ಹಿಜ್ಬುಲ್ ಮುಜಾಹುದ್ದೀನ್ ಭಯೋತ್ಪಾದಕರು ದಕ್ಷಿಣ ಕಾಶ್ಮೀರದ ಕಾಡುಗಳಲ್ಲಿ ಸೇನಾ ಸಮವಸ್ತ್ರ ಧರಿಸಿ ಅಲೆಯುತ್ತಿರುವ ದೃಶ್ಯಗಳನ್ನು ವಿಡಿಯೊವೊಂದು ಬಹಿರಂಗ ಮಾಡಿದೆ. ಜಮ್ಮು ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ದಟ್ಟಡವಿ ಪ್ರದೇಶಗಳಲ್ಲಿ ಈ ಭಯೋತ್ಪಾದಕರು ಸೇನಾ ಸಮವಸ್ತ್ರದೊಂದಿಗೆ ತಿರುಗಾಡುತ್ತಿರುವ ಚಿತ್ರವನ್ನು ಮಾಧ್ಯಮವೊಂದು ಬಹಿರಂಗ ಮಾಡಿದೆ.
ಎಕ -47 ಬಂದೂಕುಗಳನ್ನು ಕೈಯಲ್ಲಿ ಹಿಡಿದಿರುವ ಈ ಭಯೋತ್ಪಾದಕರು ಥೇಟ್ ಸೇನಾ ಸಿಬ್ಬಂದಿಯಂತೆ ಕಾಣುತ್ತಾರೆ. ಪ್ರಕ್ಷುಬ್ಧ ರಾಜ್ಯದಲ್ಲಿ ಇದೊಂದು ಹೊಸ ಪ್ರವೃತ್ತಿಯಾಗಿ ಪರಿಣಮಿಸಿದೆ.
ಕಾಶ್ಮೀರದಲ್ಲಿ ಸೇನಾ ಸಮವಸ್ತ್ರಗಳ ಮಾರಾಟಕ್ಕೆ ಸಂಪೂರ್ಣ ನಿಷೇಧವಿದ್ದರೂ, ಭಯೋತ್ಪಾದಕರ ಕೈಗೆ ಈ ಸಮವಸ್ತ್ರ ಸಿಕ್ಕಿದ್ದು ಕಳವಳಕಾರಿ ಸಂಗತಿಯಾಗಿದೆ.