Publish Date: Fri, 26 Jun 2026 (18:28 IST)
Updated Date: Fri, 26 Jun 2026 (18:36 IST)
ಪ್ರೀನರ್ಸರಿ ಸ್ಕೂಲ್‌ನಲ್ಲಿ ಕೇರ್ ಟೇಕರ್ ಇಲ್ಲದೆ ವೇಳೆ ಮಗುವಿನ ಮೇಲೆ ಮತ್ತೊಂದು ಮಗು 10ನಿಮಿಷಗಳ ಕಾಲ ನಿರಂತರ ಹೊಡೆದು ಹಲ್ಲೆ ನಡೆಸಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಈ ಘಟನೆ ಮಹಾರಾಷ್ಟ್ರದಲ್ಲಿ ವರದಿಯಾಗಿದೆ. ಕ್ಲಾಸ್ ರೂಂನಲ್ಲಿ ಯಾರೊಬ್ಬರು ಆರೈಕೆದಾರರು ಇಲ್ಲದ ವೇಳೆ ಒಬ್ಬ ಪುಟ್ಟ ಮಗು ಇನ್ನೊಬ್ಬ ಮಗುವಿನ ಮೇಲೆ 10 ನಿಮಿಷಗಳ ಕಾಲ ಕ್ರೂರವಾಗಿ ಹಲ್ಲೆ ನಡೆಸಿದೆ. ನೋವಿನಿಂದ ಮಗು ಚೀರಾಡಿ ಅಳುತ್ತಿದ್ದರು, ಯಾರಿಗೂ ಕೇಳಿಸಲಿಲ್ಲ.
ಈ ವಿಡಿಯೋವನ್ನು ನೋಡಿದಾಗ ಡೇ ಕೇರ್, ಪ್ರೀನರ್ಸರಿ, ಎಲ್‌ಕೆಜಿ, ಯುಕೆಜಿ ನಮ್ಮ ಮಕ್ಕಳು ಎಷ್ಟು ಸುರಕ್ಷಿತವಾಗಿದ್ದಾರೆಯೇ ಎಂದು ಪ್ರಶ್ನೆಯನ್ನು ಹುಟ್ಟುಹಾಕುತ್ತದೆ. ಆದ್ದರಿಂದ ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸುವಾಗ ಮಕ್ಕಳ ಸುರಕ್ಷತೆ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು.
About Writer
ಸಂಪ್ರಿಯ
ಕನ್ನಡ ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷದಲ್ಲಿ ಬೇರೆ ಬೇರೆ ಸಂಸ್ಥೆಗಳಲ್ಲಿ ರಿಪೋರ್ಟರ್ ಆಗಿ, ಸಬ್ ಎಡಿಟರ್ ಆಗಿ, ಇದೀಗ ಕಂಟೆಂಟ್ ರೈಟರ್ ಆಗಿ ವೆಬ್ದುನಿಯಾದಲ್ಲಿ ಕೆಲಸ. ಆಳ್ವಾಸ್ ಕಾಲೇಜಿನಲ್ಲಿ ಸಮೂಹ ಸಂವಹನ ಮತ್ತು ಪತ್ರಿಕೋಧ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು 2016ನೇ ಸಾಲಿನಲ್ಲಿ ಪಡೆದಿರುತ್ತೇನೆ. ಮನರಂಜನೆ, ಲೈಫ್ಸ್ಟೈಲ್, ರಾಜಕೀಯ ಸುದ್ದಿಗಳ ಬಗ್ಗೆ ವಿಶೇಷ ಆಸಕ್ತಿ. ....
ಮತ್ತಷ್ಟು ಓದಿ