಶದ ಗುಂಟೂರು ಮೂಲದ ಸಿರಿಶಾ ಬಾಂಡ್ಲಾ ಈಗ ಅಂತರಿಕ್ಷ ಯಾನಕ್ಕೆ ಮುಂದಾಗಿರುವ ಭಾರತ ಮೂಲದ ಎರಡನೇ ಮಹಿಳೆಯಾಗಿದ್ದು, ಬಾಹ್ಯಾಕಾಶದಲ್ಲಿ ಹಾರಾಟ ನಡೆಸಲಿರುವ ನಾಲ್ಕನೇ ಮಹಿಳಾ ಗಗನಯಾತ್ರಿ ಕೂಡ ಇವರಾಗಿದ್ದಾರೆ.  ವರ್ಜಿನ್ ಗೆಲಾಕ್ಟಿಕ್ ಯ ವಿಎಸ್ಎಸ್ ಯೂನಿಟಿ ಬಾಹ್ಯಕಾಶ ನೌಕೆಯಲ್ಲಿ ಪ್ರಯಾಣಿಸುತ್ತಿರುವ ಆರು ಜನರಲ್ಲಿ ಸಿರಿಶಾ ಕೂಡ ಒಬ್ಬರಾಗಿದ್ದಾರೆ. ಇದೇ ಜು. 11 ರಂದು ನ್ಯೂ ಮೆಕ್ಸಿಕೊದಿಂದ ಈ ಗಗನಯಾತ್ರಿಗಳು ನಭಕ್ಕೆ ಜಿಗಿಯಲಿದ್ದಾರೆ. ಬಿಲಿಯನಿಯರ್ ರಿಚರ್ಡ್ ಬ್ರೋನ್ಸನ್ ಕೂಡ ಈ ಬಾಹ್ಯಕಾಶ ಪ್ರಯಾಣದಲ್ಲಿ ಜೊತೆಯಾಗಲಿದ್ದಾರೆ.
ಪರ್ಡ್ಯೂ ವಿಶ್ವವಿದ್ಯಾಲಯದ ಏರೋನಾಟಿಕಲ್ ಇಂಜಿನಿಯರ್ ಪದವೀಧರೆಯಾಗಿರುವ 34 ವರ್ಷದ ಸಿರಿಶಾ ಈ ಅವಕಾಶ ಸಿಕ್ಕಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದು, ತಮಗೆ ಈ ಅವಕಾಶ ಸಿಕ್ಕಿರುವುದು ಅದ್ಭುತ ಗೌರವ ಎಂದು ಟ್ವಿಟರ್ನಲ್ಲಿ ತಿಳಿಸಿದ್ದಾರೆ. ವರ್ಜಿನ್ ಗೆಲಾಕ್ಟಿಕ್ ಕೂಡ ಬಾಹ್ಯಕಾಶಕ್ಕೆ ಪ್ರಯಾಣಿಸಲಿರುವ ಆರು ಜನ ಫೋಟೋ ಹಂಚಿಕೊಂಡಿದ್ದು, ಶುಭ ಹಾರೈಸಿದೆ.
ಗುಂಟೂರಿನ ಸಿರಿಶಾ
ಸಿರಿಶಾ ಬಾಂಡ್ಲಾ ಆಂಧ್ರ ಪ್ರದೇಶದ ಗುಂಟೂರಿನಲ್ಲಿ ಜನಿಸಿದ್ದುಮ ಟೆಕ್ಸಾಸ್ನ ಹೂಸ್ಟನ್ನಲ್ಲಿ ಬೆಳೆದಿದ್ದಾರೆ. ಏರೋನಾಟಿಕಲ್ ಪದವೀಧರೆ ಆಗಿರುವ ಜಾರ್ಜ್ಟೌನ್ ವಿಶ್ವವಿದ್ಯಾಲಯದಿಂದ ಮಾಸ್ಟರ್ ಆಫ್ ಬಿಸಿನೆಸ್ ಅಡ್ಮಿನಿಸ್ಟ್ರೇಷನ್ ಪದವಿ ಪಡೆದಿದ್ದಾರೆ. 2015ರಲ್ಲಿ ವರ್ಜಿನ್ ಗ್ಯಾಲಕ್ಟಿಕ್ನಲ್ಲಿ ತಮ್ಮ ವೃತ್ತಿ ಜೀವನ ಆರಂಭಿಸಿದ್ದರು. ಇದೇ ಕಂಪನಿಯಲ್ಲಿ ಅವರು ಸರ್ಕಾರಿ ವ್ಯವಹಾರಗಳ ಉಪಾಧ್ಯಕ್ಷರಾಗಿ ಕೂಡ ಅವರು ಕಾರ್ಯನಿರ್ವಹಿಸುತ್ತಿದ್ದಾರೆ. ವರ್ಜಿನ್ ಗ್ಯಾಲಕ್ಟಿಕ್ನಲ್ಲಿ ಕೆಲಸ ಮಾಡುವ ಮೊದಲು, ಅವರು ಟೆಕ್ಸಾಸ್ನಲ್ಲಿ ಏರೋಸ್ಪೇಸ್ ಎಂಜಿನಿಯರ್ ಆಗಿ ಕೆಲಸ ಮಾಡಿದರು. ಬಳಿಕ ಅವರು ಕಮರ್ಷಿಯಲ್ ಸ್ಪೇಸ್ ಫ್ಲೈಟ್ ಫೆಡರೇಶನ್ನಲ್ಲಿ ಬಾಹ್ಯಾಕಾಶ ನೀತಿಯಲ್ಲಿ ಕೆಲಸ ಆರಂಬಿಸಿದರು.
ಗಗನಯಾನಕ್ಕೆ ಮುಂದಾಗಿರುವ ಸಿರಿಶಾ ಸಾಧನೆ ಕುರಿತು ಹರ್ಷ ವ್ಯಕ್ತಪಡಿಸಿರುವ ಭಾರತದ ಅವರ ಸಂಬಂಧಿ ರಾಮರಾವ್ ಕಣ್ಣೆಗಂಟಿ, ಆಕೆ ಬಗ್ಗೆ ನಮಗೆ ತುಂಬಾ ಹೆಮ್ಮೆ ಇದೆ. ಭಾರತ ಅಮೆರಿಯದ ಅತ್ಯಂತ ಹಳೆಯ ಸಂಘಟನೆಯಾದ ಅಮೆರಿಕದಲ್ಲಿನ ತೆಲುಗು ಅಸೋಸಿಯೇಷನ್ ಆಫ್ ನಾರ್ತ್ ಅಮೆರಿಕಾದೊಂದಿಗೆ ಸಿರಿಶಾ ನಿಕಟ ಸಂಬಂಧ ಹೊಂದಿದ್ದಾರೆ ಎಂದು ತಿಳಿಸಿದ್ದಾರೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ.
ಬಾಹ್ಯಕಾಶದಲ್ಲಿ ನೌಕಾಯಾನ ಕೈಗೊಂಡ ಭಾರತ ಮೂಲಕ ಎರಡನೇ ಭಾರತೀಯ ಮೂಲದ ಮಹಿಳೆ ಇವರಾಗಿದ್ದಾರೆ. ಇದಕ್ಕೂ ಮೊದಲು ರಾಕೇಶ್ ಶರ್ಮಾ, ಕಲ್ಪನಾ ಚಾವ್ಲಾ, ಸುನೀತಾ ವಿಲಿಯಂ ಅಂತರಿಕ್ಷ ಯಾನ ಕೈಗೊಂಡ ಮಹಿಳೆಯರಾಗಿದ್ದರು.


Share this Story:

Follow Webdunia kannada

ಮುಂದಿನ ಸುದ್ದಿ

ಡ್ರೋಣ್ ಮೂಲಕ ಲೈಟ್ ಹೌಸ್ ವಸತಿ ಯೋಜನೆ