Select Your Language

Notifications

webdunia
webdunia
webdunia
webdunia

ಮಹಿಳೆಯರ ಬಯಲು ಶೌಚದ ಫೋಟೋ ತೆಗೆಯಲು ತಡೆದ ಸಾಮಾಜಿಕ ಕಾರ್ಯಕರ್ತನನ್ನೇ ಸಾಯಿಸಿದ ಯುವಕರು

ಮಹಿಳೆಯರ ಬಯಲು ಶೌಚದ ಫೋಟೋ ತೆಗೆಯಲು ತಡೆದ ಸಾಮಾಜಿಕ ಕಾರ್ಯಕರ್ತನನ್ನೇ ಸಾಯಿಸಿದ ಯುವಕರು
ಜೈಪುರ , ಶನಿವಾರ, 17 ಜೂನ್ 2017 (14:26 IST)
ಜೈಪುರ :ಜೂ-17: ಮನೆಯಲ್ಲಿ ಶೌಚಾಲಯ ಇಲ್ಲದ ಕಾರಣಕ್ಕೆ ಬಯಲಲ್ಲಿ ಶೌಚಮಾಡುತ್ತಿದ್ದ ಮುಸ್ಲಿಂ ಮಹಿಳೆಯರ  ಫೋಟೋ ಕ್ಲಿಕ್ಕಿಸಲು ತೊಡಗಿದ ಮುನಿಸಿಪಾಲಿಟಿ ಕಾರ್ಮಿಕರನ್ನು ತಡೆದ ಸಾಮಾಜಿಕ ಕಾರ್ಯಕರ್ತನೊಬ್ಬನನ್ನು ಅದೇ ಕಾರ್ಮಿಕರು ಹೊಡೆದು ಚಚ್ಚಿ ಸಾಯಿಸಿದ ಘಟನೆ ರಾಜಸ್ಥಾನದಲ್ಲಿ ನಡೆದಿದೆ.  
 
ಇಲ್ಲಿನ ಪ್ರತಾಪಗಢ ಜಿಲ್ಲೆಯ ಮನೆಯಲ್ಲಿ  ಶೌಚಾಲಯ ಇಲ್ಲದ ಕಾರಣಕ್ಕೆ ಇಲ್ಲಿ ಮುಸ್ಲಿಂ ಮಹಿಳೆಯರು ಅನಿವಾರ್ಯವಾಗಿ ಬಯಲಲ್ಲೇ ಶೌಚಕಾರ್ಯ ಮುಗಿಸಿಲು ಬಂದಿದ್ದರು. ಇವರು ಶೌಚಕಾರ್ಯದಲ್ಲಿ ತೊಡಗಿದ್ದಾಗ ಅವರ ಫೋಟೋ ಮತ್ತು ವಿಡಿಯೋ ತೆಗೆಯಲು ಮುಂದಾದ ಮುನಿಸಿಪಾಲಿಟಿ ಕಾರ್ಮಿಕರನ್ನು ಸಾಮಾಜಿಕ ಕಾರ್ಯಕರ್ತ ಜಾಫ‌ರ್‌ ಹುಸೇನ್‌ ಎಂಬುವವರು ತಡೆದಿದ್ದಾರೆ. ಇದರಿಂದ ರೊಚ್ಚಿಗೆದ್ದ ಕಾರ್ಮಿಕರು ಜಾಫರ್ ನನ್ನು ಹೊಡೆದು ಸಾಯಿಸಿದ್ದಾರೆ.
 
ಅಸಲಿಗೆ ನಗರ ಪರಿಷತ್‌ ಕಮಿಷನರ್‌ ಅಶೋಕ್‌ ಜೈನ್‌, ಬಗ್‌ವಾಸಾ ಕಾಚಿ ಗ್ರಾಮದಲ್ಲಿ ಬಯಲು ಬಹಿರ್ದೆಶೆಯಲ್ಲಿ ನಿರತರಾಗಿದ್ದ ಮುಸ್ಲಿಂ ಮಹಿಳೆಯರ ಫೋಟೋ ವಿಡಿಯೋ ತೆಗೆಯುವಂತೆ ಮುನಿಸಿಪಲ್‌ ಕೌನ್ಸಿಲ್‌ ಕಾರ್ಮಿಕರಿಗೆ ಆದೇಶಿಸಿದ್ದರಂತೆ ಹೀಗೆಂದು ಸಿಪಿಎಂ ಆರೋಪಿಸಿದೆ. ಸಾಮಾಜಿಕ ಕಾರ್ಯಕರ್ತನನ್ನು ಹೊಡೆದು ಸಾಯಿಸಿದ ಕಾರ್ಮಿಕ ಯುವಕರಿಗೆ ಕಠಿಣ ಶಿಕ್ಷೆ ನೀಡುವಂತೆಯೂ ಆಗ್ರಹಿಸಿದೆ.
 

Share this Story:

Follow Webdunia kannada

ಮುಂದಿನ ಸುದ್ದಿ

ರಾಜ್ಯದಲ್ಲಿ ನೂರಾರು ಕೋಟಿ ರೂ ಮೇವು ಹಗರಣ: ಉಪಲೋಕಾಯುಕ್ತ ಕಿಡಿ