Webdunia - Bharat's app for daily news and videos

Install App

ಮನದಾಳವನ್ನು ಬಿಚ್ಚಿಟ್ಟ ಸಂಸದೆ ಸ್ಮತಿ ಇರಾನಿ

Webdunia
ಬುಧವಾರ, 8 ನವೆಂಬರ್ 2023 (09:53 IST)
48 ವರ್ಷದ ನಟಿ ಪರಿವರ್ತಿತ ರಾಜಕಾರಣಿ 2000ನೇ ದಶಕದಲ್ಲಿ ಏಕ್ತಾ ಕಪೂರ್ ನಿರ್ಮಾಣದ ದೂರದರ್ಶನ ಧಾರಾವಾಹಿ "ಕ್ಯುಂಕಿ ಸಾಸ್ ಭಿ ಕಭೀ ಬಹೂ ಥಿ" ನಲ್ಲಿ 'ತುಳಸಿ' ಎಂಬ ಪಾತ್ರ ನಿರ್ವಹಿಸಿ ಮನೆಮಾತಾಗಿದ್ದರು.  ಶೀಘ್ರದಲ್ಲೇ ಬಿಡುಗಡೆ ಭಾಗ್ಯ ಕಾಣಲಿರುವ ಅಭಿಷೇಕ್ ಬಚ್ಚನ್ ಅಭಿನಯದ "ಆಲ್ ಇಸ್ ವೆಲ್" ಚಿತ್ರದಲ್ಲಿ ಅವರು ಕಾಣಿಸಿಕೊಂಡಿದ್ದಾರೆ.
 
ಕಿರುತೆರೆಯಲ್ಲಿ ನಟಿಯಾಗಿ ಜನಪ್ರಿಯತೆಯ ಶಿಖರಕ್ಕೆ ಏರಿದ್ದ ಕೇಂದ್ರ ಸಚಿವೆ ಸ್ಮೃತಿ ಇರಾನಿ, ಸಂಸದೆಯಾಗಿ ತಮ್ಮ ಜವಾಬ್ದಾರಿಗಳನ್ನು ಗಮನದಲ್ಲಿಟ್ಟುಕೊಂಡು ನಟನೆಗೆ ವಿದಾಯ ಹೇಳಿರುವುದಾಗಿ ಹೇಳಿದ್ದಾರೆ.
 
ನಾನು ರಾಜಕೀಯಕ್ಕೆ ಬಂದು ಸಂಸದೆ ಎನಿಸಿಕೊಂಡ ತರುವಾಯ ನಟನೆಯ ವೃತ್ತಿಯನ್ನು ತ್ಯಜಿಸಿದೆ. ರಾಜಕೀಯಕ್ಕೆ ಹೆಚ್ಚಿನ ಕೊಡುಗೆಗಳನ್ನು ನೀಡಬಯಸಿದರೆ ನೀವದಕ್ಕೆ,ಹೆಚ್ಚಿನ ಸಮಯ ನೀಡಬೇಕಾಗುತ್ತದೆ ಎಂದು ಸಚಿವೆ ಅಭಿಪ್ರಾಯ ಪಟ್ಟಿದ್ದಾರೆ.
 
ಸಚಿವರಾಗುವ ಮೊದಲು ಈ ಚಿತ್ರವನ್ನು ಒಪ್ಪಿಕೊಂಡಿದ್ದಾಗಿ ಅವರು ಸ್ಪಷ್ಟಪಡಿಸಿದ್ದಾರೆ. ಆದರೆ ಅದರ ಪ್ರಚಾರಕ್ಕಾಗಿ ಯಾವುದೇ ಸಮಯವನ್ನು ಇಡಲಾಗುತ್ತಿಲ್ಲ ಎಂಬ ವಿಷಾದ ಅವರದು. ಇದು ಹೊಸ ಚಿತ್ರ ಅಲ್ಲ . ನನಗೆ ಸಮಯವಿದ್ದಾಗ ಬೇರೆ ಯಾರೂ ಪ್ರಚಾರಕ್ಕೆ ಬರಲು ಸಿದ್ಧರಿರಲಿಲ್ಲ. ಮತ್ತೀಗ ದುರದೃಷ್ಟವಶಾತ್ ಜತೆಯಾಗಿ ಪ್ರಮೋಶನ್‌ ನಡೆಸಲು ಸಮಯ ಹೊಂದಾಣಿಕೆಯಾಗುತ್ತಿಲ್ಲ ಎಂದು ಅವರು ಹೇಳಿದ್ದಾರೆ.
 
ಅಮೇಥಿಯಿಂದ ಗೆದ್ದು ಸಂಸತ್ ಪ್ರವೇಶಿಸಿರುವ ಇರಾನಿ, " ನನಗೆ ಸಮಯವನ್ನು ಹೊಂದಾಣಿಕೆ ಮಾಡಿಕೊಳ್ಳುವುದು ಕಠಿಣ ಎಂಬುದನ್ನು ಅರ್ಥ ಮಾಡಿಕೊಂಡಿರುವ ಅಭಿಷೇಕ್ ಬಗ್ಗೆ ನನಗೆ ಹೆಮ್ಮೆ ಎನಿಸುತ್ತಿದೆ . ಪ್ರಸ್ತುತ, ನನಗೆ ಸಮಯ ಇಲ್ಲ," ಎಂದು ಹಗುರವಾದ ಧಾಟಿಯಲ್ಲಿ ಹೇಳಿದರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments