Select Your Language

Notifications

webdunia
webdunia
webdunia
webdunia

ರಾಜ್ಯದಲ್ಲಿ ನೂರಾರು ಕೋಟಿ ರೂ ಮೇವು ಹಗರಣ: ಉಪಲೋಕಾಯುಕ್ತ ಕಿಡಿ

ರಾಜ್ಯದಲ್ಲಿ ನೂರಾರು ಕೋಟಿ ರೂ ಮೇವು ಹಗರಣ: ಉಪಲೋಕಾಯುಕ್ತ ಕಿಡಿ
ಬೆಂಗಳೂರು , ಶನಿವಾರ, 17 ಜೂನ್ 2017 (14:08 IST)
ಗೋಶಾಲೆಗಳಿಗೆ ಮೇವು ಖರೀದಿಸುವ ಕುರಿತಂತೆ ತುಮಕೂರು ಜಿಲ್ಲೆಯೊಂದರಲ್ಲಿಯೇ 22 ಕೋಟಿ ರೂ ಮೇವು ಹಗರಣ ನಡೆದಿದೆ ಎಂದು ಉಪಲೋಕಾಯುಕ್ತ ಸುಭಾಷ್ ಬಿ.ಆಡಿ ತಿಳಿಸಿದ್ದಾರೆ.
 
ರಾಜ್ಯದ 135 ತಾಲೂಕುಗಳಲ್ಲಿ ಮೇವು ಹಗರಣ ನಡೆದಿರುವ ಸಾಧ್ಯತೆಗಳಿದ್ದು 127 ಅಧಿಕಾರಿಗಳಿಗೆ ನೋಟಿಸ್ ಜಾರಿ  ಮಾಡಲಾಗಿದೆ ಎಂದು ತಿಳಿಸಿದ್ದಾರೆ.
 
ಸರಕಾರ ಸೂಚಿಸಿದ ಮಾರ್ಗದರ್ಶನಗಳನ್ನು ಪಾಲಿಸದ ಅಧಿಕಾರಿಗಳು, ಗೋಶಾಲೆ ನಿರ್ಮಾಣ, ಮೇವು ಖರೀದಿ, ಖರೀದಿಸಿದ ರಸೀದಿ, ದಾಸ್ತಾನಿನಲ್ಲಿರುವ ಮೇವಿಗೆ ಅಜಗಜಾಂತರ ವ್ಯತ್ಯಾಸ ಕಂಡು ಬಂದಿದೆ ಎಂದು ತಿಳಿಸಿದ್ದಾರೆ.
 
ಉಪಲೋಕಾಯುಕ್ತ ಸುಭಾಷ್ ಬಿ.ಆಡಿ ಭ್ರಷ್ಟ ಅಧಿಕಾರಿಗಳ ಬಣ್ಣ ಬಯಲು ಮಾಡಿದ್ದು, ಅಕ್ರಮವೆಸಗಿದ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಭ್ರಷ್ಟ ಅಧಿಕಾರಿಗಳ ವಿರುದ್ಧ ವರದಿ ಸಿದ್ದಪಡಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ರವಾನಿಸಿದ್ದಾರೆ  ಎಂದು ಮೂಲಗಳು ತಿಳಿಸಿವೆ.  
 
ವೆಬ್ ದುನಿಯಾ ಫ್ಯಾಂಟಸಿ ಕ್ರಿಕೆಟ್ ಲೀಗ್: ಆಡಿ 2.5 ಲಕ್ಷ ರೂ. ಮೌಲ್ಯದ ಬಹುಮಾನ ಗೆಲ್ಲಿ.. ವೆಬ್ ದುನಿಯಾ ಫ್ಯಾಂಟಸಿ ಲೀಗ್`ನಲ್ಲಿ ಭಾಗವಹಿಸಲು ಈ ಲಿಂಕ್ ಕ್ಲಿಕ್ ಮಾಡಿ..
 
http://kannada.fantasycricket.webdunia.com/

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಸಚಿವ ಸಂಪುಟ ವಿಸ್ತರಣೆಗೆ ಸಿಎಂ ಕಸರತ್ತು: ಆರಂಭವಾದ ಆಕಾಂಕ್ಷಿಗಳ ಲಾಬಿ