ಸ್ಮೃತಿ ಇರಾನಿ ಬೆಂಬಲಿಗನ ಹತ್ಯೆ

Webdunia
ಭಾನುವಾರ, 26 ಮೇ 2019 (12:36 IST)
ಅಮೇಠಿ : ಉತ್ತರ ಪ್ರದೇಶದ ಅಮೇಠಿ ಕ್ಷೇತ್ರದ ನೂತನ ಸಂಸದೆಯಾಗಿ ಆಯ್ಕೆಯಾಗಿರುವ  ಬಿಜೆಪಿ ಅಭ್ಯರ್ಥಿ ಸ್ಮೃತಿ ಇರಾನಿ ಬೆಂಬಲಿಗನನ್ನು ಗುಂಡಿಟ್ಟು ಹತ್ಯೆ ಮಾಡಲಾಗಿದೆ. ಬರೌಲಿಯಾ ಗ್ರಾಮದಲ್ಲಿ ಈ ದುರ್ಘಟನೆ ನಡೆದಿದ್ದು ಸಿಂಗ್ ನಿವಾಸಕ್ಕೆ ನುಗ್ಗಿದ ಮೂವರು ದುಷ್ಕರ್ಮಿಗಳು ಗುಂಡಿಕ್ಕಿ ಪರಾರಿಯಾಗಿದ್ದಾರೆ.



ಸುರೇಂದ್ರ ಸಿಂಗ್ ಹತ್ಯೆಯಾದ ಬಿಜೆಪಿ ಮುಖಂಡರಾಗಿದ್ದು, ಶನಿವಾರ ತಡ ರಾತ್ರಿ ಘಟನೆ ನಡೆದಿದೆ. ಕೆಲ ದುಷ್ಕರ್ಮಿಗಳು ಸುರೇಂದ್ರ ಅವರ ಮನೆಯ ಬಳಿಯೇ ಗುಂಡಿನ ದಾಳಿ ನಡೆಸಿದ್ದು, ತಕ್ಷಣ ಅವರನ್ನು ಲಖನೌನ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಉಳಿಸಿಕೊಳ್ಳಲಾಗಲಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

 
ಮೃತರು ಗ್ರಾಮದ ಮಾಜಿ ಮುಖ್ಯಸ್ಥರೂ ಆಗಿದ್ದು, ಇರಾನಿಯವರಿಗೆ ಬಹಳ ಆಪ್ತರಾಗಿದ್ದರು ಎಂದು ತಿಳಿದು ಬಂದಿದೆ.
ಆದರೆ ಹತ್ಯೆ ಮಾಡಲು ಕಾರಣ ಏನೆಂಬುವುದು ತಿಳಿದು ಬಂದಿಲ್ಲ. ರಾಜಕೀಯ ವೈಷಮ್ಯದ ಹಿನ್ನೆಲೆಯಲ್ಲಿಯೇ ಕೊಲೆ ಮಾಡಿರುವ ಶಂಕೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.


ಸುರೇಂದ್ರ ಹತ್ಯೆ ಹಿನ್ನೆಲೆಯಲ್ಲಿ ಅವರ  ಕುಟುಂಬವನ್ನು ಸಂಜೆ ವೇಳೆಗೆ  ಸ್ಮೃತಿ ಇರಾನಿ ಭೇಟಿ ಮಾಡಲಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಸಿಎಂ ಜೋಸೆಫ್‌ ವಿಜಯ್ ವಿರುದ್ಧ ನಾಲಿಗೆ ಹರಿಬಿಟ್ಟ ಡಿಎಂಕೆ ಶಾಸಕ ಜಿ.ಆರ್. ಮಾರ್ಕಂಡಿಯನ್ ಅರೆಸ್ಟ್‌

50 ಬಾರಿ ಪ್ರಯತ್ನಿಸಿದರೂ ಸಿಗದ ಸರ್ಕಾರಿ ಕೆಲಸ: ರಾಜ್ಯಪಾಲರಿಂದ ಚಿನ್ನದ ಪದಕ ಪಡೆದಿದ್ದ ಯುವಕ ಸಾವಿಗೆ ಶರಣು

ಜೈಲಿನಲ್ಲಿರುವ ಪ್ರಜ್ವಲ್ ರೇವಣ್ಣ ಯಾಕೆ ಅಜ್ಜಿ ಚನ್ನಮ್ಮನ ಅಂತ್ಯಸಂಸ್ಕಾರಕ್ಕೆ ಬರಲಿಲ್ಲ: ಇವರೇ ಕಾರಣವಂತೆ

ಉಪವಾಸ ಕೈಬಿಡಲು ಮೂರು ಷರತ್ತುಗಳನ್ನು ಹಾಕಿದ ಸೋನಮ್ ವಾಂಗ್ಚುಕ್

ಕ್ಯಾಬ್ ನಲ್ಲಿ ಯುವ ಜೋಡಿಯ ಖುಲ್ಲಾಂ ಖುಲ್ಲಾಂ ಚೆಲ್ಲಾಟ: ಚಾಲಕ ಮಾಡಿದ ಕೆಲಸಕ್ಕೆ ನೆಟ್ಟಿಗರ ಶಹಬ್ಬಾಶ್ Video

ಮುಂದಿನ ಸುದ್ದಿ
Show comments