Webdunia - Bharat's app for daily news and videos

Install App

‘ಸರ್.. ನಮ್ ಹುಡ್ಗ ಫೋನ್ ರಿಸೀವ್ ಮಾಡ್ತಿಲ್ಲ’100ಗೆ ಕಾಲ್ ಮಾಡಿದ ಪ್ರಿಯತಮೆ!

Webdunia
ಶನಿವಾರ, 20 ನವೆಂಬರ್ 2021 (12:01 IST)
ಪ್ರೀತಿಸಿದವರು ನಮ್ಮನ್ನು ನಿರ್ಲಕ್ಷಿಸಿದರೆ ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ನಮ್ಮ ಮಾತು ಕೇಳದಿದ್ದಾಗ, ನಾವು ಬೇಡ ಎಂದಿದ್ದನ್ನು ಮಾಡಿದಾಗ ಆಗುವ ನೋವು ಹೇಳತೀರದು.
ಯಾರ ಬಳಿಯೂ ಹೇಳಿಕೊಳ್ಳಲಾಗದ ನೋವು ಅದು. ಆದರೆ ಇಲ್ಲೊಬ್ಬ ಯುವತಿ ತನ್ನ ಬಾಯ್ಫ್ರೆಂಡ್ ಫೋನ್ ತೆಗೆಯದಿದ್ದಕ್ಕೆ ಏನ್ ಮಾಡಿದ್ದಾಳೆ ಗೊತ್ತಾ? ಆಕೆ ಮಾಡಿರುವುದನ್ನು ಕೇಳಿದರೆ ಮೊದಲಿಗೆ ನಿಮಗೆ ತಿಳಿಯದ ಹಾಗೇ ನಿಮ್ಮ ಮುಖದಲ್ಲಿ ನಗು  ಮೂಡಿರುತ್ತೆ. ನಂತರ ಆಕೆ ಹಾಗೇ ಮಾಡಲು ಏನು ಕಾರಣ ಅಂತ ಹುಡುಕುತ್ತಿರ. ಹೌದು, ಪ್ರಿಯತಮ ಫೋನ್ ತೆಗೆಯದಿದ್ದಕ್ಕೆ ಪ್ರೇಯಸಿಯೊಬ್ಬಳು ಪೊಲೀಸರಿಗೆ ಕರೆ ಮಾಡಿದ್ದಾಳೆ.
ಪ್ರಿಯಕರ ತನ್ನೊಂದಿಗೆ ಮಾತನಾಡುತ್ತಿಲ್ಲ ಎಂದು  ಪೊಲೀಸರನ್ನು ಸಂಪರ್ಕಿಸಿರುವ ವಿಚಿತ್ರ ಪ್ರಕರಣ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಯುವತಿಯೊಬ್ಬಳು ಯುವಕನನ್ನು ತುಂಬಾ ವರ್ಷಗಳಿಂದ ಪ್ರೀತಿ ಮಾಡಿದ್ದಳು. ಇಬ್ಬರು ಅನೋನ್ಯವಾಗಿದ್ದರು. ಆದರೆ ಯುವಕನ ಹುಟ್ಟುಹಬ್ಬದ ವೇಳೆ ಸ್ವಲ್ಪ ಜಗಳ ವಾಗಿತ್ತು. ಮಾತನಾಡುವುದನ್ನು ಬಿಟ್ಟಿದ್ದರು. ಯುವತಿ ಎಷ್ಟೇ ಬಾರಿ ಕರೆ ಮಾಡಿದರು, ಪ್ರಿಯಕರ ರಿಸೀವ್ ಮಾಡುತ್ತಿರಲಿಲ್ಲ. ಇದರಿಂದ ಬೇಸರಗೊಂಡ ನೇರ 100ಗೆ ಕರೆ ಮಾಡಿ ತನ್ನ ಕಷ್ಟವನ್ನು ಹೇಳಿಕೊಂಡಿದ್ದಾಳೆ. ಇದನ್ನು ಕೇಳಿದ ಪೊಲೀಸರು ಮೊದಲು ಕಕ್ಕಾಬಿಕ್ಕಿಯಾಗಿದ್ದರು. ಬಳಿಕ ಪೊಲೀಸರು ಮಾಡಿದ ಈ ಕೆಲಸ ನಿಮಗೆ ತಿಳಿದರೆ ಶಾಕ್ ಆಗ್ತೀರಾ.
ಪ್ರಿಯಕರ ಫೋನ್ ರಿಸೀವ್ ಮಾಡುತ್ತಿಲ್ಲ ಅಂತ ಪೊಲೀಸರಿಗೆ ಯುವತಿ ಕರೆ ಮಾಡಿದ್ದಾಳೆ. ಕೂಡಲೇ ಆಕೆಯನ್ನು ಪೊಲೀಸ್ ಠಾಣೆಗೆ ಬರುವಂತೆ ಪೊಲೀಸರು ಸೂಚಿಸಿದ್ದಾರೆ. ಠಾಣೆಗೆ ಬಂದ ಯುವತಿ ನಡೆದಿದ್ದೆಲ್ಲ ಪೊಲೀಸರ ಬಳಿ ಹೇಳಿಕೊಂಡಿದ್ದಾಳೆ. ಬಳಿಕ ಪೊಲೀಸರೆ ಆ ಯುವಕನಿಗೆ ಕರೆ ಮಾಡಿದ್ದಾರೆ. ಮೊದಲಿಗೆ ಪೊಲೀಸರ ಕರೆಯನ್ನು ಯುವಕ ರಿಸೀವ್ ಮಾಡಿಲ್ಲ. ಮತ್ತೆ ಮತ್ತೆ ಕಾಲ್ ಮಾಡಿದ ಬಳಿಕ ರಿಸೀವ್ ಮಾಡಿದ್ದಾನೆ. ರಾಜಿ ಮಾಡಿಸಲು ಪೊಲೀಸ್ ಠಾಣೆಗೆ ಕರೆಸಿದ್ದಾರೆ. ಬಳಿಕ ಯುವತಿಯ ಕುಟುಂಬಸ್ಥರ ಒಪ್ಪಿಗೆ ಪಡೆದು ಅವರಿಗೆ ಮದುವೆ ಮಾಡಿಸಿದ್ದಾರೆ.

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments